ಹುಲಿಕೆರೆ ಗ್ರಾಮದ ವಿವಿಧ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹುಲಿಕೆರೆ ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳನ್ನು ಸನ್ಮಾನಿಸಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಹುಲಿಕೆರೆ ಹಾಗೂ ಕೆ.ಆರ್. ಸಾಗರ ಗ್ರಾಮದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬಹುಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ಹುಲಿಕೆರೆ ಗ್ರಾಮದ ವಿವಿಧ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹುಲಿಕೆರೆ ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳನ್ನು ಸನ್ಮಾನಿಸಿದರು. ಬಳಿಕ ಉಚಿತವಾಗಿ ವಿಶೇಷಚೇತನರಿಗೆ ಸೈಕಲ್, ಫಲಾನುಭವಿ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಿದರು.
ನಂತರ ಕೆಆರ್ ಎಸ್ ಗ್ರಾಮದಲ್ಲಿ ಪ್ರಮುಖ ಯೋಜನೆ ಜಲಧಾರೆ ಯೇಜನೆಯಡಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 24 ಗಂಟೆಗಳ ನಿರಂತರ ನೀರು ಪೂರೈಕೆಗಾಗಿ ಹಮ್ಮಿಕೊಂಡಿರುವ 33 ಕೋಟಿ ರು. ವೆಚ್ಚದ ಬೃಹತ್ ಕಾಮಗಾರಿ, ಕಾವೇರಿ ನೀರಾವರಿ ನಿಗಮದ ಕಚೇರಿ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರು. ಕೆ.ಆರ್.ಎಸ್ ಸಂತೆ ಮಾಳದ ಬಳಿ 47.50 ಲಕ್ಷ ರು. ವೆಚ್ಚದ ಅತ್ಯಾಧುನಿಕ ಬಸ್ ತಂಗುದಾಣ, 5 ಕೋಟಿ ರು. ವೆಚ್ಚದಲ್ಲಿ ಬೃಂದಾವನ ಕಾರಂಜಿಯ 3ನೇ ಅಂಕಣದ ಅಭಿವೃದ್ಧಿ, 5 ಕೋಟಿ ರು. ವೆಚ್ಚದಲ್ಲಿ ಗ್ರಾಮದ ರೈಲ್ವೆ ಸ್ಟೇಷನ್ ರಸ್ತೆ ಅಭಿವೃದ್ಧಿ ಹಾಗೂ ಅರಳಿ ಕಟ್ಟೆ ವೃತ್ತದಲ್ಲಿ 5 ಕೋಟಿ ರು. ವೆಚ್ಚದ ಬೃಹತ್ ಕ್ಲಾಕ್ ಟವರ್ ನಿರ್ಮಾಣ, 40 ಲಕ್ಷ ರು. ವೆಚ್ಚದಲ್ಲಿ ಅಲ್ಪಸಂಖ್ಯಾತ ಸಮಯದಾಯಗಳ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.ಈ ವೇಳೆ ತಹಸೀಲ್ದಾರ್ ಚೇತನ ಯಾದವ್, ನಿರಾವರಿ ನಿಗಮದ ಇಇ ಜಯಂತ್, ತಾಪಂ ಇಒ ಚಂದ್ರು, ಕೆಇಬಿ ಎಇಇ ಮಂಜುನಾಥ್ ಪ್ರಸಾದ್, ಕೆ.ಆರ್.ಎಸ್ ಸಿಪಿಐ ವಿವೇಕಾನಂದ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ ಕುಮಾರ್, ಮಾಜಿ ಸದಸ್ಯರಾದ ರಾಮು, ವೈರಮುಡಿ, ವೆಂಟೇಶ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ನಾಗರಾಜು. ಮುಂಖಡರಾದ ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.