ಶಾಸಕರಿಂದ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶಿಲನೆ

| Published : Oct 26 2025, 02:00 AM IST

ಸಾರಾಂಶ

ತರೀಕೆರೆ, ಶಾಸಕರ ಅನುದಾನದಲ್ಲಿ ನಡೆಯುತ್ತಿರುವ ಲಕ್ಕವಳ್ಳಿ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರ ರೊಂದಿಗೆ ಪರೀಶೀಲನೆ ನಡೆಸಿದರು.

ಲಕ್ಕವಳ್ಳಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಶಾಸಕರ ಅನುದಾನದಲ್ಲಿ ನಡೆಯುತ್ತಿರುವ ಲಕ್ಕವಳ್ಳಿ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರ ರೊಂದಿಗೆ ಪರೀಶೀಲನೆ ನಡೆಸಿದರು.ಈಗಾಗಲೇ ಗ್ರಾಮದ ಮುಖ್ಯ ರಸ್ತೆಯ ಅಗಲೀಕರಣ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ಬಾಕ್ಸ್ ಚರಂಡಿಗಳ ನಿರ್ಮಾಣ ಕಾಮಗಾರಿ ಪ್ರಗತಿ ವೀಕ್ಷೆಣೆ ಮಾಡಿದರು. ರಸ್ತೆಯ ಅಗಲೀಕರಣಕ್ಕೆ ಮುಖ್ಯವಾಗಿ ನಿಗದಿತ ಅಳತೆ ವ್ಯಾಪ್ತಿಯ ಮನೆಗಳು ತುರ್ತಾಗಿ ತೆರವುಗೊಳಿಸಲು ಮನೆಗಳು ಮಾಲೀಕರನ್ನು ಭೇಟಿಯಾಗಿ ಮನವೊಲಿಸುವ ಪ್ರಯತ್ನ ಪಟ್ಟರು. ಬಾಕಿ ಇರುವ ಶೇ. 40 ರಷ್ಟು ಮನೆಯ ಭಾಗಗಳು ತೆರವು ಗೊಳಿಸಬೇಕಿದೆ. ಈ ಮುಖ್ಯ ರಸ್ತೆ ರಾಜ್ಯ ಹೆದ್ದಾರಿಗೆ ಒಳಪಟ್ಟಿರುವ, ಹಲವಾರು ಪ್ರೇಕ್ಷಣೀಯ ಸ್ಥಳಗಳು ಹಾಗೂ ಧಾರ್ಮಿಕ ಸ್ಥಳಗಳಿಗೆ ಹೋಗುವ ಮಲೆನಾಡಿನ ಹೆಬ್ಬಾಗಿಲು ಎಂದೇ ಪರಿಗಣಿಸಲ್ಪಟ್ಟಿರುವ ಗ್ರಾಮದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆಗಳಿಂದ ರಸ್ತೆ ಅಗಲೀಕರಣಕ್ಕೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಹೆಚ್ಚು ಒತ್ತು ನೀಡಿ ಸ್ವತಃ ಕಾಮಗಾರಿ ಪರಿಶೀಲಿಸಿದರು.

ಪರೀಶೀಲನೆ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಅಬ್ದುಲ್ ರೆಹಮಾನ್, ಸದ್ಯಸರಾದ ಎಲ್.ಎನ್. ಫಣಿರಾಜ್, ಶಿವಕುಮಾರ್, ಉಪಾಧ್ಯಕ್ಷೆ ಭವಾನಿಗಣೇಶ್, ಸಿಂಡಿಕೇಟ್ ಸದಸ್ಯರಾದ ಅರವಿಂದ್, ಕಾಡಾ ನಿಗಮದ ರಾಜಶೇಖರ್, ಗ್ರಾಮ ಜ್ಯೋತಿ ವಿದ್ಯಾಸಂಸ್ಥೆಯ ಹರೀಶ್ , ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕ ಸದಸ್ಯರಾದ ಎಲ್. ಟಿ. ಹೇಮಣ್ಣ, ಎಚ್.ಎನ್.ಮಂಜುನಾಥ್ ಲಾಡ್ ಹಾಗೂ ಇತರ ಗ್ರಾಮಪಂಚಾಯಿತಿ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.-

26ಕೆಟಿಆರ್.ಕೆ.4ಃ ಲಕ್ಕವಳ್ಳಿಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಂದ ಅಭಿವೃದ್ಧಿ ಕಾಮಗಾರಿ ಪ್ರಗತಿ ವೀಕ್ಷಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಮತ್ತಿತರರು ಭಾಗವಹಿಸಿದ್ದರು.