ವಿವಿಧ ತಳಿಯ ಶ್ವಾನ ಪ್ರದರ್ಶನಕ್ಕೆ ಶಾಸಕ ಸ್ವರೂಪ್ ಚಾಲನೆ

| Published : Nov 18 2024, 12:01 AM IST

ವಿವಿಧ ತಳಿಯ ಶ್ವಾನ ಪ್ರದರ್ಶನಕ್ಕೆ ಶಾಸಕ ಸ್ವರೂಪ್ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ವಾನ ಪ್ರದರ್ಶನದಲ್ಲಿ, ಸುಮಾರು ೨೫ ತಳಿಯ ೨೦೦ಕ್ಕೂ ಹೆಚ್ಚು ಶ್ವಾನಗಳು ಈ ಪ್ರದರ್ಶನದಲ್ಲಿ ತಮ್ಮ ತಮ್ಮ ಮಾಲೀಕರೊಂದಿಗೆ ಭಾಗಿಯಾಗಿ ಗಮನ ಸೆಳೆದವು. ವಿವಿಧ ತಳಿಯ ಶ್ವಾನಗಳನ್ನು ಒಂದೇ ಕಡೆ ಕಂಡ ಡಾಗ್ಸ್ ಪ್ರಿಯರು, ಸಖತ್ ಖುಷಿ ಪಟ್ಟರು. ವಿವಿಧ ಆಕಾದಲ್ಲಿದ್ದ ನಾಯಿಗಳು ನೋಡುಗರನ್ನು ಆಕರ್ಷಿಸಿದವು. ಇಂದು ಭಾನುವಾರವಾದ್ದರಿಂದ ನಿರೀಕ್ಷೆಗೂ ಮೀರಿ ಶ್ವಾನ ಪ್ರಿಯರು ಜಮಾಯಿಸಿ, ವಿವಿಧ ಬಗೆಯ ನಾಯಿ ಮತ್ತು ಅವುಗಳ ತುಂಟಾಟ ಕಂಡು ಸಖತ್ ಮನರಂಜನೆ ಪಡೆದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಕೆನಲ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ವಾನಗಳ ಪ್ರದರ್ಶನ ಬಲು ಆಕರ್ಷಣೆ ಎನಿಸಿತು. ಸುಮಾರು ೨೫ ತಳಿಯ ೨೦೦ಕ್ಕೂ ಹೆಚ್ಚು ತರೇಹೇವಾರಿ ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿಯಾಗಿ, ಪ್ರಾಣಿ ಪ್ರಿಯರ ಗಮನ ಸೆಳೆದವು. ಒಂದಕ್ಕಿಂತ ಒಂದು ವಿಭಿನ್ನ. ಒಂದಕ್ಕಿಂತ ಮತ್ತೊಂದು ಬ್ಯೂಟಿಫುಲ್ ಎನಿಸಿದವು. ವಯೋಮಿತಿ ಆಧಾರದಲ್ಲಿ ಶ್ವಾನ ಪ್ರದರ್ಶನ ನಡೆದಿದ್ದು, ಎಲ್ಲಾ ವಿಭಾಗದಲ್ಲೂ ಆರೋಗ್ಯಕರ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು. ಶ್ವಾನಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್‌ ಪ್ರಕಾಶ್, ನಗರಸಭೆ ಅಧ್ಯಕ್ಷ ಚಂದ್ರೇಗೌಡ ಚಾಲನೆ ನೀಡಿದರು. ನಂತರ ಶಾಸಕರು ಮಾತನಾಡಿ, ನಮ್ಮ ಕೂಡ ಮನೆಯಲ್ಲಿ ಶ್ವಾನ ಸಾಕಲಾಗಿದ್ದು, ಶ್ವಾನವನ್ನು ಪ್ರೀತಿಯಿಂದ ನಾವು ಎಷ್ಟು ಸಾಕುತ್ತೇವೆ ಅದೂ ಕೂಡ ಅಷ್ಟೇ ಪ್ರೀತಿ ಮಾಡುತ್ತದೆ. ಅನೇಕ ಮನೆಯಲ್ಲಿ ಶ್ವಾನವನ್ನು ಉತ್ತಮವಾಗಿ ಸಾಕಲಾಗುತ್ತಿದ್ದು, ಇಂತಹ ಕಾರ್ಯಕ್ರಮ ಉತ್ತಮವಾಗಿದೆ. ಮುಂದೆ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದ್ದರು. ಹೀಗೆ ನೂರಾರು ಬಗೆ ಬಗೆಯ ಸಾಕು ನಾಯಿಗಳು ಕಂಡು ಬಂದಿದ್ದು ಸರ್ಕಾರಿ ಕಾಲೇಜಿನ ಕ್ರೀಡಾಂಗಣದಲ್ಲಿ. ಶ್ವಾನ ಪ್ರದರ್ಶನದಲ್ಲಿ, ಸುಮಾರು ೨೫ ತಳಿಯ ೨೦೦ಕ್ಕೂ ಹೆಚ್ಚು ಶ್ವಾನಗಳು ಈ ಪ್ರದರ್ಶನದಲ್ಲಿ ತಮ್ಮ ತಮ್ಮ ಮಾಲೀಕರೊಂದಿಗೆ ಭಾಗಿಯಾಗಿ ಗಮನ ಸೆಳೆದವು. ವಿವಿಧ ತಳಿಯ ಶ್ವಾನಗಳನ್ನು ಒಂದೇ ಕಡೆ ಕಂಡ ಡಾಗ್ಸ್ ಪ್ರಿಯರು, ಸಖತ್ ಖುಷಿ ಪಟ್ಟರು. ವಿವಿಧ ಆಕಾದಲ್ಲಿದ್ದ ನಾಯಿಗಳು ನೋಡುಗರನ್ನು ಆಕರ್ಷಿಸಿದವು. ಇಂದು ಭಾನುವಾರವಾದ್ದರಿಂದ ನಿರೀಕ್ಷೆಗೂ ಮೀರಿ ಶ್ವಾನ ಪ್ರಿಯರು ಜಮಾಯಿಸಿ, ವಿವಿಧ ಬಗೆಯ ನಾಯಿ ಮತ್ತು ಅವುಗಳ ತುಂಟಾಟ ಕಂಡು ಸಖತ್ ಮನರಂಜನೆ ಪಡೆದರು. ನಮ್ಮ ದೇಶೀಯ ತಳಿಯಾದ ಮುಧೋಳ್ ಜೊತೆಗೆ ಡಾಬರ್ ಮನ್ , ಲ್ಯಾಬ್ರಡಾರ್, ರಾಟ್ ವೀಲರ್, ಡ್ಯಾಶಂಡ್ ಡ್ಯಾಶ್, ಪಿಟ್ಬುಲ್, ಬಾಕ್ಸರ್, ಹಸ್ಕಿ, ಡಾಬರ್ಮ್ಯಾನ್, ಸೀಳುನಾಯಿ, ಜರ್ಮನ್ ಶಫರ್ಡ್, ಗೋಲ್ಡನ್ ರಿಟ್ರಿವರ್, ಬಿಯಗಲ್ ಹೆಸರಿ ಸಣ್ಣ ಹಾಗೂ ದೊಡ್ಡ ತಳಿಯ ನಾಯಿಗಳು ಬಲು ಆಕರ್ಷಣೆ ಎನಿಸಿದವು. ಚೈನಾ, ಟಿಬೇಟಿಯನ್, ಜರ್ಮನಿ ತಳಿಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳೋ ಭಾಗ್ಯ ಪ್ರಾಣಿ ಪ್ರಿಯರಿಗೆ ಸಿಕ್ಕಿತು. ಇವಲ್ಲದೇ ಪೊಮೇರಿಯನ್, ಸೇಂಟ್ ಬರ್ನಾಡ್, ಗ್ರೇಟ್ ಡೆನ್, ಶಿಟ್ಜ್ ಡಾಗ್ಗಳು ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರನ್ನು ಮುದಗೊಳಿಸಿದವು. ಮಾಲೀಕರು ಹೇಳಿದಂತೆ ಶ್ವಾನಗಳು ಹೆಜ್ಜೆ ಹಾಕಿದ್ದು, ಓಡಾಡಿದ ರೀತಿ ಎಲ್ಲರಲ್ಲೂ ಖುಷಿ ತರಿಸಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅನೇಕರು, ತಮ್ಮ ತಮ್ಮ ಸಾಕು ಪ್ರಾಣಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಲ್ಲಿ ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದವರ ಸಂತಸಕ್ಕೆ ಪಾರವೇ ಇರಲಿಲ್ಲ. ಈವರೆಗೆ ತಮ್ಮ ಶ್ವಾನವೇ ಹೆಚ್ಚು, ಮುದ್ದು, ಎಂದುಕೊಂಡಿದ್ದವರು ಬೇರೆ ಬೇರೆ ತಳಿಯ ಶ್ವಾನ ಕಂಡು ಖುಷಿಪಟ್ಟರು. ಲವಲವಿಕೆಯಿಂದ, ತಮ್ಮದೇ ಮ್ಯಾನರಿಸಂ ಮೂಲಕ ಓಡಾಡುವ ಶ್ವಾನ ಕಂಡು ಹಿಗ್ಗಿದರು. ಇದೇ ವೇಳೆ ವಿವಿಧ ಕಡೆಯಿಂದ ವಿವಿಧ ಜಾತಿಯ ನಾಯಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡು ಗಮನಸೆಳೆದವು. ಈ ಸಂದರ್ಭದಲ್ಲಿ ನಾಯಿಗಳಿಗೆ ಅವಶ್ಯಕವಾಗಿ ಬೇಕಾಗಿದ್ದ ಫುಡ್‌ಗಳನ್ನು ಕೂಡ ಮಾರಾಟಕ್ಕೆ ಇಡಲಾಗುತ್ತು. ಈ ಸಂದರ್ಭದಲ್ಲಿ ಡಾಗ್ ಪ್ರದರ್ಶನದ ತೀರ್ಪುಗಾರರಾದ ಮನೋಜ್, ಕೆನಲ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಚ್.ಎಂ. ರಾಘವೇಂದ್ರ, ಕ್ಲಬ್ ಅಧ್ಯಕ್ಷ ಡಾ. ಡಿ.ಆರ್‌. ಮಂಜುನಾಥ್, ಜಂಟಿ ಕಾರ್ಯದರ್ಶಿ ಪ್ರೀತಂ, ವಿಶ್ವ ಪ್ರಸಾದ್, ಇತರರು ಉಪಸ್ಥಿತರಿದ್ದರು.