50ನೇ ವಾರ್ಡ್‌ ನಲ್ಲಿ ಶಾಸಕ ಶ್ರೀವತ್ಸ ಪಾದಯಾತ್ರೆ

| Published : Aug 07 2025, 12:45 AM IST

ಸಾರಾಂಶ

ಹಲವಾರು ವರ್ಷಗಳಿಂದ ಬಾಕ್ಸ್ ಡ್ರೈನ್ ಕ್ಲೀನ್ ಮಾಡದೆ ಮನೆಯಲ್ಲಿ ವಾಸವಿರಲು ಸಾಧ್ಯವಾಗುತ್ತಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರುಶಾಸಕ ಟಿ.ಎಸ್‌. ಶ್ರೀವತ್ಸ ಅವರು ವಾರ್ಡ್‌ ನಂ. 50ರ ವ್ಯಾಪ್ತಿಯಲ್ಲಿ ಬುಧವಾರ ಪಾದಯಾತ್ರೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು.ವಾರ್ಡ್ ನಂ. 50ರ ವ್ಯಾಪ್ತಿಯಲ್ಲಿನ ಡಿ. ಸುಬ್ಬಯ್ಯ ರಸ್ತೆ. ದಿವಾನ್ಸ್ ರಸ್ತೆ, ಬೆಸ್ತರಗೇರಿ. ಕುಂಬಾರಗೇರಿ, ಜೈನ್ ಭವನ್ ಭಾಗಗಳಲ್ಲಿ ಬೆಳಗ್ಗೆ 7.30 ರಿಂದಲೇ ಪಾದಯಾತ್ರೆ ಮಾಡಿದ ಶಾಸಕರು ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು.ಈ ಭಾಗದಲ್ಲಿ ಪ್ರಮುಖವಾಗಿ ಯುಜಿಡಿ ಮತ್ತು ಕುಡಿಯುವ ನೀರಿನ ಬಗ್ಗೆ ತುಂಬಾ ದೂರುಗಳು ಬಂದವು. ಈ ವೇಳೆ ಸ್ಥಳದಲ್ಲಿದ್ದ ಎಇಇ ಧನುಷ್. ಎಇ ಪ್ರಶಾಂತ್ ಅವರಿಂದ ವಿವರಣೆ ಪಡೆದರು. ನಂತರ ತಕ್ಷಣವೇ ಕ್ರಮ ತೆಗೆದುಕೊಂಡು ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಸೂಚಿಸಿದರು.ಹಲವಾರು ವರ್ಷಗಳಿಂದ ಬಾಕ್ಸ್ ಡ್ರೈನ್ ಕ್ಲೀನ್ ಮಾಡದೆ ಮನೆಯಲ್ಲಿ ವಾಸವಿರಲು ಸಾಧ್ಯವಾಗುತ್ತಿಲ್ಲ. ವಾಸನೆ ವಿಪರೀತವಾಗಿದೆ ಎಂದು ಬೆಸ್ತರಗೇರಿ ಜನರು ದೂರಿದಾಗ, ಸ್ಥಳದಲ್ಲಿದ್ದ ವಲಯ ಕಚೇರಿ ಒಂದರ ಉಪ ಆಯುಕ್ತ ಮಂಜುನಾಥ್ ರೆಡ್ಡಿ ಅವರಿಗೆ ಸಂಬಂಧ ಪಟ್ಟ ಅಧಿಕಾರಿಗೆ ಹೇಳಿ ಶುಕ್ರವಾರ ಹಬ್ಬದ ನಂತರ ಬಾಕ್ಸ್ ಡ್ರೈನ್ ಕ್ಲೀನ್ ಮಾಡಿಸಲು ಸೂಚಿಸಿದರು.ಸೀತಾ ವಿಲಾಸ ಛತ್ರದ ಹಿಂಬಾಗದ ಖಾಲಿ ಜಾಗದಲ್ಲಿ ರಾತ್ರಿ ವೇಳೆ ಸ್ಥಳೀಯ ಹಾಗೂ ಕೆಲವು ಸಂದರ್ಭಗಳಲ್ಲಿ ಹೊರಗಿನ ಯುವಕರು ಗಾಂಜಾ ಅಫೀಮು ಮತ್ತು ಮದ್ಯಪಾನ ಮಾಡಿ ಸ್ಥಳೀಯರಿಗೆ ತೊಂದರೆ ಆಗುತ್ತಿರುವುದರ ಬಗ್ಗೆ ಶಾಸಕರ ಗಮನಕ್ಕೆ ತಂದರು. ಈ ಸಂಬಂಧ ಲಕ್ಷ್ಮಿ ಪುರಂ ಸರ್ಕಲ್ ಇನ್ಸ್ಪೆಕ್ಟರ್ ರವಿಶಂಕರ್ ಅವರಿಗೆ ದೂರವಾಣಿ ಕರೆ ಮಾಡಿ ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಈ ಭಾಗದಲ್ಲಿ ಹೆಚ್ಚು ಗಸ್ತು ಹಾಕಬೇಕು ಎಂದು ಅವರು ಸೂಚಿಸಿದರು.ಕುಂಬಾರಗೇರಿ ಮುಖ್ಯ ರಸ್ತೆಗೆ ಡಾಂಬರ್ ಮಾಡಿಸಲು ಸ್ಥಳೀಯರು ಕೇಳಿದರು ಮುಂದೆ ಆದ್ಯತೆ ಮೇಲೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.ಈ ವೇಳೆ ಮಾಜಿ ಮೇಯರ್ ಶಿವಕುಮಾರ್, ವಾರ್ಡ್ ಅಧ್ಯಕ್ಷ ಮಂಜು, ಜೋಗಪ್ಪ, ಜೋಗಿ ಮಂಜು, ಕೃಷ್ಣ ನಾಯಕ್, ನಂದೀಶ್, ಲೋಕೇಶ್, ಜಯಸಿಂಹ, ವಿಜಯಕುಮಾರ್, ಅರುಣ್, ಜಯಲಕ್ಷ್ಮೀ, ಕಿಶೋರ್, ಅನಿಲ್, ಶರತ್, ಹೇಮಂತ್, ಗಂಗಾಧರ್, ವಿನೋದ್, ಭಾಸ್ಕರ್, ಇಮ್ರಾನ್, ನಾಗರಾಜು, ಸಂತೋಷ್ ಚಿನ್ನು, ಆಟೋ ಕುಮಾರ್, ಭರತ್ ಮೊದಲಾದವರು ಇದ್ದರು.