ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ ಎಂಬ ದೂರುಗಳ ಹಿನ್ನೆಲೆ ಶಾಸಕ ಜಗದೀಶ ಗುಡಗುಂಟಿ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆಸ್ಪತ್ರೆಗೆ ಹೆಚ್ಚಾಗಿ ಬಡ ರೋಗಿಗಳು ಬರುವುದರಿಂದ ವೈದ್ಯರು ಲಭ್ಯವಿದ್ದು ಸೂಕ್ತ ಚಿಕಿತ್ಸೆ ನೀಡಬೇಕು.ತುರ್ತು ಚಿಕಿತ್ಸಾ ಘಟಕದಲ್ಲಿ ಒಬ್ಬರು ವೈದ್ಯರು ಯಾವಾಗಲೂ ಕರ್ತವ್ಯದಲ್ಲಿರಬೇಕು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಏನೇ ಕುಂದು ಕೊರತೆಗಳಿದ್ದರೂ ಕೂಡಲೇ ನನ್ನ ಗಮನಕ್ಕೆ ತರುವಂತೆ ಸೂಚಿಸಿದ ಅವರು, ಕರ್ತವ್ಯ ಲೋಪ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡದೆ ಮರಳಿ ಕಳಿಸುವುದು ಸರಿಯಲ್ಲ ಎಂದು ಎಂದು ಸಲಹೆ ನೀಡಿದರು.ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮುದಿಗೌಡರ ಅವರಿಂದ ಮಾಹಿತಿ ಪಡೆದರು. (ಎಸ್‌ಎನ್‌ಸಿಯು) ಸ್ಪೆಷಲ್ ನ್ಯೂಬಾರ್ನ್ ಕೇರ್ ಯುನಿಟ್ ಸಿಬ್ಬಂದಿಯ ಕೊರತೆಯಿಂದಾಗಿ ಎಲ್ಲ ಸೌಕರ್ಯಗಳಿದ್ದರೂ ಕಾರ್ಯ ನಿರ್ವಹಿಸುತ್ತಿಲ್ಲ. ಶೇ.40ರಷ್ಟು ಔಷಧಿಯ ಕೊರತೆ ಇದೆ ಎಂದು ಮಾಹಿತಿ ನೀಡಿದರು. ಲಭ್ಯವಿರುವ ಸಿಬ್ಬಂದಿ ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಬೇಕಾಗಿರುವ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಟಿಎಚ್‌ಒ ಡಾ.ಜಿ.ಎಸ್. ಗಲಗಲಿ, ಡಾ.ದಳವಾಯಿ, ಅಜಯ ಕಡಪಟ್ಟಿ, ರಾಜಾಸಾಬ ಕಡಕೋಳ, ಗಣೇಶ ಶಿರಗಣ್ಣವರ, ವಿಲಾಸ ಪಾಟೀಲ ಇತರರು ಇದ್ದರು.