ಅರೇಹಳ್ಳಿ ಗ್ರಾಪಂ ವ್ಯಾಪಿಯ ವಿರಾಜಪೇಟೆ - ಬೈಂದೂರು ರಾಜ್ಯ ಹೆದ್ದಾರಿಗೆ ಮರು ಡಾಂಬರೀಕರಣ ಕಾಮಗಾರಿ ಆರಂಭವಾಗುವ ಹಿನ್ನೆಲೆಯಲ್ಲಿ ವಾಟೇಹಳ್ಳಿ ಬಳಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರೇಹಳ್ಳಿ ಪಟ್ಟಣದಿಂದ ಬ್ಯಾದನೆ ಗ್ರಾಮದವರೆಗೂ ಸುಮಾರು ೧.೫ ಕೋಟಿ ರು. ವೆಚ್ಚದಲ್ಲಿ ೨.೫ ಕಿ.ಮೀ.ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ಸದ್ಯದಲ್ಲಿ ಆರಂಭವಾಗಲಿದೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ, ಇದಾಗಿರುವುದರಿಂದ ರಸ್ತೆಯು ಅಲ್ಲಲ್ಲಿ ಗುಂಡಿ ಬಿದ್ದು ಸುಗಮ ಸಂಚಾರ ಸವಾಲಾಗಿ ಪರಿಣಮಿಸುತ್ತಿದೆ. ಹಾಗಾಗಿ ಈ ರಸ್ತೆಯ ಮರು ಡಾಂಬರೀಕರಣಕ್ಕೆ ಆದ್ಯತೆ ನೀಡಿ ಶೀಘ್ರವಾಗಿ ಕಾಮಗಾರಿ ಮುಗಿಸಿ ಸವಾರರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಕಳೆದ ಬಾರಿ ಚರ್ಚ್‌ವರೆಗೆ ಅಂದಾಜು ಒಂದು ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಉಳಿದ ರಸ್ತೆಗೆ ಇದೀಗ ಮರು ಡಾಂಬರೀಕರಣ ಮಾಡಲಾಗುತ್ತ ದೆ ಎಂದು ಶಾಸಕ ಸುರೇಶ್ ಹೇಳಿದರು.

ತಾಲೂಕು ಲೋಕೋಪಯೋಗಿ ಇಲಾಖೆ ವತಿಯಿಂದ ಅರೇಹಳ್ಳಿ ಗ್ರಾಪಂ ವ್ಯಾಪಿಯ ವಿರಾಜಪೇಟೆ - ಬೈಂದೂರು ರಾಜ್ಯ ಹೆದ್ದಾರಿಗೆ ಮರು ಡಾಂಬರೀಕರಣ ಕಾಮಗಾರಿ ಆರಂಭವಾಗುವ ಹಿನ್ನೆಲೆಯಲ್ಲಿ ವಾಟೇಹಳ್ಳಿ ಬಳಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರೇಹಳ್ಳಿ ಪಟ್ಟಣದಿಂದ ಬ್ಯಾದನೆ ಗ್ರಾಮದವರೆಗೂ ಸುಮಾರು ೧.೫ ಕೋಟಿ ರು. ವೆಚ್ಚದಲ್ಲಿ ೨.೫ ಕಿ.ಮೀ.ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ಸದ್ಯದಲ್ಲಿ ಆರಂಭವಾಗಲಿದೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ, ಇದಾಗಿರುವುದರಿಂದ ರಸ್ತೆಯು ಅಲ್ಲಲ್ಲಿ ಗುಂಡಿ ಬಿದ್ದು ಸುಗಮ ಸಂಚಾರ ಸವಾಲಾಗಿ ಪರಿಣಮಿಸುತ್ತಿದೆ. ಹಾಗಾಗಿ ಈ ರಸ್ತೆಯ ಮರು ಡಾಂಬರೀಕರಣಕ್ಕೆ ಆದ್ಯತೆ ನೀಡಿ ಶೀಘ್ರವಾಗಿ ಕಾಮಗಾರಿ ಮುಗಿಸಿ ಸವಾರರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಈ ವೇಳೆ ಚಂದ್ರಶೇಖ‌ರ್, ಅಶೋಕ್, ಭರತ್, ಪ್ರಕಾಶ್, ಮಹೇಶ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಆನಂದ, ಗುಂಡಪ್ಪ ರಾಜ್ ಹಾಗೂ ಮತ್ತಿತರರಿದ್ದರು.