ಸಾರಾಂಶ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳಷ್ಟು ಯುವಜನತೆ, ವಿದ್ಯಾರ್ಥಿಗಳು ತೊಡಗಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಪುಟಗಳನ್ನು ನಾವು ಓದಬೇಕು, ಅಲ್ಲಿನ ಹೋರಾಟದ ದಿನಗಳಿಂದ ಸ್ಫೂರ್ತಿ ಪಡೆದು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ವಿಜಯಪುರಸೇವಾದಳ ದೇಶಾಭಿಮಾನ ಮೂಡಿಸುವ ಪವಿತ್ರ ಕಾರ್ಯದಲ್ಲಿ ತೊಡಗಿದೆ. ಹರ್ಡೀಕರ ಅವರಿಂದ ಸ್ಥಾಪನೆಯಾದ ಭಾರತ ಸೇವಾದಳ ಸ್ವಾತಂತ್ರ್ಯ ಹೋರಾಟ, ದೇಶಾಭಿಮಾನ ವೃದ್ಧಿಸುವ ನಿಟ್ಟಿನಲ್ಲಿ ಸಲ್ಲಿಸುತ್ತಿರುವ ಸೇವೆ ಅನನ್ಯ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ಸೇವಾದಳದ ಶತಮಾನೋತ್ಸವ ಕಾರ್ಯಕ್ರಮ ಅಂಗವಾಗಿ ನಡೆದ ಪ್ರಭಾತಪೇರಿಗೆ ಚಾಲನೆ ನೀಡಿ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳಷ್ಟು ಯುವಜನತೆ, ವಿದ್ಯಾರ್ಥಿಗಳು ತೊಡಗಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಪುಟಗಳನ್ನು ನಾವು ಓದಬೇಕು, ಅಲ್ಲಿನ ಹೋರಾಟದ ದಿನಗಳಿಂದ ಸ್ಫೂರ್ತಿ ಪಡೆದು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಕೆಎಚ್‌ಬಿ ಕಾಲೋನಿಯಿಂದ ಆರಂಭಗೊಂಡ ಪ್ರಭಾತಪೇರಿ ಬಿಎಲ್‌ಡಿಇ ರಸ್ತೆ, ಬಂಜಾರಾ ಕ್ರಾಸ್ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ನಂತರ ಎಂಪಿಎಸ್ ಶಾಲೆ ನಂ.೨೪ ರ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ - ತಾಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಮಾವೇಶ ನಡೆಯಿತು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಎಸ್.ಜೆ. ಬಿರಾದಾರ, ಕೇಂದ್ರ ಸಮಿತಿ ಸದಸ್ಯ ಶಿವನಗೌಡ ಬಿರಾದಾರ್, ಎಸ್.ಜಿ. ಕೋರಿ, ಡಿ.ಬಿ. ಹಿರೇಕುರುಬರ, ಅಶೋಕ ಗುಡದಿನ್ನಿ, ಶ್ರೀಶೈಲ್ ಬಳಗಾನೂರ, ಎಂ.ಟಿ. ಪೂಜಾರಿ, ಶಿವನಗೌಡ ಪಾಟೀಲ, ಬಸವರಾಜ ಜೋರಾಪೂರ, ಎಂ.ಜಿ. ಸಂಗೋಲಿ, ಎಸ್.ಬಿ. ಚಾಗಶೆಟ್ಟಿ, ಶ್ಯಾಮಲಾ ಮಂದೇವಾಲಿ, ಕೆ.ಎಸ್. ಧನಶೆಟ್ಟಿ, ನಾಗೇಶ ಡೋಣೂರ, ಬಿ.ವಿ. ಚಕ್ರಮಣಿ, ಎಂ.ಎಂ. ತೆಲಗಿ, ಸೋಮಶೇಖರ ರಾಠೋಡ ಮುಂತಾದವರು ಇದ್ದರು.