ಸಾರ್ವಜನಿಕರ ಸಮಸ್ಯೆಗಳ ಆಲಿಸಿದ ಶಾಸಕ ಶ್ರೀನಿವಾಸ್

| Published : Jun 28 2024, 12:58 AM IST

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಕರಿಮಣ್ಣೆ, ತಟ್ಟೆಕೆರೆ, ಹೊಸನಿಜಗಲ್, ದೇವರಹೊಸಹಳ್ಳಿ ಗ್ರಾಮಗಳಲ್ಲಿ ಟ್ರಾನ್ಸ್ ಫಾರ್ಮರ್ ಸರಿಯಿಲ್ಲದೆ ವಿದ್ಯುತ್ ಸಮಸ್ಯೆಯಾಗುತ್ತಿದೆ. ರೈತರು ಸರಿಯಾದ ಸಮಯಕ್ಕೆ ವಿದ್ಯುತ್ ನೀಡುತ್ತಿಲ್ಲ. ವಿದ್ಯುತ್ ಲೈನ್ ಗಳು ಕೈಗೆ ಎಟುಕುತ್ತಿದ್ದು ಬೆಸ್ಕಾಂ ಇಲಾಖೆಗೆ ಸರಿಪಡಿಸುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ರೈತರು ದೂರಿದರು.

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಕರಿಮಣ್ಣೆ, ತಟ್ಟೆಕೆರೆ, ಹೊಸನಿಜಗಲ್, ದೇವರಹೊಸಹಳ್ಳಿ ಗ್ರಾಮಗಳಲ್ಲಿ ಟ್ರಾನ್ಸ್ ಫಾರ್ಮರ್ ಸರಿಯಿಲ್ಲದೆ ವಿದ್ಯುತ್ ಸಮಸ್ಯೆಯಾಗುತ್ತಿದೆ. ರೈತರು ಸರಿಯಾದ ಸಮಯಕ್ಕೆ ವಿದ್ಯುತ್ ನೀಡುತ್ತಿಲ್ಲ. ವಿದ್ಯುತ್ ಲೈನ್ ಗಳು ಕೈಗೆ ಎಟುಕುತ್ತಿದ್ದು ಬೆಸ್ಕಾಂ ಇಲಾಖೆಗೆ ಸರಿಪಡಿಸುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ರೈತರು ದೂರಿದರು.

ಪಟ್ಟಣದಲ್ಲಿ ಶಾಸಕ.ಎನ್.ಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ವಿದ್ಯುತ್‌, ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳ ಕುರಿತು ಸಾರ್ವಜನಿಕರು ಹೇಳಿಕೊಂಡರು.

ಬಳಿಕ ಬೆಸ್ಕಾಂ ಇಲಾಖೆಯ ಎಇ ಅವರನ್ನು ಕರೆಸಿಕೊಂಡ ಶಾಸಕರು, ಈ ಸಮಸ್ಯೆಗಳಿಗೆ ಅತಿ ಶೀಘ್ರವಾಗಿ ಪರಿಹಾರ ಕಲ್ಪಿಸಿಕೊಡುವಂತೆ ಸೂಚಿಸಿದರು.

ಟಿಡಿಪಿಎಸ್ ಕಂಪನಿಯಲ್ಲಿ ಕಳೆದ ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದರೂ ಸಕಾರಣ ನೀಡದೆ ಕೆಲಸದಿಂದ ತೆಗೆದಿದ್ದಾರೆಂದು ಉದ್ಯೋಗಿಯೊಬ್ಬರು ದೂರಿದಾಗ ಕಂಪನಿ ಸಿಬ್ಬಂದಿಗೆ ಕರೆ ಮಾಡಿ ಮಾತನಾಡಿದ ಶಾಸಕರು ಕೂಡಲೇ ವಜಾ ಮಾಡಿರುವ ಕಾರ್ಮಿಕನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ನಿಮ್ಮ ಮೊದಲ ಆದ್ಯತೆ ಸ್ಥಳೀಯರಿಗೆ ನೀಡಬೇಕು. ಮುಂದಿನ ದಿನಗಳಲ್ಲಿ ಕಂಪನಿಗಳ ಸಭೆ ಕರೆದು ಚರ್ಚಿಸುತ್ತೇನೆ ಎಂದರು.

ಶಾಲೆಯ ಬಗ್ಗೆ ಕಾಳಜಿ:

ಪಟ್ಟಣದ ಹೃದಯಭಾಗದಲ್ಲಿರುವ ಸಿವಿಜಿ ಗ್ರಾಮಾಂತರ ಪ್ರೌಢಶಾಲೆ ಸಮಸ್ಯೆಯ ಬಗ್ಗೆ ಗ್ರಾಪಂ ಸದಸ್ಯ ಅಶೋಕ್ ಶಾಸಕರ ಗಮನಕ್ಕೆ ತಂದಾಗ, ಯಾವುದೇ ಕಾರಣಕ್ಕೂ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಸಂಘದ ನೋಂದಣಿ ಮಾಡದಂತೆ ಸಹಕಾರ ಇಲಾಖೆ ನಿಬಂಧಕರಿಗೆ ಕರೆ ಮಾಡಿ ತಿಳಿಸಿದರು.

ಬಳಿಕ ಮಾತನಾಡಿದ ಶಾಸಕರು, ಇಲಾಖೆಗಳಲ್ಲಿ ರೈತರು, ಬಡವರ ಕೆಲಸಗಳನ್ನು ವಿಳಂಬ ಮಾಡಬೇಡಿ. ಕಚೇರಿಗಳಲ್ಲಿ ಕೆಲ ಸಿಬ್ಬಂದಿ ರೈತರನ್ನು ಅಲೆದಾಡುಸುತ್ತಿರುವುದು, ಲಂಚಕ್ಕೆ ಬೇಡಿಕೆ ಇಡುವ ಮಾಹಿತಿ ಬಂದಿದ್ದು, ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ರಾಮಾಂಜಿನೇಯ, ಶಿವಕುಮಾರ್, ಹೊಸಳಯ್ಯ, ದಿನೇಶ್ ನಾಯಕ್, ಯೋಗಾನಂದೀಶ್, ಪಾರ್ಥರಾಜು, ನಾರಾಯಣ್, ಸಿದ್ದರಾಜು, ನಾಗರಾಜು, ಖಲೀಂಉಲ್ಲಾ, ನಯಾಜ್ ಖಾನ್, ಬೈಲಪ್ಪ ಇತರರಿದ್ದರು.

ಪೋಟೋ 2 :

ದಾಬಸ್‌ಪೇಟೆಯಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಶ್ರೀನಿವಾಸ್ ಸಾರ್ವಜನಿಕರ ಕುಂದುಕೊರತೆಗಳಗಳನ್ನು ಆಲಿಸಿದರು. ಅಗಳಕುಪ್ಪೆ ಗೋವಿಂದರಾಜು, ರಾಮಾಂಜಿನೇಯ, ಶಿವಕುಮಾರ್ ಇತರರಿದ್ದರು.