ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಆಸ್ಪತ್ರೆಯ ಸಮಸ್ಯೆ ಹಾಗೂ ಇತರೆ ವಿಷಯ ಸಂಬಂಧಿಸಿದಂತೆ ಎಲ್ಲಾ ವಿಷಯವನ್ನು ನನ್ನ ಗಮನಕ್ಕೆ ತರುತ್ತೀರಿ. ಆದರೆ ೨೦೨೪-೨೫, ೨೦೨೫-೨೬ನೇ ಸಾಲಿನಲ್ಲಿ ಎರಡು ಕೋಟಿ ರು. ಮೌಲ್ಯದ ಔಷಧಿಯನ್ನು ನನ್ನ ಗಮನಕ್ಕೆ ತರದೇ ಖರೀದಿ ಮಾಡಿದ್ದೀರಿ. ಈ ರೀತಿಯಾದರೇ ನನ್ನ ಕರೆದು ಏಕೆ ಚರ್ಚೆ ನಡೆಸುತ್ತೀರಿ ಎಂದು ಶಾಸಕ ಎಚ್. ಡಿ. ರೇವಣ್ಣ ಅವರು ಆಡಳಿತ ವೈದ್ಯಾಧಿಕಾರಿ ಡಾ. ಮಂಜುಳ ಅವರನ್ನು ಪ್ರಶ್ನಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಉಪಸ್ಥಿತಿಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಔಷಧಿ ಖರೀದಿ ಸಂಬಂಧ ಉಪವಿಭಾಗಾಧಿಕಾರಿ ಕೇಳಿದ ಟೆಂಡರ್ ಮಾಹಿತಿ ಹಾಗೂ ಇತರೆ ಮಾಹಿತಿಯನ್ನು ಸರಿಯಾಗಿ ನೀಡಿ ಎಂದು ಸಲಹೆ ನೀಡಿದರು. ಮೇ ೩೦ರಂದು ರಾಷ್ಟ್ರೀಯ ಗುಣಮಟ್ಟ ತಪಾಸಣೆ ತಂಡ ಆಸ್ಪತ್ರೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಇಂದಿನ ಸಭೆ ಆಯೋಜನೆ ಮಾಡಲಾಗಿದೆ ಜತೆಗೆ ೨೦ ವಿಷಯ ಕುರಿತಂತೆ ಅನುಮೋದನೆ ಪಡೆಯಲು ವಿಷಯವನ್ನು ಮಂಡಿಸಲಾಗಿದೆ. ಇದರಲ್ಲಿ ೨ ಲ್ಯಾಂಡ್ರಿ ಯಂತ್ರಗಳ ಖರೀದಿಗೆ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ವಿತರಣೆ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕೆಲವು ನಿಯಮಗಳ ಪಾಲನೆ ಆಗದೇ ಇರುವ ಕಾರಣದಿಂದ ಪುನಂ ಟೆಂಡರ್ ಕರೆಸಲು ಉಪ ವಿಭಾಗಾಧಿಕಾರಿ ಸೂಚಿಸಿದ್ದಾರೆ ಎಂದರು. ರಾಷ್ಟ್ರೀಯ ಗುಣಮಟ್ಟ ತಪಾಸಣೆ ತಂಡ ಭೇಟಿ ಹಿನ್ನೆಲೆ ಬೆಡ್‌ಶೀಟ್, ಹೊದಿಕೆ ಖರೀದಿ ಪಾರದರ್ಶಕವಾಗಿರಬೇಕು ಎಂದು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ವೃದ್ಧರು ಹಾಗೂ ಅಸಹಾಯಕರ ನೋವಿಗೆ ಸ್ಪಂಧಿಸುವ ಸಲುವಾಗಿ ಲ್ಫಿಟ್ ಹಾಗೂ ವೈರಿಂಗ್ ಸಲುವಾಗಿ ಈಗಾಗಲೇ ೮೫ ಲಕ್ಷ ರು. ನೀಡಲಾಗಿದೆ ಎಂದು ತಿಳಿಸಿದರು. ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ಸಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಕೋರಲಾಗಿದೆ ಎಂದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ೩ ಜನ ವೈದ್ಯರು ಇದ್ದಾರೆ ಹಾಗೂ ತಾಲೂಕಿನ ೭ ಸಮುದಾಯ ಆಸ್ಪತ್ರೆಗಳಿಗೆ ಸ್ತ್ರೀರೋಗ ತಜ್ಞರ ನೇಮಕಕ್ಕೆ ಕೋರಲಾಗಿದೆ ಎಂದು ತಿಳಿಸಿ, ಇತ್ತೀಚಿಗೆ ಔಷಧಿ ತಯಾರಿಕೆ ಕಂಪನಿಗಳಿಂದ ೨ ಲೋಡ್ ಔಷಧಿಗಳನ್ನು ಉಚಿತವಾಗಿ ಕೊಡಿಸಲಾಗಿದೆ ಎಂದಾಗ ದೊಡ್ಡ ದೊಡ್ಡ ಬಾಕ್ಸ್‌ಗಳಲ್ಲಿ ೨ ಲೋಡ್ ಔಷಧಿಗಳು ಬಂದಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಮಂಜುಳ ತಿಳಿಸಿದರು.
ತಾಲೂಕು ಆಸ್ಪತ್ರೆ ಏಕಪಕ್ಷೀಯ ನೀತಿಗೆ ಶಾಸಕ ರೇವಣ್ಣ ಗರಂ
ಔಷಧಿ ಖರೀದಿ ಸಂಬಂಧ ಉಪವಿಭಾಗಾಧಿಕಾರಿ ಕೇಳಿದ ಟೆಂಡರ್ ಮಾಹಿತಿ ಹಾಗೂ ಇತರೆ ಮಾಹಿತಿಯನ್ನು ಸರಿಯಾಗಿ ನೀಡಿ ಎಂದು ಸಲಹೆ ನೀಡಿದರು. ಮೇ ೩೦ರಂದು ರಾಷ್ಟ್ರೀಯ ಗುಣಮಟ್ಟ ತಪಾಸಣೆ ತಂಡ ಆಸ್ಪತ್ರೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಇಂದಿನ ಸಭೆ ಆಯೋಜನೆ ಮಾಡಲಾಗಿದೆ ಜತೆಗೆ ೨೦ ವಿಷಯ ಕುರಿತಂತೆ ಅನುಮೋದನೆ ಪಡೆಯಲು ವಿಷಯವನ್ನು ಮಂಡಿಸಲಾಗಿದೆ. ಇದರಲ್ಲಿ ೨ ಲ್ಯಾಂಡ್ರಿ ಯಂತ್ರಗಳ ಖರೀದಿಗೆ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ವಿತರಣೆ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕೆಲವು ನಿಯಮಗಳ ಪಾಲನೆ ಆಗದೇ ಇರುವ ಕಾರಣದಿಂದ ಪುನಂ ಟೆಂಡರ್ ಕರೆಸಲು ಉಪ ವಿಭಾಗಾಧಿಕಾರಿ ಸೂಚಿಸಿದ್ದಾರೆ ಎಂದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.