ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದ ಸಮೀಪವಿರುದ ದೇವರಕೆರೆ ಕೋಡಿಯಾದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ರೈತರೊಂದಿಗೆ ಕೆರೆಗೆ ತೆರಳಿ ತುಂಬಿದ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.
ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದ ಸಮೀಪವಿರುದ ದೇವರಕೆರೆ ಕೋಡಿಯಾದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ರೈತರೊಂದಿಗೆ ಕೆರೆಗೆ ತೆರಳಿ ತುಂಬಿದ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.
ಬಳಿಕ ಮಾತನಾಡಿದ ಅವರು, ತುಂಬಿದ ಕೆರೆ ಕಟ್ಟೆಗಳಿಗೆ, ಹಳ್ಳಕೊಳ್ಳಗಳಿಗೆ, ತುಂಬಿ ಹರಿಯುವ ನದಿಗಳಿಗೆ ಕತಜ್ಞತಾ ಮನೋಭಾವದಿಂದ ಪೂಜೆ ಸಲ್ಲಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಮನುಷ್ಯನ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ಕೆರೆಗಳು ನೀರಿನಿಂದ ತುಂಬಿರಲಿ ಎನ್ನುವ ಭಕ್ತಿ ಸಮರ್ಪಿಸಿದಂತಾಗಿದೆ ಎಂದು ಹೇಳಿದರು.ಶಿವಗಂಗೆಯ ಬೆಟ್ಟದ ತಪ್ಪಲ್ಲಿನಲ್ಲಿರುವುದರಿಂದ ಬೆಟ್ಟದ ನೀರು ನೇರವಾಗಿ ಕೆರೆಗೆ ಹರಿಯುವುದರಿಂದ ಕೆರೆಯಲ್ಲಿ ಸದಾ ನೀರು ಸಂಗ್ರಹವಾಗಿರುತ್ತದೆ. ತುಂಬಿರುವ ಕೆರೆಗಳನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿ, ಪ್ರತಿ ವರ್ಷ ಕೆರೆಗಳು ತುಂಬುವ ಮೂಲಕ ರೈತರಿಗೆ ದಯೆ ತೋರಲಿ ಎಂದು ಹಾರೈಸಿದರು.
ಬಾಗಿನ ಅರ್ಪಿಸಿದ ನಂತರ ಮುತ್ತೈದೆಯರಿಗೆ ಬಾಗಿನ ಅರ್ಪಿಸಿ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಸೋಂಪುರ ಹೋಬಳಿ ಹಾಗೂ ಗುಳೂರು ಹೋಬಳಿಯ ನೂರಾರು ರೈತರು ಉಪಸ್ಥಿತರಿದ್ದರು.
ಪೋಟೋ 3 :ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದ ಸಮೀಪವಿರುದ ದೇವರಕೆರೆ ಕೋಡಿಯಾದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಕೆರೆಗೆ ಹಾಗೂ ಮುತ್ತೈದೆಯರಿಗೆ ಬಾಗಿನ ಅರ್ಪಿಸಿದರು.