ಕೊರಗರ ವಿವಿಧೋದ್ದೇಶ ಕೇಂದ್ರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಶಿಲಾನ್ಯಾಸ

| Published : Sep 24 2025, 01:02 AM IST

ಕೊರಗರ ವಿವಿಧೋದ್ದೇಶ ಕೇಂದ್ರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಶಿಲಾನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ವಿಧಾನಸಭಾ ಕ್ಷೇತ್ರದ ಕಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಕಿಗುಡ್ಡೆ ಮತ್ತು ಕಲ್ಲುಗುಡ್ಡೆ ಕೊರಗರ ಕಾಲನಿಯಲ್ಲಿ 1.20 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧೋದ್ದೇಶ ಕೇಂದ್ರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ವಿಧಾನಸಭಾ ಕ್ಷೇತ್ರದ ಕಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಕಿಗುಡ್ಡೆ ಮತ್ತು ಕಲ್ಲುಗುಡ್ಡೆ ಕೊರಗರ ಕಾಲನಿಯಲ್ಲಿ 1.20 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧೋದ್ದೇಶ ಕೇಂದ್ರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.ನಂತರ ಕೇಂದ್ರ ಸರ್ಕಾರ ಕೊರಗ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಜಿಲ್ಲೆಗೆ ತಲಾ 60 ಲಕ್ಷ ರು. ವೆಚ್ಚದ 2 ವಿವಿಧೋದ್ದೇಶ ಕೇಂದ್ರಗಳು ಮಂಜೂರಾಗಿದ್ದು, ಅವುಗಳಲ್ಲಿ ಅಂಗನವಾಡಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮುದಾಯ ಭವನ, ಆರೋಗ್ಯ ಉಪಕೇಂದ್ರ, ಗ್ರಂಥಾಲಯಗಳಿರುತ್ತವೆ. ಈ ವಿವಿಧೋದ್ದೇಶ ಕೇಂದ್ರಗಳು ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶಕ್ತಿ ತುಂಬಲಿದೆ ಎಂದರು.ಈ ಸಂದರ್ಭ ಕಳ್ತೂರು‌ ಗ್ರಾ.ಪಂ. ಅಧ್ಯಕ್ಷ ನವೀನ್ ಕುಮಾರ್, ಉಪಾಧ್ಯಕ್ಷ ರಮಾನಂದ ಶೆಟ್ಟಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್, ಸ್ಥಳೀಯ ಪ್ರಮುಖರಾದ ಆದರ್ಶ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ನಾಗೇಶ್ ನಾಯ್ಕ್, ಉಷಾ ಪೂಜಾರಿ, ಸುಕನ್ಯ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ, ಸ್ಥಳೀಯರಾದ ಹರೀಶ್ ಶೆಟ್ಟಿ, ಸತೀಶ ಶೆಟ್ಟಿ, ಶೇಖರ ಕಲ್ಲುಗುಡ್ಡೆ, ಗೌರಿ ಕಲ್ಲುಗುಡ್ಡೆ, ಮನೋಜ್ ಶೆಟ್ಟಿ, ವಿನುತ್ ಶೆಟ್ಟಿ, ನವೀನ್ ಪುತ್ರನ್, ಅಜಿತ್ ಹೆಗ್ಡೆ, ದಿವಾಕರ ಕಳ್ತೂರು, ರವೀಂದ್ರ ಪೂಜಾರಿ, ಅಶೋಕ್ ಶೆಟ್ಟಿ, ಸದಾನಂದ ಪೂಜಾರಿ, ಸುಂದರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.