ಸಾರಾಂಶ
ನಮ್ಮ ತಂದೆ ಮಾಜಿ ಶಾಸಕ ಬಿ.ಆರ್. ಯಾವಗಲ್ ಈ ಕ್ಷೇತ್ರಕ್ಕೆ ಕಳೆದ 40 ವರ್ಷದಿಂದ ಮಾಡಿದ ಸೇವೆ ಗುರುತಿಸಿ ಸಿಎಂ ಸಿದ್ದರಾಮಯ್ಯ ಅವರು ನನ್ನನ್ನು ಗ್ಯಾರಂಟಿ ತಾಲೂಕಾಧ್ಯಕ್ಷನ್ನಾಗಿ ಮಾಡಿದ್ದಾರೆ.
ನರಗುಂದ: ನರಗುಂದ ಮತಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷನಾಗಿ ನಾನು ಕಾರ್ಯ ನಿರ್ವಹಿಸುತ್ತಿರುವುದನ್ನು ಶಾಸಕ ಸಿ.ಸಿ.ಪಾಟೀಲರಿಗೆ ಸಹಿಸಲಾಗುತ್ತಿಲ್ಲ ಎಂದು ವಿವೇಕ ಯಾವಗಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆ ಮಾಡಿದ್ದರಿಂದ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದೇನೆ. ಮೇಲಾಗಿ ನಮ್ಮ ತಂದೆ ಮಾಜಿ ಶಾಸಕ ಬಿ.ಆರ್. ಯಾವಗಲ್ ಈ ಕ್ಷೇತ್ರಕ್ಕೆ ಕಳೆದ 40 ವರ್ಷದಿಂದ ಮಾಡಿದ ಸೇವೆ ಗುರುತಿಸಿ ಸಿಎಂ ಸಿದ್ದರಾಮಯ್ಯ ಅವರು ನನ್ನನ್ನು ಗ್ಯಾರಂಟಿ ತಾಲೂಕಾಧ್ಯಕ್ಷನ್ನಾಗಿ ಮಾಡಿದ್ದಾರೆ. ಆದರೆ ಸ್ಥಳೀಯ ಶಾಸಕರು ನನ್ನ ಹಾಗೂ ತಂದೆಯವರ ರಾಜಕೀಯ ಏಳ್ಗೆ ಸಹಿಸದೇ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ, ಅವರೊಬ್ಬ ಹಿರಿಯ ರಾಜಕಾರಣಿ ಹಾಗೂ ಈ ಕ್ಷೇತ್ರದ ಶಾಸಕರಿದ್ದರು ಎನ್ನುವುದನ್ನು ಮರೆಯಬಾರದು. ಶಾಸಕರು ಹಾಗೂ ಅವರ ಮಕ್ಕಳು ರಾಜಕೀಯವಾಗಿ ಬೆಳೆದರೆ ನಾವು ಮೌನವಾಗಿದ್ದೇವೆ ಎಂದರುಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ನರಗುಂದ ಕ್ಷೇತ್ರದ ಜನತೆಗೆ ಸಂಪೂರ್ಣ ತಲುಪಿಸಿರುವ ತೃಪ್ತಿ ನನಗಿದೆ ಎಂದು ವಿವೇಕ ಯಾವಗಲ್ ಹೇಳಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾದ ದ್ಯಾಮಣ್ಣ ಕಾಡಪ್ಪನವರ, ಮಲ್ಲನಗೌಡ ಬಸನಗೌಡ್ರ, ಚಂದ್ರಶೇಖರಗೌಡ ಪಾಟೀಲ, ಉಮಾ ದ್ಯಾವನವರ, ಆರ್.ಐ. ನದಾಫ್, ಜಮಾದಾರ, ದೇವರಾಜ ನಾಗನೂರ, ಪ್ರಕಾಶ ಹಡಗಲಿ, ಹನಮಂತ ರಾಮಣ್ಣವರ ಸೇರಿದಂತೆ ಮುಂತಾದವರು ಇದ್ದರು.