ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ವರಂಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೊರಂಟೆಬೈಲು ಮಲೆಕುಡಿಯ ಕುಟುಂಬಗಳಿರುವ ಮನೆಗಳಿಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಇತ್ತೀಚೆಗೆ ಭೇಟಿ ನೀಡಿದರು. ಶಾಸಕ ಸುನಿಲ್ ಕುಮಾರ್ ಮನವಿ ಮೇರೆಗೆ ಕುದುರೆಮುಖ ವನ್ಯಜೀವಿ ವಿಭಾಗ ಪೆಟ್ರೋಲಿಂಗ್ ಪಾಥ್ ನಿರ್ಮಿಸಿ ಮೊರಂಟೆಬೈಲು ಮಲೆಕುಡಿಯ ಕುಟುಂಬಗಳಿಗೆ ಸಹಾಯ ಮಾಡಿತ್ತು.ಈ ಪ್ರದೇಶದಲ್ಲಿ ವಾಸು ಮಲೆಕುಡಿಯ ಕುಟುಂಬ ಸೇರಿದಂತೆ ಒಟ್ಟು ಮೂರು ಕುಟುಂಬಗಳು ವಾಸಿಸುತ್ತಿವೆ.
ಹೆಬ್ರಿ ತಾಲೂಕಿನ ಮುನಿಯಾಲು ಗ್ರಾ.ಪಂ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶವಾದ ಮುಟ್ಲುಪಾಡಿಯಿಂದ ಸುಮಾರು ನಾಲ್ಕು ಮೀ ದೂರದಲ್ಲಿ ದಟ್ಟಕಾಡಿನ ನಡುವೆ ಮೊರಂಟೆಬೈಲು ಎಂಬ ಪ್ರದೇಶವಿದೆ. ಶಾಲೆಗೆ ಹೋಗಬೇಕೆಂದರೆ ನಿತ್ಯ ಎಂಟು ಕಿ.ಮೀ. ಸಾಗಿಯೆ ಮುಟ್ಲುಪಾಡಿ ಶಾಲೆಗೆ ಬರಬೇಕು. ನಾಲ್ವರು ವಿದ್ಯಾರ್ಥಿಗಳು ಶಾಲೆಗೆ ಹೋಗುತಿದ್ದಾರೆ. ಕಾಡುಪ್ರಾಣಿಗಳ ಉಪಟಳ ಸೇರಿದಂತೆ ಓರ್ವ ಅನಾರೋಗ್ಯ ಅಂಗವೈಕಲ್ಯ ಪೀಡಿತ ಯುವತಿಯೂ ಇದ್ದಾಳೆ. ಯುವತಿಯ ತಂದೆ ರಾಜು ಮಲೆಕುಡಿಯ ಅನಾರೋಗ್ಯದಿಂದ ಬಳಲುತಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರಬೈಕಾದ ಪರಿಸ್ಥಿ ನಿರ್ಮಾಣವಾಗಿತ್ತು.ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ವಿ. ಸುನಿಲ್ ಕುಮಾರ್ ಅವರ ಮನವಿ ಮೇರೆಗೆ ರಸ್ತೆಯ ನಿರ್ಮಾಣದ ವಿಚಾರವು ಪ್ರಸ್ತಾವನೆ ಬಂದಿತ್ತು. ತಕ್ಷಣ ಸ್ಪಂದಿಸಿದ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಂ ಬಾಬು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲಿಸಿ ಸುಮಾರು 4 ಕಿ.ಮೀ. ಉದ್ದದ ಗಸ್ತು ರಸ್ತೆ ನಿರ್ಮಿಸಿದ್ದಾರೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅನುಕೂಲವಾದಂತಾಗಿದೆ.
ಶತಮಾನದ ಹೋರಾಟ:ವಾಸು ಮಲೆಕುಡಿಯ ಕುಟುಂಬದ ಶತಮಾನದ ಹೋರಾಟವಾಗಿದೆ. ಈ ರಸ್ತೆ ನಿರ್ಮಾಣ ಮಾಡಲು ಗ್ರಾಮಸಭೆ, ತಾಲೂಕು ಮಟ್ಟದ ಅಹವಾಲು ಸಭೆಗಳಲ್ಲಿ ಅನೇಕ ಬಾರಿ ಮನವಿ ನೀಡಿದ್ದರು ಫಲಪ್ರದ ವಾಗಿರಲಿಲ್ಲ. ಆದರೆ ಬಳಿಕ ವನ್ಯಜೀವಿ ವಿಭಾಗ ವಾದ ಬಳಿಕವೂ ರಸ್ತೆ ನಿರ್ಮಾಣ ದ ಕನಸಾಗಿಯೆ ಉಳಿಯಿತು. ಇಲ್ಲಿ ನಕ್ಸಲ್ ಚಟುವಟಿಕೆ ಅರಂಭವಾದ ಬಳಿಕ ರಸ್ತೆ ನಿರ್ಮಾಣ ಮೂಲೆಗುಂಪಾಯಿತು.
ಇತ್ತೀಚೆಗೆ ನಕ್ಸಲ್ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡ ಬಳಿಕ ಅರಣ್ಯ ಪ್ರದೇಶದಲ್ಲಿ ಗಸ್ತು ಸಂಚಾರಕ್ಕೆ ವಾಹನಗಳು ಸಾಗಲು ಅನುಕೂಲವಾದಂತಾಗಿದೆ. ಅದರೊಂದಿಗೆ ಮಲೆಕುಡಿಯ ಕುಟುಂಬಗಳಿಗೆ ಆಧಾರವಾದಂತಾಗಿದೆ..ಭೇಟಿ ಸಂದರ್ಭ ಸುನಿಲ್ ಕುಮಾರ್ ಮಲೆಕುಡಿಯ ಕುಟುಂಬಗಳ ಜೊತೆ ತಿಂಡಿ ಸವಿದರು.
ಶಾಸಕರ ಜೊತೆ ವಾಸು ಮಲೆಕುಡಿಯ ಕುಟುಂಬಿಕರು, ಸ್ಥಳೀಯರಾದ ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ, ಸುದೀಪ್ ಅಜಿಲ, ಕುದುರೆ ಮುಖ ವನ್ಯಜೀವಿ ವಿಭಾಗದ ಅಭಿಲಾಶ್ ಯಮನೂರು ಮತ್ತಿತರರಿದ್ದರು.