ಸಾರಾಂಶ
ಟಿಎಪಿಸಿಎಂಎಸ್ ಸೊಸೈಟಿಯ ಎಲ್ಲಾ ರೀತಿಯ ಶ್ರೇಯೋಭಿವೃದ್ಧಿ ಗಮನದಲ್ಲಿಟ್ಟು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಕಾರ್ಯಕ್ರಮಗಳ ಹಮ್ಮಿಕೊಂಡು ಮುಂದುವರಿಯಬೇಕು. ಶಾಸಕನಾಗಿ ತಮ್ಮ ಸಹಕಾರವಿದೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಟಿಎಪಿಸಿಎಂಎಸ್ ವತಿಯಿಂದ ಸುಮಾರು ₹9 ಲಕ್ಷ ವೆಚ್ಚದಲ್ಲಿ 78.24 ಅಡಿ ವಿಸ್ತೀರ್ಣದ ನೂತನ ಮಳಿಗೆಯನ್ನು ಭಾನುವಾರ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರುಟಿಎಪಿಸಿಎಂಎಸ್ ಅಧ್ಯಕ್ಷ ಬೆನಕನಹಳ್ಳಿ ಎ.ಜಿ.ಗಣೇಶ್ ಮಾತನಾಡಿ ನೂತನ ಸಭಾಭವನ ನಿರ್ಮಿಸಲು ಚಿಂತನೆ ನಡೆಸಿದ್ದು ಶೀಘ್ರದಲ್ಲೇ ಎಲ್ಲಾ ನಿರ್ದೇಶಕರ ಸಭೆ ಕರೆದು ಶಾಸಕರೊಂದಿಗೆ ಚರ್ಚಿಸಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಸೊಸೈಟಿಯ ಎಲ್ಲಾ ರೀತಿಯ ಶ್ರೇಯೋಭಿವೃದ್ಧಿ ಗಮನದಲ್ಲಿಟ್ಟು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಕಾರ್ಯಕ್ರಮಗಳ ಹಮ್ಮಿಕೊಂಡು ಮುಂದುವರಿಯಬೇಕು. ಶಾಸಕನಾಗಿ ತಮ್ಮ ಸಹಕಾರವಿದೆ ಎಂದು ಹೇಳಿದರು.ಮುಖಂಡರಾದ ಹನುಮನಹಳ್ಳಿ ಬಸವರಾಜಪ್ಪ, ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ , ಟಿಎಪಿಸಿಎಂಎಸ್‍ನ ಉಪಾಧ್ಯಕ್ಷ ವಿಶಾಲಾಕ್ಷಮ್ಮ , ನಿರ್ದೇಶಕರಾದ ಬಸವರಾಜಪ್ಪ ಮಂಜಪ್ಪ, ಗಜೇಂದ್ರಪ್ಪ ಕಾಯಿ, ಬಸಣ್ಣ ಶಂಕರಮೂರ್ತಿ, ಅನಂತ ನಾಯಕ್ ಶಂಕ್ರಣ್ಣ, ಸಿದ್ದನಗೌಡ ರಾಜು ನಾಗಮ್ಮ ಮಲ್ಲೇಶಪ್ಪ , ಕಾರ್ಯದರ್ಶಿ ಮುರುಗೇಶ್ , ಗೋಪಿ ಇನ್ನಿತರರಿದ್ದರು.