ಸಾರಾಂಶ
ಶಾಸಕಿ ಕರೆಮ್ಮ ಜಿ.ನಾಯಕ ಅವರು ರಸ್ತೆಯನ್ನು ಅಧಿಕೃತವಾಗಿ ಅಕ್ರಮಗೊಳಿಸಿಕೊಂಡಿದ್ದಾರೆಂದು ಕಾಂಗ್ರೆಸ್ ಯುವ ಮುಖಂಡ ಸುರೇಶ ನಾಯಕ ದೂರಿದ್ದಾರೆ.
ದೇವದುರ್ಗ : ಶಾಸಕಿ ಕರೆಮ್ಮ ಜಿ.ನಾಯಕ ಅವರು ರಸ್ತೆಯನ್ನು ಅಧಿಕೃತವಾಗಿ ಅಕ್ರಮಗೊಳಿಸಿಕೊಂಡಿದ್ದಾರೆಂದು ಕಾಂಗ್ರೆಸ್ ಯುವ ಮುಖಂಡ ಸುರೇಶ ನಾಯಕ ದೂರಿದ್ದಾರೆ.
ರಾಯಚೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯರಿಗೆ ಮಂಗಳವಾರ ಮನವಿ ಸಲ್ಲಿಸಿದರು. ದೇವದುರ್ಗದ ಸರ್ವೇ ನಂಬರ್ 509/1 ಜಮೀನು ಪೊಲೀಸ್ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಪೊಲೀಸ್ ಪೇದೆಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ವಸತಿ ಗೃಹಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಪೊಲೀಸ್ ಇಲಾಖೆ ತಮ್ಮ ನಿವೇಶನ ಸುತ್ತಲೂ ತಂತಿಬೇಲಿ ಹಾಕಿಕೊಂಡು ರಕ್ಷಣೆಗೆ ಮುಂದಾಗಿದೆ.
ಆದರೆ, ಶಾಸಕಿ ಕರೆಮ್ಮ ಜಿ.ನಾಯಕ ತಮ್ಮ ಸಹೋದರ ತಿಮ್ಮಾರೆಡ್ಡಿಯವರಿಂದ ತಂತಿಬೇಲಿಯನ್ನು ತೆರವುಗೊಳಿಸಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಶಾಸಕರ ಸಹೋದರ ತಿಮ್ಮಾರೆಡ್ಡಿ ಹಾಗೂ ಪುತ್ರ ಸಂತೋಷಕುಮಾರ ಮೇಲೆ ಪ್ರಕರಣ ದಾಖಲಾಗಿದ್ದು, ಶಾಸಕಿ ಕರೆಮ್ಮ ಜಿ.ನಾಯಕ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಯಮಗಳ ಉಲ್ಲಂಘನೆ ಮಾಡಿ ಸಹಕರಿಸಲು ಒತ್ತಡ ಹೇರುತ್ತಿದ್ದಾರೆ.
ಕಂದಾಯ ಇಲಾಖೆಗಳ ಮೂಲಕ ದಾಖಲಾತಿ ಪ್ರಕಾರ ಶಾಸಕಿ ಕರೆಮ್ಮ ಜಿ.ನಾಯಕರ ಜಮೀನು ಕೃಷಿಯೇತರ ಜಮೀನೆಂದು ಬದಲಾವಣೆಗೊಂಡಿಲ್ಲ. ಈ ನಿವೇಶನಕ್ಕೆ ಸ್ಪಷ್ಟ ರಸ್ತೆ ಮಾರ್ಗವಿರುವುದಿಲ್ಲ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಶಾಶ್ವತ ರಸ್ತೆ ನಿರ್ಮಾಣಕ್ಕಾಗಿ ಶಾಸಕಿ ಕರೆಮ್ಮ ಜಿ.ನಾಯಕ ಪ್ರಯತ್ನಿಸಿದ್ದಾರೆ.
ಪರಿಣಾಮ ಪೊಲೀಸ್ ಇಲಾಖೆ ಕುಟುಂಬಗಳು ಶಾಸಕರ ಮನೆಗೆ ಬಂದು ಹೋಗುವ ಕಾರ್ಯಕರ್ತರ, ಮುಖಂಡರ ಕಿರಿಕಿರಿಗೆ ಒಳಗಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ರಸ್ತೆ ನಿರ್ಮಾಣವನ್ನು ತಡೆಹಿಡಿದು, ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಕಾಂಗ್ರೆಸ್ ಯುವ ಮುಖಂಡ ಸುರೇಶ ನಾಯಕ ಮನವಿ ಪತ್ರದಲ್ಲಿ ದೂರಿದ್ದಾರೆ. ಈ ಸಂದರ್ಭದಲ್ಲಿ ಶಿವುಕುಮಾರ ಪಾಟೀಲ್ ಗೋಪಾಳಪುರ ಇದ್ದರು.