ಪಡಿತರ ವಿತರಣೆಗಾಗಿ ಉಪ ಕೇಂದ್ರಕ್ಕೆ ಶಾಸಕ ರೇವಣ್ಣ ಚಾಲನೆ

| Published : Jan 17 2025, 12:47 AM IST

ಸಾರಾಂಶ

3 ಕಿಲೋಮೀಟರ್ ಒಳಗಡೆ ಪಡಿತರ ವಿತರಣೆಗಾಗಿ ಉಪ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಮತ್ತು ಒಂದು ಅಂಗಡಿಯ ನಿರ್ವಹಣೆಗೆ ಸಾಗಣಿಕೆ ಹಾಗೂ ಮನೆ ಬಾಡಿಗೆ ಸೇರಿ 3 ಸಾವಿರ ರು. ಬೇಕಾಗುತ್ತೆ. ಮಾನವೀಯ ದೃಷ್ಠಿಯಿಂದ ಇವರ ಕೋರಿಕೆಗೆ ಸ್ಪಂದಿಸಬೇಕಾಗುತ್ತೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ಕೆಲವೊಂದು ಸೊಸೈಟಿಗಳಲ್ಲಿ 100ಕ್ಕೂ ಹೆಚ್ಚು ಸದಸ್ಯರು ಇದ್ದು, ಪಡಿತರ ವಿತರಣೆಯಲ್ಲಿ ಬಹಳ ತೊಂದರೆಯಾಗುತ್ತಿತ್ತು. ಈ ಉಪ ಕೇಂದ್ರಗಳಿಂದ ಜನರಿಗೆ ಅನುಕೂಲವಾಗಲಿದೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನಲ್ಲಿ 3 ಕಿಲೋಮೀಟರ್ ಒಳಗಡೆ ಪಡಿತರ ವಿತರಣೆಗಾಗಿ ಉಪ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಮತ್ತು ಒಂದು ಅಂಗಡಿಯ ನಿರ್ವಹಣೆಗೆ ಸಾಗಣಿಕೆ ಹಾಗೂ ಮನೆ ಬಾಡಿಗೆ ಸೇರಿ 3 ಸಾವಿರ ರು. ಬೇಕಾಗುತ್ತೆ. ಮಾನವೀಯ ದೃಷ್ಠಿಯಿಂದ ಇವರ ಕೋರಿಕೆಗೆ ಸ್ಪಂದಿಸಬೇಕಾಗುತ್ತೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯ ಸೂರನಹಳ್ಳಿಯಲ್ಲಿ ಪಡಿತರ ವಿತರಣೆಗಾಗಿ ಉಪ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.ಮಾಡಲಾಗುತ್ತಿದ್ದು, ಇಂದು ದೊಡ್ಡಕುಂಚೆಕೊಪ್ಪಲು ಗ್ರಾಮದಲ್ಲೂ ಚಾಲನೆ ನೀಡಲಾಗುತ್ತದೆ ಮತ್ತು ತಿಂಗಳಲ್ಲಿ ಒಂದು ದಿನ ಮಾತ್ರ ಉಪ ಕೇಂದ್ರದಲ್ಲಿ ಪಡಿತರ ವಿತರಣೆ ಮಾಡಲಾಗುತ್ತೆ ಎಂದರು.

ಕೆಲವೊಂದು ಸೊಸೈಟಿಗಳಲ್ಲಿ 100ಕ್ಕೂ ಹೆಚ್ಚು ಸದಸ್ಯರು ಇದ್ದು, ಪಡಿತರ ವಿತರಣೆಯಲ್ಲಿ ಬಹಳ ತೊಂದರೆಯಾಗುತ್ತಿತ್ತು. ಈ ಉಪ ಕೇಂದ್ರಗಳಿಂದ ಜನರಿಗೆ ಅನುಕೂಲವಾಗಲಿದೆ ಎಂದರು.ತಾಲೂಕಿನ ಹರಳಹಳ್ಳಿ, ಉಣ್ಣೇನಹಳ್ಳಿ, ಹೂವಿನಹಳ್ಳಿ, ಕುರುಬರಹಳ್ಳಿ, ಒಂಟಿಗುಡ್ಡಕಾವಲು, ದೊಡ್ಡಕುಂಚೆಕೊಪ್ಪಲು, ಶೇರ್ವೇಗಾರನಕೊಪ್ಪಲು, ವಡ್ಡರಪಾಳ್ಯ, ಮೂಡೆಲಕೊಪ್ಪಲು, ಕ್ಯಾತನಹಳ್ಳಿ, ಸೂರನಹಳ್ಳಿ, ಚಿಕ್ಕಬ್ಯಾಗತಹಳ್ಳಿಯಲ್ಲಿ ಪಡಿತರ ವಿತರಣೆಗಾಗಿ ಉಪ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ನಿರ್ದೇಶಕ ಸೂರನಹಳ್ಳಿ ರಘು, ಬಾಲಾಜಿ, ನಾರಾಯಣ್, ಇತರರು ಇದ್ದರು.