ಸಾರಾಂಶ
ಚುನಾವಣೆಯಲ್ಲಿ ಶಿಕ್ಷಕ ಬಂಧುಗಳು ಸಕ್ರಿಯವಾಗಿ ದುಡಿದು ನನ್ನನ್ನು ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆಗೊಳಿಸಿದ್ದಾರೆ. ಅಂತಹವರ ಕಷ್ಟಸುಖ ವಿಚಾರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಅವರ ಕಾಯಕಕ್ಕೆ ನನ್ನ ಸೇವೆ ಮೀಸಲಾಗಿರುತ್ತೇನೆ. ನನ್ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಯಾವುದೇ ಶಿಕ್ಷಕರಿಗೆ ಅನ್ಯಾಯವಾಗದ ರೀತಿಯಲ್ಲಿ ನೋಡಿಕೊಳ್ಳುವುದು ನನ್ನ ಆದ್ಯ ಜವಾಬ್ದಾರಿಯಾಗಿದೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ಬೈಕ್‌ನಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕ ಬಿ.ಕೆ.ಮಹದೇವ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಭಾರತೀ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಬಿ.ಕೆ.ಮಹದೇವ ಅವರು ಇತ್ತೀಚಿಗೆ ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಬಲಗಾಲು ಮತ್ತು ಎಡಗೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ವಿಷಯ ತಿಳಿದು ಪರಿಷತ್ ಸದಸ್ಯ ವಿವೇಕಾನಂದ ಅವರು ಮಹದೇವ ಅವರ ಮನೆಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿ ಯೋಗಕ್ಷೇಮ ವಿಚಾರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಶಿಕ್ಷಕ ಬಂಧುಗಳು ಸಕ್ರಿಯವಾಗಿ ದುಡಿದು ನನ್ನನ್ನು ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆಗೊಳಿಸಿದ್ದಾರೆ. ಅಂತಹವರ ಕಷ್ಟಸುಖ ವಿಚಾರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಅವರ ಕಾಯಕಕ್ಕೆ ನನ್ನ ಸೇವೆ ಮೀಸಲಾಗಿರುತ್ತೇನೆ. ನನ್ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಯಾವುದೇ ಶಿಕ್ಷಕರಿಗೆ ಅನ್ಯಾಯವಾಗದ ರೀತಿಯಲ್ಲಿ ನೋಡಿಕೊಳ್ಳುವುದು ನನ್ನ ಆದ್ಯ ಜವಾಬ್ದಾರಿಯಾಗಿದೆ ಎಂದರು.
ನನ್ನ ಶಾಸಕತ್ವದಿಂದ ಬರುವ ಗೌರವ ಧನವನ್ನು ಶಿಕ್ಷಕರ ಕಲ್ಯಾಣಾಭಿವೃದ್ಧಿಗೆ ಮೀಸಲಿಟ್ಟಿದ್ದೇನೆ. ಈಗಾಗಲೇ ಸಮಸ್ಯೆಯಲ್ಲಿರುವು ಹಲವು ಶಿಕ್ಷಕರಿಗೆ ನನ್ನ ವೇತನವನ್ನು ನೀಡಿ ಸ್ಪಂದಿಸಿದ್ದೇನೆ ಎಂದರು.ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಂಘದ ಉಪಾಧ್ಯಕ್ಷ ತಳಗವಾದಿ ಹನುಮಂತಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಶಿವಾನಂದ, ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಬೋರಯ್ಯ, ಕೆ.ಟಿ.ಸುರೇಶ್ ಸೇರಿದಂತೆ ಹಲವರಿದ್ದರು.