ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಂಪುರ ಮತ್ತು ತ್ಯಾಮಗೊಂಡ್ಲು ಹೋಬಳಿಯಾದ್ಯಂತ ನಮೂನೆ 53ರಡಿ ಬರುವ ಬಹಳಷ್ಟು ರೈತರ ಜಮೀನು ಕೆಐಎಡಿಬಿ ಭೂಸ್ವಾದೀನ ಪಡಿಸಿಕೊಂಡಿದೆ. ಆದರೆ ಆ ರೈತರಿಗೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ಅವರು ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ನೆಲಮಂಗಲ ತಾಲೂಕಿನಲ್ಲಿ ಹಲವು ರೈತರ ಜಮೀನುಗಳನ್ನು ಕೆಐಎಡಿಬಿಯೂ ಭೂಸ್ವಾದೀನ ಪಡಿಸಿಕೊಂಡಿದೆ. ಆದರೆ ರೈತರಿಗೆ ಯಾವುದೇ ದಾಖಲೆಗಳನ್ನು ಸರ್ಕಾರ ನೀಡಿಲ್ಲ. ಭೂಮಿ ಕಳೆದುಕೊಂಡ ರೈತರು ಇದೀಗ ಜೀವನ ಮಾಡುವುದು ಕಷ್ಟವಾಗಿದೆ. ಹಾಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಹಕ್ಕು ಪತ್ರ ನೀಡಿ, ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿ ಹಣ ಬಿಡುಗಡೆಗೆ ಹಕ್ಕು ಪತ್ರ ನೀಡಿ ಸಹಾಯ ಮಾಡುವಂತೆ ಮನವಿ ಮಾಡಿದರು.

ಸ್ಮಶಾನಕ್ಕೂ ಜಾಗ ಮೀಸಲಿಡಲು ಮನವಿ: ಹೊನ್ನೇನಹಳ್ಳಿ ಗ್ರಾಮದಲ್ಲಿ ಜಮೀನನ್ನು ಕೆಐಎಡಿಬಿಯೂ ಭೂಸ್ವಾಧೀನ ಪಡಿಸಿಕೊಂಡ ಪರಿಣಾಮ ಸ್ಮಶಾನವಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮದ ಮಧ್ಯಭಾಗದಲ್ಲಿ ಅಂತ್ಯಕ್ರಿಯೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಶಾಸಕ ಎನ್.ಶ್ರೀನಿವಾಸ್‌ಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ಬಗ್ಗೆ ಶಾಸಕರು, ಹೊನ್ನೇನಹಳ್ಳಿ ಗ್ರಾಮ ಸೇರಿದಂತೆ ಕೆಐಎಡಿಬಿ ಭೂಸ್ವಾಧೀನ ಪಡಿಸಿಕೊಡಿರುವ ಗ್ರಾಮಗಳಿಗೂ ಸ್ಮಶಾನ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಭೂಮಿ ಮಂಜೂರು ಮಾಡುವಂತೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಗಮನಕ್ಕೆ ತಂದರು. ಡಾ.ಸೆಲ್ವಕುಮಾರ್ ಶಾಸಕರಿಂದ ಮಾಹಿತಿ ಪಡೆದು, ಸ್ಥಳದಲ್ಲಿಯೇ ಕೆಐಎಡಿಬಿ ಅಧಿಕಾರಿಗಳಿಗೆ ಕರೆ ಮಾಡಿ ಹೊನ್ನೇನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಸ್ಥಳ ಪರಿಶೀಲಿಸಿ ಬಪೋರ್ ಜೋನ್ ಅಥವಾ ಖಾಲಿ ಇರುವ ಕೆಐಎಡಿಬಿ ಜಾಗದಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿ ಜಾಗ ಮೀಸಲಿರಿಸುವ ಬಗ್ಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.

ಸಕರಾತ್ಮಕ ಸ್ಪಂದನೆ:

ಶಾಸಕರು ನೀಡಿದ ಮನವಿಗೆ ಸ್ಪಂದಿಸಿದ ಕೈಗಾರಿಕೆಗಳ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದು ರೈತರಿಗೆ ಸರ್ಕಾರದ ಮಟ್ಟದಲ್ಲಿ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಶಾಸಕರು ತಿಳಿಸಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು, ತ್ಯಾಮಗೊಂಡ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡ, ಸೋಂಪುರ ಗ್ರಾಪಂ ಮಾಜಿ ಅದ್ಯಕ್ಷ ಶಿವಕುಮಾರ್ ಉಪಸ್ಥಿತರಿದ್ದರು.

ಕೋಟ್ ............

ಸೋಂಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಯ ನಮೂನೆ 53ರ ಅಡಿಯಲ್ಲಿ ಜಮೀನು ಕಳೆದಕೊಂಡ ರೈತರಿಗೆ ನ್ಯಾಯ ಕೊಡಿಸುವಂತೆ ಸಂಬಂಧಪಟ್ಟ ಅಧಿಕಾರಿ ಜೊತೆ ಮಾತನಾಡಿ, ಉಳುಮೆ ಮಾಡುತ್ತಿರುವ ರೈತರಿಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಬಗ್ಗೆ ಸಿಎಂ, ಡಿಸಿಎಂ, ಸಚಿವರ ಗಮನಕ್ಕೆ ತಂದು ಚರ್ಚಿಸುತ್ತೇನೆ.

-ಎನ್.ಶ್ರೀನಿವಾಸ್, ಶಾಸಕರು

ಪೋಟೋ 1:

ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಅವರನ್ನು ಶಾಸಕ ಶ್ರೀನಿವಾಸ್ ಭೇಟಿ ಮಾಡಿ ಚರ್ಚಿಸಿದರು.