ಕೆಂಚಾಂಬ ದೇವಸ್ಥಾನದ ಕಲ್ಯಾಣಿ ಸ್ವಚ್ಛಗೊಳಿಸಲು ಶಾಸಕ ಮಂಜು ಸಂಕಲ್ಪ

| Published : Nov 28 2024, 12:33 AM IST

ಕೆಂಚಾಂಬ ದೇವಸ್ಥಾನದ ಕಲ್ಯಾಣಿ ಸ್ವಚ್ಛಗೊಳಿಸಲು ಶಾಸಕ ಮಂಜು ಸಂಕಲ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಕಾರ್ಯಕರ್ತರೆಲ್ಲರೂ ಒಂದು ದಿನ ಶ್ರೀ ಕೆಂಚಾಂಬದೇವಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದ್ದಾರೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್. ಡಿ. ಗೋಪಾಲ್ ತಿಳಿಸಿದರು. ಶಾಸಕರು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಲ್ಯಾಣಿಯಲ್ಲಿ ಕೊಳಕು ನಿರ್ಮಾಣವಾಗಿರುವುದನ್ನು ಗಮನಿಸಿ, ಪಕ್ಷದ ಎಲ್ಲ ಕಾರ್ಯಕರ್ತರು ಒಂದು ದಿನ ಕಲ್ಯಾಣಿಯನ್ನು ಶುಚಿಗೊಳಿಸೋಣ ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಬಿಜೆಪಿ ಕಾರ್ಯಕರ್ತರೆಲ್ಲರೂ ಒಂದು ದಿನ ಶ್ರೀ ಕೆಂಚಾಂಬದೇವಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದ್ದಾರೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್. ಡಿ. ಗೋಪಾಲ್ ತಿಳಿಸಿದರು.

ಇತ್ತೀಚೆಗೆ ಶಾಸಕರು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಿ ದರ್ಶನ ಪಡೆದು ದೇವಸ್ಥಾನದ ಹಿಂಭಾಗದಲ್ಲಿರುವ ಕಲ್ಯಾಣಿಯನ್ನು ವೀಕ್ಷಿಸಿದರು. ಕಲ್ಯಾಣಿಯಲ್ಲಿ ಕೊಳಕು ನಿರ್ಮಾಣವಾಗಿರುವುದನ್ನು ಗಮನಿಸಿ, ಪಕ್ಷದ ಎಲ್ಲ ಕಾರ್ಯಕರ್ತರು ಒಂದು ದಿನ ಕಲ್ಯಾಣಿಯನ್ನು ಶುಚಿಗೊಳಿಸೋಣ ಎಂದು ಕರೆ ನೀಡಿದರು.

ಕಲ್ಯಾಣಿ ಸುತ್ತ ಯಾರೂ ಪ್ರವೇಶ ಮಾಡದಂತೆ ಭದ್ರವಾದ ತಂತಿ ಬೇಲಿಯನ್ನು ನಿರ್ಮಾಣ ಮಾಡಲು ಸಮಿತಿ ವತಿಯಿಂದ ಮನವಿ ಮಾಡಲಾಗಿದೆ. ಬೇಲಿ ನಿರ್ಮಾಣ ಮಾಡದಿದ್ದರೆ ನೀರು ಮಲಿನವಾಗುತ್ತದೆಯಲ್ಲದೆ, ಪ್ರಾಣಾಪಾಯವಾಗುವ ಸಂಭವವಿದೆ ಎಂದು ಗೋಪಾಲ್ ತಿಳಿಸಿದ್ದಾರೆ.