ದೊಡ್ಡಬಳ್ಳಾಪುರ: ಶಾಸಕ ಧೀರಜ್ ಮುನಿರಾಜು ಅವರು ಸೂರತ್‌ನಿಂದ ಸೀರೆ ತರಿಸಿ ವಿತರಣೆ ಮಾಡುವ ಬದಲು ನಮ್ಮ ನೇಕಾರರು ತಯಾರಿಸಿದ ಸೀರೆ ವಿತರಿಸಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಕನ್ನಡ ಪಕ್ಷದ ಮುಖಂಡ ಡಿ.ಪಿ.ಆಂಜನೇಯ ಒತ್ತಾಯಿಸಿದರು
ದೊಡ್ಡಬಳ್ಳಾಪುರ: ಶಾಸಕ ಧೀರಜ್ ಮುನಿರಾಜು ಅವರು ಸೂರತ್‌ನಿಂದ ಸೀರೆ ತರಿಸಿ ವಿತರಣೆ ಮಾಡುವ ಬದಲು ನಮ್ಮ ನೇಕಾರರು ತಯಾರಿಸಿದ ಸೀರೆ ವಿತರಿಸಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಕನ್ನಡ ಪಕ್ಷದ ಮುಖಂಡ ಡಿ.ಪಿ.ಆಂಜನೇಯ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ವರಮಹಾಲಕ್ಷ್ಮಿ ಮತ್ತು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗುಜರಾತ್ ರಾಜ್ಯದ ಸೂರತ್‌ನಿಂದ ಸೀರೆಗಳನ್ನು ತರಿಸಿ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುತ್ತಿದ್ದಾರೆ. ಸಂಕಷ್ಟದಲ್ಲಿ ನೇಕಾರರು ನೇಯುವ ಸೀರೆಗಳನ್ನು ಖರೀದಿಸಿದರೆ ತಾಲೂಕಿನ ನೇಕಾರರಿಗೆ ಅನುಕೂಲವಾಗುತ್ತಿತ್ತು. ತಾಲೂಕಿನಲ್ಲಿ 75 ರಿಂದ 80 ಸಾವಿರ ಸೀರೆಗಳನ್ನು ಬಾಗಿನ ನೀಡುತ್ತಿದ್ದಾರೆ. ಆದರೆ, ಇಲ್ಲಿನ ನೇಕಾರರ ಸೀರೆಗಳನ್ನು ಖರೀದಿ ಮಾಡಿ ಬಾಗಿನ ನೀಡಿದರೆ ಸಂಕಷ್ಟದಲ್ಲಿರುವ ನೇಕಾರರಿಗೆ ಅನುಕೂಲವಾಗುತ್ತದೆ ಎಂದರು.ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್ ಮಾತನಾಡಿ, ಸ್ಥಳೀಯ ನೇಕಾರರು ನೇಯುವ ಸೀರೆಗಳನ್ನು ಖರೀದಿಸಿದರೆ ನೇಕಾರರಿಗೆ ಆರ್ಥಿಕವಾಗಿ ನೆರವಾಗುತ್ತದೆ. ಈಗಾಗಲೇ ನೆರೆ ರಾಜ್ಯಗಳ ಸೀರೆಗಳ ಪೈಪೋಟಿ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ನೇಕಾರರು ಸಂಕಷ್ಟದಲ್ಲಿದ್ದಾರೆ. ನಾವು ನೇಕಾರರ ಪರವಾಗಿದ್ದೇವೆ ಎಂದು ಸರ್ಕಾರ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು, ಅದನ್ನು ಕೃತಿಯ ರೂಪದಲ್ಲಿ ತೋರಿಸಬೇಕು ಇನ್ನಾದರೂ ಸರ್ಕಾರ, ಹಾಲಿ, ಮಾಜಿ ಶಾಸಕರು ಸೇರಿದಂತೆ ತಾಲೂಕಿನ ಯಾವುದೇ ರಾಜಕಾರಣಿಗಳು ನಮ್ಮ ನೇಕಾರರ ಸೀರೆಗಳನ್ನು ಖರೀದಿಸಬೇಕು. ನೇಕಾರರು ತಯಾರಿಸುವ ಸೀರೆಗಳನ್ನು ಖರೀದಿ ಮಾಡಿ ಕೊಟ್ಟರೆ ಉದ್ಯಮ ಉಳಿಯುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಪಕ್ಷದ ಜಿಲ್ಲಾ ಅಧ್ಯಕ್ಷ ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ವೆಂಕಟೇಶ್, ಮುಖಂಡರಾದ ವಿ.ಪರಮೇಶ್, ರಂಗಣ್ಣ, ಮುನಿರಾಜು, ಮಹೇಶ್, ಮೂರ್ತಿ, ಸುಬ್ಬಣ್ಣ, ರಾಜು ಮುಂತಾದವರು ಹಾಜರಿದ್ದರು.19ಕೆಡಿಬಿಪಿ2-
ದೊಡ್ಡಬಳ್ಳಾಪುರದಲ್ಲಿ ಕನ್ನಡ ಪಕ್ಷದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಸಂಜೀವನಾಯಕ್, ಡಿ.ಪಿ.ಆಂಜನೇಯ ಮಾತನಾಡಿದರು.