ಹುಡಾ ಅಧ್ಯಕ್ಷ ಪಟೇಲ್ ಶಿವಣ್ಣಗೆ ಶಾಸಕ ಶಿವಲಿಂಗೇಗೌಡ ಅಭಿನಂದನೆ

| Published : Oct 16 2025, 02:00 AM IST

ಸಾರಾಂಶ

ಹುಡಾ ಅಧ್ಯಕ್ಷರಾಗಿ ಪಟೇಲ್ ಶಿವಪ್ಪ (ಗೊಲ್ಲರಹಳ್ಳಿ) ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ಗೃಹ ಕಚೇರಿಯಲ್ಲಿ ಪಟೇಲ್ ಶಿವಣ್ಣ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಶಾಸಕರು, “ನೀವು ಈ ಹುದ್ದೆಯಲ್ಲಿ ಹೆಚ್ಚು ಸೇವೆ ಸಲ್ಲಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕೀರ್ತಿ ತರಬೇಕು. ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳ ಜಾರಿಗೆ ಬದ್ಧವಾಗಿದೆ, ಅದನ್ನು ಕಾರ್ಯರೂಪಕ್ಕೆ ತರಲು ಹುಡಾ ಮುಖ್ಯ ಪಾತ್ರವಹಿಸಲಿ” ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಹಾಸನ ನಗರದ ರಾಜಕೀಯ ವಲಯದಲ್ಲಿ ಹೊಸ ಚೈತನ್ಯ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ ಹುಡಾ ಅಧ್ಯಕ್ಷರಾಗಿ ಪಟೇಲ್ ಶಿವಪ್ಪ (ಗೊಲ್ಲರಹಳ್ಳಿ) ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.ಗೃಹ ಕಚೇರಿಯಲ್ಲಿ ಪಟೇಲ್ ಶಿವಣ್ಣ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಶಾಸಕರು, “ನೀವು ಈ ಹುದ್ದೆಯಲ್ಲಿ ಹೆಚ್ಚು ಸೇವೆ ಸಲ್ಲಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕೀರ್ತಿ ತರಬೇಕು. ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳ ಜಾರಿಗೆ ಬದ್ಧವಾಗಿದೆ, ಅದನ್ನು ಕಾರ್ಯರೂಪಕ್ಕೆ ತರಲು ಹುಡಾ ಮುಖ್ಯ ಪಾತ್ರವಹಿಸಲಿ” ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ನನ್ನ ಆಯ್ಕೆಗೆ ಶಾಸಕ ಶಿವಲಿಂಗೇಗೌಡರು ನೀಡಿದ ಬೆಂಬಲ ಹಾಗೂ ಮಾರ್ಗದರ್ಶನಕ್ಕೆ ನಾನು ಋಣಿ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ನನ್ನ ಮೇಲೆ ತೋರಿದ ವಿಶ್ವಾಸಕ್ಕೆ ಪಾತ್ರನಾಗಲು ಶ್ರಮಿಸುತ್ತೇನೆ. ಹಾಸನ ಮತ್ತು ಅರಸೀಕೆರೆ ತಾಲೂಕುಗಳ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಒಗ್ಗೂಡಿ ಸಂಘಟನೆಯನ್ನು ಬಲಪಡಿಸುವುದು ನನ್ನ ಪ್ರಾಥಮಿಕ ಗುರಿ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ವೆಂಕಟಮುನಿ, ನಾಮಿನಿ ಸದಸ್ಯ ಶ್ರೀನಿವಾಸ ಗೌಡ, ಸ್ಥಳೀಯ ಯೋಜನಾ ಪ್ರಾಧಿಕಾರ ಸದಸ್ಯ ಬಾಲಮುರುಗನ್, ಮುಖಂಡರು ಗಿರಿಗೌಡ, ಪರಮೇಶ್ ಗುತ್ತಿನಕೆರೆ, ಬಸವರಾಜು, ಗೊಲ್ಲರಹಳ್ಳಿ ಹನುಮಪ್ಪ, ಗೌಸ್ ಖಾನ್, ಮಂಜುನಾಥ್, ಪೃಥ್ವಿ ನಾಯಕ್, ಚಂದ್ರು, ಮದನ್, ರೇವಣ್ಣ, ಹಾಲಪ್ಪ ಮತ್ತು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.