ರಸ್ತೆ ಕಾಮಗಾರಿಗೆ ಶಾಸಕ ಸ್ವರೂಪ್ ಗುದ್ದಲಿಪೂಜೆ

| Published : Jul 02 2024, 01:36 AM IST

ರಸ್ತೆ ಕಾಮಗಾರಿಗೆ ಶಾಸಕ ಸ್ವರೂಪ್ ಗುದ್ದಲಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ವಿಶ್ವನಾಥ್ ನಗರದ ದೇವು ಲೇಔಟ್‌ನಲ್ಲಿ ಅಲ್ಪಸಂಖ್ಯಾತರ ಅನುದಾನದಡಿ ಸುಮಾರು 1 ಕೋಟಿ 75 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಎಚ್.ಪಿ. ಸ್ವರೂಪ್‌ ಪ್ರಕಾಶ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಅಭಿವೃದ್ಧಿ ಕೆಲಸ ಕಾರ್ಯಗಳು ಎಲ್ಲಾ ವಾರ್ಡ್‌ನಲ್ಲೂ ಆಗಬೇಕಾಗಿದೆ. ಶೀಘ್ರದಲ್ಲಿಯೇ 15ನೇ ಹಣಕಾಸು ಯೋಜನೆ ತಯಾರಿಸಿ ಕೆಲಸ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ 30ನೇ ವಾರ್ಡಿನ ವಿಶ್ವನಾಥ್ ನಗರದ ದೇವು ಲೇಔಟ್‌ನಲ್ಲಿ ಅಲ್ಪಸಂಖ್ಯಾತರ ಅನುದಾನದಡಿ ಸುಮಾರು 1 ಕೋಟಿ 75 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಎಚ್.ಪಿ. ಸ್ವರೂಪ್‌ ಪ್ರಕಾಶ್ ಅವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, 30ನೇ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿರುವುದಿಲ್ಲ ಎನ್ನುವ ಬೇಡಿಕೆ ಮೇರೆಗೆ ಜಮೀರ್ ಅಹಮದ್‌ ಖಾನ್‌ ಅವರಿಗೆ ಕೇಳಿಕೊಂಡ ವೇಳೆ ಅಲ್ಪಸಂಖ್ಯಾತರ ನಿಧಿಯಿಂದ ಮೂರು ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಈ ವಾರ್ಡ್‌ಗೆ ಸಂಬಂಧಪಟ್ಟಂತೆ ಕಾಂಕ್ರೀಟ್ ರಸ್ತೆಗೆ ಹಣ ಹಾಕಲಾಗಿದೆ. ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿದೆ ಎಂದರು. ಇನ್ನು ಹಲವಾರು ಕೆಲಸ ಕಾರ್ಯಗಳು 30ನೇ ವಾರ್ಡ್‌ನಲ್ಲಿ ಮತ್ತು ಅಲ್ಪಸಂಖ್ಯಾತರ ವಾರ್ಡಿನಲ್ಲಿ ಬಹಳಷ್ಟು ಕೆಲಸಗಳು ಆಗಬೇಕಾಗಿದ್ದು, ಸಂಸದರಿಗೂ ಮನವಿ ಮಾಡಿಕೊಂಡು 15ನೇ ಹಣಕಾಸು ಬಿಡುಗಡೆಯಾಗಿದ್ದು, ಅಭಿವೃದ್ಧಿ ಕೆಲಸ ಕಾರ್ಯಗಳು ಎಲ್ಲಾ ವಾರ್ಡ್‌ನಲ್ಲೂ ಆಗಬೇಕಾಗಿದೆ. ಶೀಘ್ರದಲ್ಲಿಯೇ 15ನೇ ಹಣಕಾಸು ಯೋಜನೆ ತಯಾರಿಸಿ ಕೆಲಸ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಸನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಏನೇ ಕೆಲಸಕಾರ್ಯಗಳು ಇದ್ದರೂ ನಿಮ್ಮ ಜೊತೆ ಇರುತ್ತೇವೆ. 1 ಕೋಟಿ 75 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಇದರಲ್ಲಿ ಏಳರಿಂದ ಎಂಟು ರಸ್ತೆಗಳು ಆಗಲಿವೆ. ಒಟ್ಟು ಮೂರು ಕೋಟಿ ರು. ಗಳನ್ನು ರಸ್ತೆ ಕಾಮಗಾರಿಗಳಿಗೆ ಹಣ ತರಲಾಗಿದೆ ಎಂದು ಹೇಳಿದರು.ನಗರಸಭೆ ಸದಸ್ಯರಾದ ಕ್ರಾಂತಿ ಪ್ರಸಾದ್‌ ತ್ಯಾಗಿ ಮಾತನಾಡಿ, 30ನೇ ವಾರ್ಡಿನಲ್ಲಿ ಅಲ್ಪಸಂಖ್ಯಾತರ ಬಡಾವಣೆ ಇದ್ದು, ಅಲ್ಪಸಂಖ್ಯಾತರ ಪರಿಗಣನೆಗೆ ತೆಗೆದುಕೊಂಡು ಈ ಭಾಗಕ್ಕೆ ಮೂರು ಕೋಟಿ ಅನುದಾನವನ್ನು ಶಾಸಕರು ತಂದಿದ್ದಾರೆ. ರಸ್ತೆಚರಂಡಿಯನ್ನು ಅಭಿವೃದ್ಧಿ ಮಾಡುತ್ತಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಭಿವೃದ್ಧಿಗೆ ಇನ್ನು ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದು, ಹಿಂದೆ ಇದ್ದಂತಹ ಶಾಸಕರು ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕೆಲಸ ನಿರ್ವಹಿಸಲು ಸಾಧ್ಯವಾಗಲಿಲ್ಲ. ಜನರಿಗೆ ನಿರೀಕ್ಷೆ ಇತ್ತು ಅದನ್ನ ತಲುಪಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಶಾಸಕರಾದ ಎಚ್‌.ಪಿ. ಸ್ವರೂಪ್‌ ಅವರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿದ್ದ ವೇಳೆ ಮಾಜಿ ಸಚಿವ ಎಚ್.ಡಿ. ರೇವಣ್ಣನವರು ಸಚಿವರಾದ ವೇಳೆ 1 ಕೋಟಿ ಗ್ರಾಂಟ್‌ ಅನ್ನು ವಿಶ್ವನಾಥ್‌ ನಗರಕ್ಕೆ ಕೊಟ್ಟಿದ್ದಾರೆ. ಸುಮಾರು 6 ಕೋಟಿಯನ್ನು ಹುಣಸಿನಕೆರೆ ಸೇತುವೆ ಮತ್ತು ವಿಶ್ವನಾಥ ನಗರ ಸೇತುವೆಗೆ ಹಣವನ್ನು ಸ್ವರೂಪ್‌ ಅವರ ಒತ್ತಾಯದ ಮೇರೆಗೆ ಅನುದಾನತಂದುಕೊಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ರಫಿಕ್, ಜೆಡಿಎಸ್ ಮುಖಂಡರಾದ ದಸ್ತಗೀರ್‌, ಅಕ್ಮಲ್‌, ಇತರರು ಪಾಲ್ಗೊಂಡಿದ್ದರು.