ಸಾರಾಂಶ
ಹಸು ಇತರೆ ಜಾನುವಾರುಗಳ ಲಸಿಕಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ,ಹಾಗೂ ತುಮುಲ್ ಅಧ್ಯಕ್ಷ,ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ.ವೆಂಕಟೇಶ್ ರೈತರಿಗೆ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಹಸು ಇತರೆ ಜಾನುವಾರುಗಳ ಲಸಿಕಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ,ಹಾಗೂ ತುಮುಲ್ ಅಧ್ಯಕ್ಷ,ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ.ವೆಂಕಟೇಶ್ ರೈತರಿಗೆ ಕರೆ ನೀಡಿದರು.ಪಶು ಪಾಲನಾ ಆರೋಗ್ಯ ಇಲಾಖೆ ವತಿಯದ ಗುರುವಾರ ತಾಲೂಕಿನ ತಪಗಾನದೊಡ್ಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 8ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಶೇಖರಣಾ ಘಟಕದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಸು ಸಾಕಾಣಿಕೆ ಹಾಗೂ ಹೈನುಗಾರಿಕೆಯಿಂದ ರೈತರ ಪ್ರಗತಿ ಸಾಧ್ಯ. ಜಾನುವಾರುಗಳ ಆರೋಗ್ಯ ಆರೈಕೆ ಬಗ್ಗೆ ಹೆಚ್ವು ಗಮನ ಹರಿಸುವ ಮೂಲಕ ಕಾಪಾಡಿಕೊಳ್ಳಬೇಕಿದೆ. ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸುವ ಮೂಲಕ ಕಾಲು ಬಾಯಿ ಜ್ವರ ಲಸಿಕಾ ಅನುಕೂಲ ಪಡೆದುಕೊಳ್ಳುವಂತೆ ಕರೆ ನೀಡಿದರು.ಇದೇ ವೇಳೆ ತುಮುಲ್ ನಿರ್ದೇಶಕರಾದ ಚಂದ್ರಶೇಖರ ರೆಡ್ಡಿ, ನಾಗಲಮಡಿಕೆ ಗ್ರಾಪಂ ಅಧ್ಯಕ್ಷರಾದ ಪುರುಷೋತ್ತಮ್ ರೆಡ್ಡಿ,ವಿಎಸ್ ಎಸ್ ಅಧ್ಯಕ್ಷ ಪಾಲಾನಾಯ್ಕ್,ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ವರಕೇರಪ್ಪ,
ಹನುಮಂತರೆಡ್ಡಿ, ಶ್ರೀರಾಮಪ್ಪ,ಜೈರಾಮಪ್ಪ, ಕೆ ಎನ್ ಮಂಜುನಾಥ್, ಪೋಮ್ಯನಾಯ್ಕ್,ಪೀಕನಾಯ್ಕ್, ಅಂಜಪ್ಪ,ರವಿ, ವಿಸ್ತೀರಣಾಧಿಕಾರಿ ಸುನೀತಾ, ಸಮಾಲೋಚಕ ದಯಾನಂದ್, ನಂದೀಶ್, ವರ್ಷಿಣಿ ರವರು ಸೇರಿ ಇತರರು ಇದ್ದರು..;Resize=(128,128))
;Resize=(128,128))
;Resize=(128,128))