ಕೊಡಗು ಜಿಲ್ಲೆಗೆ ಕೆಲಸಕ್ಕಾಗಮಿಸುವ ಅನ್ಯ ರಾಜ್ಯದ ಕಾರ್ಮಿಕರ ಚಟುವಟಿಕೆಗಳ ಬಗ್ಗೆ ಶಾಸಕ ಡಾ. ಮಂತರ್‌ಗೌಡ ಗಮನ ಸೆಳೆದಿದ್ದು ಗಡಿಪಾರಿಗೆ ಆಗ್ರಹಿಸಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲೆಗೆ ಕೆಲಸಕ್ಕಾಗಿ ಆಗಮಿಸುವ ಅನ್ಯ ರಾಜ್ಯದ ಕಾರ್ಮಿಕರ ಚಟುವಟಿಕೆಗಳ ಬಗ್ಗೆ ಶಾಸಕರಾದ ಡಾ. ಮಂತರ್ ಗೌಡ ಗಮನ ಸೆಳೆದಿದ್ದು, ಗಡಿಪಾರಿಗೆ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲಸಕ್ಕಾಗಿ ಆಗಮಿಸುವ ಅನ್ಯ ರಾಜ್ಯಗಳ ವಲಸೆ ಕಾರ್ಮಿಕರಿಂದ ಜಿಲ್ಲೆಯಲ್ಲಿ ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ಬಯಸಿ ಕರ್ನಾಟಕ ರಾಜ್ಯ ಸರ್ಕಾರದ ಗೃಹ ಸಚಿವರ ಗಮನ ಸೆಳೆದರು. ಈ ಸಂದರ್ಭ ಗೃಹ ಸಚಿವರು ಸದನಕ್ಕೆ ಉತ್ತರ ನೀಡಿದರು.----------------------------------
ರಾಷ್ಟ್ರಮಟ್ಟದ ಜಾದೂ ಸ್ಪರ್ಧೆಯಲ್ಲಿ ರಾಜೇಶ್‌ಗೆ 4ನೇ ಸ್ಥಾನಸಿದ್ದಾಪುರ : ಕೇರಳದ ಕಟ್ಟಪನದಲ್ಲಿ ಡಿ. 14 ಮತ್ತು15 ರಂದು ನಡೆದ ರಾಷ್ಟ್ರ ಮಟ್ಟದ ಜಾದೂ ಸ್ಪರ್ಧೆಯಲ್ಲಿ ಕೊಡಗಿನ ಎನ್. ಆರ್ ರಾಜೇಶ್ ಜಾದೂಗಾರ 4ನೇ ಸ್ಥಾನ ಪಡೆದಿದ್ದಾರೆ.ರಾಜ್ಯ ಪ್ರಶಸ್ತಿ ವಿಜೇತನು ಆದ ರಾಜೇಶ್ ವಿರಾಜಪೇಟೆ ತಾಲೂಕು ಅಮ್ಮತ್ತಿಯ ನಿವಾಸಿಯಾಗಿದ್ದು ಸಮಾಜ ಸೇವೆಯೊಂದಿಗೆ ಇವರು 2012ರಲ್ಲಿ ವಿರಾಜಪೇಟೆಯಿಂದ ಸಿದ್ದಾಪುರದವರೆಗೆ ಒಟ್ಟು 17ಕಿ. ಮಿ ಕಣ್ಣಿಗೆ ಬಟ್ಟೆಕಟ್ಟಿ ಬೈಕ್ ಚಾಲನೆ ಮಾಡುವ ಮೂಲಕ ಹೆಲ್ಮೆಟ್ ಕಡ್ಡಾಯದ ಬಗೆ ಜಾಗೃತಿ ಮೂಡಿಸಿ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದರು.
ದೇಶದ ವಿವಿಧ ರಾಜ್ಯಗಳಿಂದ ಒಟ್ಟು 118 ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಕೊಡಗಿನ ಈ ಜಾದೂಗಾರ ನಾಲ್ಕನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.