ಹಾಸ್ಟೆಲ್ ಗಳ ಮೂಲಸೌಕರ್ಯಕ್ಕೆ ಪ್ರಥಮ ಆದ್ಯತೆ

| Published : Jul 05 2024, 12:50 AM IST

ಸಾರಾಂಶ

ನಗರದ ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣ ಸಮೀಪದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾಥಿನಿಲಯ ಹಾಗೂ ಕರಿನಂಜನಪುರ ಸಾರ್ವಜನಿಕ ಮಾದರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಚಾಮರಾಜನಗರ ಬಿ.ರಾಚಯ್ಯ ಜೋಡಿರಸ್ತೆಯಲ್ಲಿನ ವಿದ್ಯಾರ್ಥಿನಿಲಯಕ್ಕೆ ಎಂಎಸ್‌ಐಎಲ್ ಅಧ್ಯಕ್ಷ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ ನಿಲಯಗಳ ಕುಂದುಕೊರತೆ ಆಲಿಸಿದರು.

ಶಾಸಕರಿಂದ ವಿವಿಧ ಸರಕಾರಿ ಹಾಸ್ಟೆಲ್‌ ಭೇಟಿ

ಶಾಸಕ ಪುಟ್ಟರಂಗಶೆಟ್ಟಿ ಭೇಟಿ

ಮೂಲಸೌಕರ್ಯಕ್ಕೆ ಆದ್ಯತೆ ನೀಡಲು ಸೂಚನೆ

ಚಾಮರಾಜನಗರದ ವಿವಿಧ ಹಾಸ್ಟೆಲ್ ಕನ್ನಡಪ್ರಭ ವಾರ್ತೆ ಚಾಮರಾಜನಗರ ನಗರದ ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣ ಸಮೀಪದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾಥಿನಿಲಯ ಹಾಗೂ ಕರಿನಂಜನಪುರ ಸಾರ್ವಜನಿಕ ಮಾದರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಚಾಮರಾಜನಗರ ಬಿ.ರಾಚಯ್ಯ ಜೋಡಿರಸ್ತೆಯಲ್ಲಿನ ವಿದ್ಯಾರ್ಥಿನಿಲಯಕ್ಕೆ ಎಂಎಸ್‌ಐಎಲ್ ಅಧ್ಯಕ್ಷ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ ನಿಲಯಗಳ ಕುಂದುಕೊರತೆ ಆಲಿಸಿದರು. ಮೊದಲಿಗೆ ಡಿ.ದೇವರಾಜು ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಶಾಸಕರು ಕಂಪ್ಯೂಟರ್ ಕೊಠಡಿ, ಪೀಠೋಪಕರಣಗಳು, ಅಡುಗೆಕೊಠಡಿ, ಮಲಗುವ ಕೋಣೆ, ದಿನಸಿ ಉಗ್ರಾಣದ ಕೊಠಡಿ, ಊಟದಹಾಲ್, ಬೋದನಾ ಸಭಾಂಗಣ, ಹಾಸ್ಟೆಲ್ ನಿರ್ವಹಣೆಯ ಬಗ್ಗೆ ಪರಿಶೀಲಿಸಿದರು. ಜತೆಗೆ ವಿದ್ಯಾರ್ಥಿಗಳ ಬಳಿ ತೆರಳಿ ಹಾಸ್ಟೆಲ್ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುವ ಕುರಿತಂತೆ ಮಾಹಿತಿ ಪಡೆದರು. ಇದೇವೇಳೆ ಅವರು ಮಾತನಾಡಿ, ಹಾಸ್ಟೆಲ್ ಯಾವುದೇ ಸೌಲಭ್ಯ ಬೇಕಾದಲ್ಲಿ ತಮ್ಮನ್ನು ಸಂಪರ್ಕಿಸಿ ಪಡೆದುಕೊಳ್ಳಬೇಕು, ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಒದಗಿಸಬೇಕು. ಮುಖ್ಯವಾಗಿ ಹಾಸ್ಟೆಲ್ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು ಎಂದು ಹಾಸ್ಟೆಲ್‌ಗಳ ವಿಸ್ತರಣಾಧಿಕಾರಿUಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ನಿಂಗರಾಜು, ಎಪಿಎಂಸಿ ಸದಸ್ಯ ಎ.ಎಸ್.ಪ್ರದೀಪ್, ಮುಖಂಡರಾದ ತಾಪಂ ಮಾಜಿಅಧ್ಯಕ್ಷ ಬಿ.ಕೆ.ರವಿಕುಮಾರ್, ರವಿಗೌಡ ಹಾಜರಿದ್ದರು.