ಸಾರಾಂಶ
ಕನ್ನಡ ಪ್ರಭವಾರ್ತೆ,ಮಾಲೂರು
ಸ್ವಪಕ್ಷದ ಶಾಸಕರಾಗಿ ನನ್ನ ಮೇಲೆ ಮಾಡುತ್ತಿರುವ ಅಪಾದನೆಗಳು ಸತ್ಯಕ್ಕೆ ದೂರವಾಗಿದ್ದು, ಆರೋಪ ಮಾಡಿದವರಲ್ಲಿ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ ಎಂದು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.ಅವರು ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಕೋಚಿಮುಲ್ ಆಡಳಿತದಲ್ಲಿ ಭ್ರಷ್ಠಚಾರ ನಡೆದಿದೆ ಎನ್ನುವ ಅಪಾದನೆ ಮಾಡಿದ್ದಾರೆ. ಇದರಿಂದ ರೈತರಿಗೆ ತಪ್ಪು ಸಂದೇಶ ಹೂಗದಿರಲಿ ಎಂಬ ಉದ್ದೇಶದಿಂದ ಅವರು ಮಾಡಿರುವ ಆರೋಪಗಳಿಗೆ ಅಂಕಿ ಅಂಶ ಸಹಿತ ಉತ್ತರ ನೀಡುತ್ತಿರುವುದಾಗಿ ಹೇಳಿದರು.
ಎಂ.ವಿ.ಕೆ.ಗೋಲ್ಡನ್ ಡೇರಿ1987 ರಲ್ಲಿ ಬೆಂಗಳೂರು ಡೇರಿಯಿಂದ ವಿಭಜನೆ ವೇಳೆಯಲ್ಲಿ ಸರ್ಕಾರ ನೀಡಿದ್ದ ೨೯ ಎಕರೆ ಜಮೀನ ಮಧ್ಯಭಾಗ ಇದ್ದ ಖಾಸಗಿ ೪ ಎಕರೆ ಜಮೀನನ್ನು ಹಾಲು ಒಕ್ಕೂಟ ಖರದೀಸಿದ್ದು, ಅಲ್ಲೇ ಎಂ.ವಿ.ಕೆ.ಗೋಲ್ಡನ್ ಡೇರಿ ನಿರ್ಮಾಣ ಮಾಡಲಾಗುತ್ತಿದೆ.ಕೋಲಾರ ಜಿಲ್ಲಾಧಿಕಾರಿ ರವಿ ಅವರು ಹಸಿರು ವೇವುಗಾಗಿ ನೀಡಿದ್ದ ೫೦ ಎಕರೆ ಜಮೀನನಲ್ಲಿ ಕಲ್ಲು ಬಂಡೆಗಳಿದ್ದ ಕಾರಣ ಹಸಿರು ವೇವುಗೆ ಜಾಗ ಉಳಿಸಿಕೊಂಡು ಅಲ್ಲಿ ಸೋಲಾರ್ ಪ್ಲಾಟ್ ನಿರ್ಮಿಸಲಾಗಿದೆ ಎಂದರು.
ಡೇರಿ ಅಧ್ಯಕ್ಷನಾಗಿ ಸಂಸ್ಥೆಯ ಕಾರನ್ನು ಉಪಯೋಗಿಸುವ ಸೌಲಭ್ಯ ಇದ್ದರೂ ನನ್ನ ಸ್ವಂತ ಕಾರನ್ನು ಬಳಸುತ್ತಿದ್ದು,ಅದಕ್ಕಾಗಿ ಸಭೆಯ ತೀರ್ಮಾನದಂತೆ ಡಿಸೇಲ್ ಗಾಗಿ ಮಾತ್ರ ಮಾಸಿಕ ೧೩೦೦೦ ದಂತೆ ಹಣ ಪಡೆಯಲಾಗಿದೆ. ಎರಡು ಬಾರಿ ಅಧ್ಯಕ್ಷನಾಗಿ ನೀಡಿದ್ದ ಆಡಳಿತದಿಂದ ರಾಜ್ಯದಲ್ಲೇ ಉತ್ತಮ ಆಡಳಿತದಲ್ಲಿ ಕೋಚಿಮುಲ್ ಒಂದನೇ ಸ್ಥಾನದಲ್ಲಿದ್ದು, ಮುಖ್ಯಮಂತ್ರಿಗಳ ಪ್ರಶಂಸೆ ಸಹ ಸಿಕ್ಕದೆ ಎಂದರು.ಶಾಸಕರಿಗೆ ಮಾಹಿತಿ ಕೊರತೆ
ನನ್ನ ಸಾಧನೆ ಸ್ಪಟಿಕದಂತೆ ಕಾಣುತ್ತಿರುವಾಗ ನಾಲ್ಕು ಬಾರಿ ಶಾಸಕನಾಗಿರುವ ಎಸ್.ಎನ್.ನಾರಾಯಣಸ್ವಾಮಿ ಏಕೆ ವಿರೋಧ ಪಕ್ಷದವರಂತೆ ಆರೋಪ ಮಾಡಿದರೆಂದು ಗೊತ್ತಿಲ್ಲ. ನಾನು ಮಾತ್ರ ವೈಯಕ್ತಿಕವಾಗಿ ಟೀಕೆ -ಟಿಪ್ಪನೆ ಮಾಡುವುದಿಲ್ಲ. ನನ್ನ ಮೇಲೆ ಯಾವುದೇ ರೀತಿಯ ತನಿಖೆ ಮಾಡಿದರೂ ನನಗೆ ಬೇಸರ ಇಲ್ಲ. ಅವರಿಗೆ ಮಾಹಿತಿ ಕೊರತೆ ಕಾರಣದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎನ್ನುವುದೇ ನನ್ನ ಅಭಿಪ್ರಾಯ ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ಮಧುಸೂಧನ್, ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಪುರಸಭೆ ಅಧ್ಯಕ್ಷೆ ಕೋಮಲ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ನಯೀಂ,ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬಿ.ಆರ್.ಶ್ರೀನಿವಾಸ್ ,ದರಖಾಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ,ಪುರಸಭೆ ಸದಸ್ಯ ಮುರಳಿಧರ್,ವೆಂಕಟೇಶ್,ಕಸಾಪ ಅಧ್ಯಕ್ಷ ಹನುಮಂತಯ್ಯ,ಹನುಮಂತರೆಡ್ಡಿ,ಲಿಂಗೇಶ್, ಇನ್ನಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))