ಸರ್ಕಾರಿ ಜಮೀನು ಹದ್ದುಬಸ್ತಿಗೆ ಶಾಸಕ ಪಿ.ರವಿಕುಮಾರ್ ಸೂಚನೆ

| Published : Mar 09 2025, 01:48 AM IST

ಸಾರಾಂಶ

ಕಲ್ಲಹಳ್ಳಿ ಗ್ರಾಮಸ್ಥರೊಡನೆ ಸದರಿ ಸರ್ಕಾರಿ ಜಮೀನು ವೀಕ್ಷಿಸಿದ ಶಾಸಕರು, ಸದರಿ ಜಾಗದ ಹದ್ದುಬಸ್ಸು ನಿಗದಿ ಮಾಡಿ ಒತ್ತುವರಿ ತೆರವು ಮಾಡಬೇಕು. ಮುಂದಿನ ಒಂದು ವಾರದೊಳಗೆ ಈ ಕಾರ್ಯ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮಮತಾ ಹಾಗೂ ರಾಜಸ್ವ ನಿರೀಕ್ಷಕ ಪ್ರಭು ಅವರಿಗೆ ನಿರ್ದೇಶಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕಲ್ಲಹಳ್ಳಿಯ ಸರ್ವೇ ನಂಬರ್ 391ರಿಂದ 395ರ ವರೆಗಿನ 111 ಗುಂಟೆ ಸರ್ಕಾರಿ ಜಮೀನಿನ ಸರ್ವೇ ಕಾರ್ಯ ನಡೆಸಿ ಹದ್ದುಬಸ್ತು ನಿಗದಿ ಮಾಡುವಂತೆ ತಹಸೀಲ್ದಾರ್ ಶಿವಕುಮಾರ್ ಬಿರಾದರ್ ಅವರಿಗೆ ಶಾಸಕ ಪಿ.ರವಿಕುಮಾರ್ ಸೂಚಿಸಿದರು.

ಕಲ್ಲಹಳ್ಳಿ ಗ್ರಾಮಸ್ಥರೊಡನೆ ಸದರಿ ಸರ್ಕಾರಿ ಜಮೀನು ವೀಕ್ಷಿಸಿದ ಶಾಸಕರು, ಸದರಿ ಜಾಗದ ಹದ್ದುಬಸ್ಸು ನಿಗದಿ ಮಾಡಿ ಒತ್ತುವರಿ ತೆರವು ಮಾಡಬೇಕು. ಮುಂದಿನ ಒಂದು ವಾರದೊಳಗೆ ಈ ಕಾರ್ಯ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮಮತಾ ಹಾಗೂ ರಾಜಸ್ವ ನಿರೀಕ್ಷಕ ಪ್ರಭು ಅವರಿಗೆ ನಿರ್ದೇಶಿಸಿದರು.

ಗ್ರಾಮಸ್ಥರು ಬೇಡಿಕೆಯಂತೆ ಈಗಾಗಲೇ ಮುಡಾ ವತಿಯಿಂದ 5 ಕೋಟಿ ರು. ವೆಚ್ಚದ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೆರೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಸದರಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲುದ್ದೇಶಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಕನ್ನಡ ಭವನದ ಜೊತೆಗೆ ಗ್ರಾಮಸ್ಥರ ಬೇಡಿಕೆಯಂತೆ ರೈತರ ಅನುಕೂಲಕ್ಕೆ ಕಣ ಮತ್ತು ರಸ್ತೆ ನಿರ್ಮಾಣ ಮತ್ತು ಪಶು ಆಸ್ಪತ್ರೆ ನಿರ್ಮಾಣದ ಬಗ್ಗೆ ಗ್ರಾಮಸ್ಥರ ಜೊತೆ ಚರ್ಚಿಸಿ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಹೇಳಿದರು.

ಗ್ರಾಮಸ್ಥರು ಸಹಕಾರದಲ್ಲಿ ಸಾರ್ವಜನಿಕ ಅನುಕೂನಕ್ಕೆ ಅಗತ್ಯವಾಗುವ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಹಾಗೂ ಸಂಯಮ ಅಗತ್ಯ. ಅರಳಿಕಟ್ಟೆ ನಿರ್ಮಾಣ ಮತ್ತು ಬೋರ್ ವೆಲ್ ಅಳವಡಿಕೆಗೆ ಕ್ರಮ ವಹಿಸುದಾಗಿ ಶಾಸಕರು ಭರವಸೆ ವ್ಯಕ್ತಪಡಿಸಿದರು.

ಈ ವೇಳೆ ಆರ್ ಎಪಿಸಿಎಂಎಸ್ ನಿರ್ದೇಶಕ ಕೆ.ಸಿ.ರವೀಂದ್ರ, ನಗರಸಭಾ ಸದಸ್ಯ ಟಿ.ರವಿ, ಗ್ರಾಮದ ಮುಖಂಡರಾದ ಕೆ.ಗುರುಸ್ವಾಮಿ, ಕೆ.ರಾಜು, ಕೆ.ಎಸ್.ಆನಂದ್, ಕೆ.ಜೆ.ಆನೂಪ್, ಕೆ.ಬಿ.ರಾಮು, ಕೆ.ಸಿ.ಮಂಜುನಾಥ್, ಕಾರ್ತಿಕ್ ಮತ್ತಿತರರಿದ್ದರು.