ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ವಿಶೇಷ ಅನುದಾನದಡಿ ಕೈಗೊಂಡ ರಸ್ತೆ ಡಾಂಬರೀಕರಣ ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕ ಎಚ್.ಡಿ. ತಮ್ಮಯ್ಯ ಶನಿವಾರ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ವಿಶೇಷ ಅನುದಾನದಡಿ ಕೈಗೊಂಡ ರಸ್ತೆ ಡಾಂಬರೀಕರಣ ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕ ಎಚ್.ಡಿ. ತಮ್ಮಯ್ಯ ಶನಿವಾರ ಪರಿಶೀಲಿಸಿದರು.

ನಗರದ ವಿವಿಧ ವಾರ್ಡ್ ಗಳಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ, ‘ಸೈಕಲ್ ತುಳಿ ಸಮಸ್ಯೆ ತಿಳಿ’ ಘೋಷಣೆ ಯೊಂದಿಗೆ ನಾಗರಿಕರ ಸಮಸ್ಯೆಗಳನ್ನು ಆಲಿಸಲು ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನಗರದ ರಸ್ತೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸುಮಾರು ₹32 ಕೋಟಿ ವಿಶೇಷ ಅನುದಾನ ನಗರಸಭೆಗೆ ಬಿಡುಗಡೆಯಾಗಿದೆ. ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಿ, ಅರ್ಧಕ್ಕೂ ಹೆಚ್ಚು ರಸ್ತೆಗಳ ಡಾಂಬರೀಕರಣ ಪೂರ್ಣಗೊಂಡ ರಸ್ತೆಗಳನ್ನು ಸಾರ್ವಜ ನಿಕರ ಉಪಯೋಗಕ್ಕೆ ಸಮರ್ಪಿಸಿ, ಉಳಿದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದರು.

ವಾರ್ಡ್ ಸಂಖ್ಯೆ 5, ಚನ್ನಾಪುರ ರಸ್ತೆ, ವಾರ್ಡ್ ಸಂಖ್ಯೆ 6 ಸೆಂಟ್‌ಮೇರೀಸ್ ಶಾಲೆ ಬಳಿ, ವಾರ್ಡ್ ಸಂಖ್ಯೆ 7, ಗಾಂಧಿನಗರ ಆಟೋ ಸರ್ಕಲ್ ಹತ್ತಿರ ಹಾಗೂ ವಾರ್ಡ್ ಸಂಖ್ಯೆ 8 ಜಯನಗರ ಸಾಯಿಬಾಬಾ ಮಂದಿರದ ಹತ್ತಿರ, ವಾರ್ಡ್ ನಂ.10, ಉಂಡೇ ದಾಸರಹಳ್ಳಿ ರಾಮಯ್ಯ ಸರ್ಕಲ್ ಹತ್ತಿರ, ದೀಪ ನರ್ಸಿಂಗ್ ಹೋಂ ಬಳಿ ರಸ್ತೆ ಕಾಮಗಾರಿ ಉದ್ಘಾಟಿಸಿ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಸಿಡಿಎ ಅಧ್ಯಕ್ಷ ಮಂಜೇಗೌಡ, ಮಾಜಿ ಅಧ್ಯಕ್ಷ ಎಂ.ಎಲ್ ಮೂರ್ತಿ, ಆಯುಕ್ತ ಬಸವರಾಜ್, ಎಇಇ ಲೋಕೇಶ್, ಸ್ಥಳೀಯರಾದ ತನೋಜ್ ನಾಯ್ಡ್, ವೆಂಕಟೇಶ್ ನಾಯ್ಡ್, ಕೋಟೆ ಜಗಧೀಶ್, ಕೋಟೆ ಸೋಮಣ್ಣ, ಹಿರೇಮಗಳೂರು ರಾಮಚಂದ್ರ, ಪ್ರಸಾದ್ ಅಮಿನ್, ಇತರರು ಉಪಸ್ಥಿತರಿದ್ದರು.