ಚಿಕ್ಕಮಗಳೂರುಚಿಕ್ಕಮಗಳೂರಿನ ಶಾಸಕ ಎಚ್.ಡಿ. ತಮ್ಮಯ್ಯ ಹುಟ್ಟುಹಬ್ಬವನ್ನು ಭಾನುವಾರ ಅವರ ಅಭಿಮಾನಿಗಳು, ಸ್ನೇಹಿತರು, ಕಾಂಗ್ರೆಸ್ ಕಾರ್ಯಕರ್ತರು ಸಡಗರ, ಸಂಭ್ರಮದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರಿನ ಶಾಸಕ ಎಚ್.ಡಿ. ತಮ್ಮಯ್ಯ ಹುಟ್ಟುಹಬ್ಬವನ್ನು ಭಾನುವಾರ ಅವರ ಅಭಿಮಾನಿಗಳು, ಸ್ನೇಹಿತರು, ಕಾಂಗ್ರೆಸ್ ಕಾರ್ಯಕರ್ತರು ಸಡಗರ, ಸಂಭ್ರಮದಿಂದ ಆಚರಿಸಿದರು.

ಹುಟ್ಟುಹಬ್ಬದ ಅಂಗವಾಗಿ ಶಾಸಕರ ನಿವಾಸದ ಬಳಿ ಏರ್ಪಡಿಸಿದ್ದ ಆರೋಗ್ಯ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿದ ಬಳಿಕ ಶಾಸಕ ಎಚ್.ಡಿ. ತಮ್ಮಯ್ಯ, ಪತ್ನಿ ಮಂಗಳ ಅವರೊಂದಿಗೆ ಹಿರೇಮಗಳೂರಿನ ಶ್ರೀ ಕೊದಂಡರಾಮಚಂದ್ರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಅಧಿಕಾರಿ, ಸಿಬ್ಬಂದಿ,‌ ಕಾರ್ಯಕರ್ತರು, ಅಭಿಮಾನಿಗಳು ತಂದ ಕೇಕ್ ಕಟ್ ಮಾಡಿದ ಶಾಸಕ ಎಚ್.ಡಿ. ತಮ್ಮಯ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

ನಂತರ ಶಾಸಕರು ಸಖರಾಯಪಟ್ಟಣಕ್ಕೆ ತೆರಳಿದಾಗ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಜನ್ಮದಿನ ಆಚರಿಸಿದರು.

...ಬಾಕ್ಸ್...

ದೇವನೂರು ಗ್ರಾಮಕ್ಕೆ ಪೂರ್ಣ ಕುಂಭ ಸ್ವಾಗತ:

ಕಾರ್ಯಕ್ರಮ ನಿಯಮಿತ ದೇವನೂರು ತೆರಳಿದ ವೇಳೆ ಗ್ರಾಮದ ಮಹಿಳೆಯರು, ಮಕ್ಕಳು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು.

ಪೋಟೋ ೨ದೇವನೂರು ಗ್ರಾಮದಲ್ಲಿ ಭಾನುವಾರ ಶಾಸಕ ಎಚ್.ಡಿ. ತಮ್ಮಯ್ಯ ಭೇಟಿ‌ ನೀಡಿದಾಗ ಕಾರ್ಯಕರ್ತರು, ಅಭಿಮಾನಿಗಳು ಮೆರವಣಿಗೆ ನಡೆಸಿದರು.