ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಪ್ರಮುಖ ಜೀವನಾಡಿಯಂತಿರುವ ಮಲ್ಲಾಘಟ್ಟ ಕೆರೆ ಸಂಪೂರ್ಣವಾಗಿ ತುಂಬಿ ಕೋಡಿಯಾಗಿದೆ. ಶಾಸಕ ಎಂ.ಟಿ.ಕೃಷ್ಣಪ್ಪನವರು ಮಂಗಳವಾರ ಬೆಳಗ್ಗೆ ಕೆರೆಗೆ ತೆರಳಿ ಗಂಗಾ ತಾಯಿಗೆ ಬಾಗಿನ ಅರ್ಪಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪನವರು ಈ ಮಲ್ಲಾಘಟ್ಟ ಕೆರೆ ಮೂರ್ನಾಲ್ಕು ತಾಲೂಕಿನ ರೈತಾಪಿಗಳ ಜೀವನದಿಯಾಗಿದೆ. ಈ ಸ್ಥಳವನ್ನು ಪ್ರವಾಸಿ ಕೇಂದ್ರವನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಕೋಡಿ ಬಿದ್ದ ಸಂದರ್ಭದಲ್ಲಿ ಸಾವಿರಾರು ಮಂದಿ ಇಲ್ಲಿಯ ವೈಭವವನ್ನು ಕಾಣಲು ಆಗಮಿಸುತ್ತಾರೆ. ಈ ವೇಳೆ ಈಜಾಡುವವರು ಬಹಳ ಎಚ್ಚರಿಕೆಯಿಂದ ವರ್ತಿಸಬೇಕು. ಈ ಕೆರೆಯ ಒಳಗೆ ಬೃಹದಾಕಾರದ ಬಂಡೆಗಳು, ಚೂಪಾದ ಕಲ್ಲುಗಳು ಇವೆ. ಅಲ್ಲದೇ ಸಾಕಷ್ಟು ಹೂಳು ಇರುವುದರಿಂದ ಈಜುಗಾರರ ಜೀವಕ್ಕೆ ಮುಳುವಾಗಬಹುದು. ಆದ್ದರಿಂದ ಜನರು ಬಹಳ ಎಚ್ಚರಿಕೆಯಿಂದ ಇರಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿಕೊಂಡರು. ಈ ವೇಳೆ ಆನೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಭವ್ಯ, ಸದಸ್ಯರಾದ ಶ್ರೀನಿವಾಸ್, ರಾಮಕೃಷ್ಣ, ರಾಜಶೇಖರ್, ಬಸವರಾಜು, ಪಟ್ಟಣ ಪಂಚಾಯಿತಿ ಸದಸ್ಯರಾದ ಮಧು, ಚಿದಾನಂದ್, ಆಂಜನ್ ಕುಮಾರ್, ಸಿಇಓ ಶ್ರೀನಾಥ್ ಪ್ರಭು, ಹೇಮಾವತಿ ಇಲಾಖಾ ಎಇಇ ಶಿವಕುಮಾರ್, ಮುಖಂಡರಾದ ಹೊಸಳ್ಳಿ ದೇವರಾಜು, ತ್ಯಾಗರಾಜು, ಸೋಮೇನಹಳ್ಳಿ ಶಿವಾನಂದ್, ಮಲ್ಲಾಘಟ್ಟ ಆನಂದ್, ದೊಡ್ಡಾಘಟ್ಟ ದಯಾನಂದ್ ಸೇರಿದಂತೆ ಹಲವು ಮುಖಂಡರು ಇದ್ದರು.