ಸಾರಾಂಶ
ಕಾರವಾರ: ಇಲ್ಲಿನ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಸೋಮವಾರ ನಡೆದ ಅಕ್ಕ ಕೆಫೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಗೆ ಆಹ್ವಾನ ನೀಡದೆ ಇರುವ ಬಗ್ಗೆ ಸ್ಥಳೀಯ ಶಾಸಕ ಸತೀಶ್ ಸೈಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ನಗರದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಎನ್ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಅಕ್ಕ ಕೆಫೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭೂಮಿಪೂಜೆ ನೆರವೇರಿಸಿದರು.ಕೆಡಿಪಿ ಸಭೆಯಲ್ಲಿ ಭಾಗವಹಿಸಿಲು ಬಂದಿದ್ದ ಶಾಸಕ ಸತೀಶ ಸೈಲ್ ಸಚಿವರ ಕಾರಿನಲ್ಲಿ ಪ್ರವಾಸಿ ಮಂದಿರದಿಂದ ಸಚಿವರ ಜತೆಯಲ್ಲೆ ಅಗಮಿಸಿದರು.ಕೆಡಿಪಿ ಸಭೆ ನಡೆಯುವ ಜಿಪಂ ಕಚೇರಿಯ ಪಕ್ಕದಲ್ಲೆ ತಹಸೀಲ್ದಾರ್ ಕಚೇರಿ ಕಡೆ ಸಚಿವರ ಕಾರು ಹೋಗುತ್ತಿದ್ದಂತೆ ಶಾಸಕರೆ ಒಮ್ಮೆ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಸಚಿವರು ಕಾರು ಇಳಿದ ಮೇಲೆಯೆ ಅಕ್ಕ ಕೆಫೆ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ಇದೆ ಎನ್ನುವುದು ಸೈಲ್ ಅವರ ಗಮನಕ್ಕೆ ಬಂದಿತು.
ಕಾಮಗಾರಿ ಶಂಕುಸ್ಥಾಪನೆಗಾಗಿ ಪಕ್ಕದಲ್ಲೇ ಬ್ಯಾನರ್‌ನಲ್ಲಿ ಹಾಕಲಾಗಿದ್ದು, ಅದರಲ್ಲಿ ಸೈಲ್ ಫೋಟೊ ಹಾಕಲಾಗಿದೆ. ಶಾಸಕರಿಗೆ ಆಹ್ವಾನ ಮಾತ್ರ ನೀಡಿರಲಿಲ್ಲ. ಸೈಲ್ ಶಂಕುಸ್ಥಾಪನೆಯಿಂದ ದೂರ ಉಳಿದು ಅಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಉತ್ತರ ಕನ್ನಡದ 2500 ಮಹಿಳೆಯರು ಗೃಹಲಕ್ಷ್ಮೀ ಹಣ ಬೇಡವೆಂದಿದ್ದಾರೆ: ರೇವಣ್ಣ
ಕಾರವಾರ: ರಾಜ್ಯದಲ್ಲಿ ಗೃಹಲಕ್ಷ್ಮೀ ಹಣ ಬೇಡ ಅಂತಾ ೨೫೦೦ ಮಹಿಳೆಯರು ಲಿಖಿತವಾಗಿ ತಿಳಿಸಿದ್ದಾರೆ. ಈ ಎಲ್ಲರೂ ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. ರಾಜ್ಯದಲ್ಲಿ ಕೇವಲ ಉತ್ತರಕನ್ನಡ ಜಿಲ್ಲೆಯವರು ರೀತಿ ಬರೆದುಕೊಟ್ಟಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.ನಗರದ ಜಿಪಂನಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ವೇಳೆ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಬಳಿಕ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಗ್ಯಾರಂಟಿ ಯೋಜನೆ ಅನುಷ್ಠಾನ ಆಗಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿ ಉತ್ತರಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಈ ಜಿಲ್ಲೆಗೆ ಬಹುಮಾನ ನೀಡಲಾಗುವುದು. ರಾಜ್ಯದಲ್ಲಿ ಬಹಳಷ್ಟು ಜನ ಗೃಹಲಕ್ಷ್ಮೀ ಹಣ ಬೇಡ ಅಂತಾ ಹೇಳಿದಾರೆ. ಆದರೆ ಬರೆದು ಕೊಟ್ಟಿದ್ದು, ಕೇವಲ ಉತ್ತರಕನ್ನಡ ಜಿಲ್ಲೆಯ ಮಹಿಳೆಯರು ಮಾತ್ರ ಎಂದರು.ಗ್ಯಾರಂಟಿಯಿಂದ ಬಡವರಿಗೆ ನೆಮ್ಮದಿಯ ಬದುಕು: ರೇವಣ್ಣಕನ್ನಡಪ್ರಭ ವಾರ್ತೆ ಕಾರವಾರಗ್ಯಾರಂಟಿ ಕೊಟ್ಟರೆ ಸರ್ಕಾರ ಆರ್ಥಿಕ ದಿವಾಳಿ ಆಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಕೊನೆಗೆ ಅವರೇ ಮೋದಿ ಗ್ಯಾರಂಟಿ ಎಂದು ಅಳವಡಿಸುವ ಕೆಲಸ ಮಾಡಿದ್ದಾರೆ ಎಂದು ಗ್ಯಾರಂಟಿ ಯೋಜನೆ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಲೇವಡಿ ಮಾಡಿದರು.ನಗರಕ್ಕೆ ಸೋಮವಾರ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ 1.22 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ₹ 35,180 ಕೋಟಿ ಖರ್ಚು ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಲ್ಲಿ 1.63 ಕೋಟಿ ಫಲಾನುಭವಿಗಳಿದ್ದು, ₹12,589 ಕೋಟಿ ಹಣ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ 59.56 ಕೋಟಿ ಫಲಾನುಭವಿಗಳಿದ್ದು, ₹9775 ಕೋಟಿ ಫಲಾನುಭವಿಗಳಿಗೆ ನೀಡಲಾಗಿದೆ.
ಶಕ್ತಿ ಯೋಜನೆಯಲ್ಲಿ 387 ಕೋಟಿ ಫಲಾನುಭವಿಗಳಿದ್ದು, ₹9352 ಕೋಟಿ ಖರ್ಚು ಮಾಡಲಾಗಿದೆ. ಯುವನಿಧಿ ಯೋಜನೆಯಲ್ಲಿ 2.37 ಲಕ್ಷ ನೋಂದಣಿಯಾಗಿದ್ದು, ₹252 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆ ಬಡವರಿಗೆ ನೆಮ್ಮದಿಯ ಬದುಕು ನೀಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.