ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 23 ದಿನಗಳಿಂದ ಸ್ಥಳೀಯ ಅಂಬೇಡ್ಕರ್‌ ವೃತ್ತದಲ್ಲಿ ನಡೆಸುತ್ತಿರುವ ರೈತರ ಧರಣಿ ಶನಿವಾರ ಸುಖಾಂತ್ಯ ಕಂಡಿತು. ಬೀಳಗಿ ಶಾಸಕ ಜೆ.ಟಿ. ಪಾಟೀಲ ಧರಣಿ ಸ್ಥಳಕ್ಕೆ ಆಗಮಿಸಿ. ರೈತರಿಗೆ ಭರವಸೆ ನೀಡಿ ಸಿಹಿ ತಿನ್ನಿಸಿದರು.

ಕನ್ನಡಪ್ರಭ ವಾರ್ತೆ ಕೆರೂರ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 23 ದಿನಗಳಿಂದ ಸ್ಥಳೀಯ ಅಂಬೇಡ್ಕರ್‌ ವೃತ್ತದಲ್ಲಿ ನಡೆಸುತ್ತಿರುವ ರೈತರ ಧರಣಿ ಶನಿವಾರ ಸುಖಾಂತ್ಯ ಕಂಡಿತು. ಬೀಳಗಿ ಶಾಸಕ ಜೆ.ಟಿ. ಪಾಟೀಲ ಧರಣಿ ಸ್ಥಳಕ್ಕೆ ಆಗಮಿಸಿ. ರೈತರಿಗೆ ಭರವಸೆ ನೀಡಿ ಸಿಹಿ ತಿನ್ನಿಸಿದರು.

ನಂತರ ಮಾತನಾಡಿದ ಶಾಸಕರು, ನಾನೂ ಸಹ ರೈತ ಕುಟುಂಬದಿಂದ ಬಂದವನು. ರೈತರ ಆಗುಹೋಗುಗಳ ಬಗ್ಗೆ ಬಲ್ಲವನಾಗಿದ್ದೇನೆ. ನಿಮ್ಮ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಬೆಳಗಾವಿ ಅಧಿವೇಶನದಲ್ಲಿ ನಿಮ್ಮ ಬೇಡಿಕೆಗಳ ಕುರಿತು ಧ್ವನಿ ಎತ್ತಲಾಗುವುದು. ರೈತರಿಗೆ ಬರ ಪರಿಹಾರ, ಸಾಲಮನ್ನಾ, ಕೆರೂರ ಹಾಗೂ ಕೈನಕಟ್ಟಿ ಏತ ನೀರಾವರಿ ಆರಂಭ ಸೇರಿ ಎಲ್ಲ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮ ಜೊತೆಗೆ ನಾನಿದ್ದೇನೆ ಧರಣಿ ಕೈಬಿಡಬೇಕೆಂದು ಮನವಿ ಮಾಡಿದರು. ರೈತರು ಶಾಸಕರ ಮನವಿಗೆ ಸ್ಪಂದಿಸಿ ಧರಣಿ ಹಿಂಪಡೆಯುವ ನಿರ್ಧಾರ ಮಾಡಿದರು.

ರೈತ ನಾಯಕರಾದ ಹುಸೇನಸಾಬ ಮಾಲದಾರ, ಗೋವಿಂದಪ್ಪ ಬೆಳಗಂಟಿ, ರಾಮಣ್ಣ ಪೂಜಾರ, ದಿಲೀಪಕುಮಾರ ದೇಸಾಯಿ, ಭೀಮಪ್ಪ ಪೂಜಾರಿ, ಬಸವರಾಜ ಗೋನಾಳ, ರಾಮಚಂದ್ರ ಮೈಲಾರಿ, ಭರಮಪ್ಪ ಉದಗಟ್ಟಿ, ನಿಂಗಪ್ಪ ಬೆಳಗಂಟಿ, ಈರಣ್ಣ ಅಕ್ಕಿ, ಕಾಂತೇಶಗೌಡ ಪಾಟೀಲ ಸೇರಿದಂತೆ ರೈತರಿದ್ದರು.