ಮಂಗಳೂರು: ರಾಜ್ಯದಾದ್ಯಂತ ಅಪಾರ ಸಂಖ್ಯೆಯ ಸದಸ್ಯರನ್ನು ಹೊಂದಿ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಸಂಸ್ಥೆ ಮಂಗಳೂರು ತಾಲೂಕು ಮಟ್ಟದ ಪದಪ್ರದಾನ ಮತ್ತು ಕಲಾ ಸಂಭ್ರಮ ಸಮಾರಂಭ ಮಂಗಳೂರಿನ ನಂತೂರಿನ ಸಂದೇಶ ಸಭಾಭವನದಲ್ಲಿ ನಡೆಯಿತು.ಹಿರಿಯ ಸಾಹಿತಿ ಪ್ರೊ.ಭುವನೇಶ್ವರಿ ಹೆಗಡೆ ಉದ್ಘಾಟಿಸಿದರು. ದ.ಕ. ಜಿಲ್ಲಾ ಆಮಂತ್ರಣ ವೇದಿಕೆಯ ಅಧ್ಯಕ್ಷೆ ವಿಂದ್ಯಾ ಎಸ್.ರೈ ಕಡೇಶಿವಾಲಯ ಅಧ್ಯಕ್ಷತೆ ವಹಿಸಿದ್ದರು. ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಸಂಚಾಲಕ ವಿಜಯ ಕುಮಾರ್ ಜೈನ್ ಪದಪ್ರಧಾನ ನೆರವೇರಿಸಿದರು.ಎಕ್ಸೆಲ್ ಸಮೂಹ ಸಂಸ್ಥೆ ಗುರುವಾಯನಕೆರೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಹಿರಿಯ ಸಾಹಿತ್ಯ ಪ್ರೇಮಿ ಬಿ.ಭುಜಬಲಿ, ಮಲ್ಲಿನಾಥ್ ಜೈನ್ ಧರ್ಮಸ್ಥಳ, ದ.ಕ. ಜಾನಪದ ಪರುಷತ್ ಅಧ್ಯಕ್ಷ ಪ್ರವೀಣ್ ಕೊಡಿಯಾಲ್‌ಬೈಲ್, ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ಅರುಣ್ ಅರುವ, ಸಾಹಿತಿ ಭುವನೇಶ್ವರಿ ಹೆಗಡೆ, ಮೆಸ್ಕಾಂ ಸಹಾಯಕ ಎಂಜಿನೀಯರ್ ರಾಜೇಶ್ ಮತ್ತಿತರರು ಇದ್ದರು.
ಬೆಟ್ಟದ ಭಾಗೀರಥಿ ಖ್ಯಾತಿಯ ಸಾಹಿತಿ ಭುವನೇಶ್ವರಿ ಹೆಗಡೆ, ಎಕ್ಸೆಲ್‌ನ ಸುಮಂತ್ ಕುಮಾರ್ ಜೈನ್, ಅಕ್ಷರ ಸಂತ ಹರೇಕಳ ಹಾಜಬ್ಬ, ಆಮಂತ್ರಣ ಉಯ್ಯಾಲೆ ತಂಡದ ಅಧ್ಯಕ್ಷೆ ಸೌಮ್ಯ ತಿಲಕ್ ಶೆಟ್ಟಿ ಮಿಜಾರು, ಯುಗಾದಿ ಬಳಗದ ಸಂಸ್ಥಾಪಕ ಶ್ರೀನಾಗ್ ಹೊನ್ನಾವರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ.ಅರುಣಾ ನಾಗರಾಜ್, ಮಾ.ಅಭಿಷೇಕ್ ಪ್ರಭು, ಕುಮಾರಿ ಶ್ರೇಯಾ ಮುರ್ಕಜೆ, ಮಾ.ಪ್ರಧಯ್ ಕಿರಣ್ ಶೆಣೈ, ಮಾ.ಪ್ರೀತಮ್ ಜಿ.ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಆಮಂತ್ರಣ ದೇವರ ಮಕ್ಕಳು ಪುಸ್ತಕವನ್ನು ಎಕ್ಸೆಲ್ ಶಿಕ್ಷಣ ಸಂಸ್ಥೆಯ ಸುಮಂತ್ ಕುಮಾರ್ ಜೈನ್ ಬಿಡುಗಡೆಗೊಳಿಸಿ, ವಿದ್ಯಾಶ್ರೀ ಅಡೂರು ಅವರ ಕವಿತೆಯೆಂಬ ಕೇದಗೆ ಧ್ವನಿ ಮುದ್ರಣ ಲೋಕಾರ್ಪಣೆ ಮಾಡಿದರು.ಆಮಂತ್ರಣ ರಾಜ್ಯ ನಿರ್ದೇಶಕರಾದ ಆಶಾ ಅಡೂರು, ಉಮಾ ಸುನಿಲ್ ಹಾಸನ, ಜಿಲ್ಲಾ ನಿರ್ದೇಶಕರಾದ ಚೇತನ್ ಅಮೈ, ರಾಕೇಶ್ ಪೊಳಲಿ, ವಿಶಾಲಾಕ್ಷಿ ಹೆಗ್ಡೆ ಮಿಜಾರು, ರಂಜನ್ ಕುಮಾರ್ ನೆರಿಯ, ಅನ್ನಪೂರ್ಣ ಕಿರಣ್ ಅಂಬಲಪಾಡಿ ಉಡುಪಿ, ಶೋಭ ದಿನೇಶ್ ಉದ್ಯಾವರ, ಜಿಲ್ಲಾ ಅಧ್ಯಕ್ಷರಾದ ಪುಷ್ಪಪ್ರಸಾದ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷೆ ಅಮಿತಾ ಶಮಂತ್, ಮುಂಬಯಿ ವೇದಿಕೆಯ ಅಧ್ಯಕ್ಷೆ ಸರ್ವಮಂಗಳ ಶೆಟ್ಟಿ, ಬಂಟ್ವಾಳ ತಾಲೂಕಾಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ವಿದ್ಯಾಶ್ರೀ ಅಡೂರು,ಮೂಡುಬಿದಿರೆ ಅಧ್ಯಕ್ಷೆ ಕವಿತಾ ದಿನೇಶ್, ಬ್ರಹ್ಮಾವರ ಅಧ್ಯಕ್ಷೆ ಸುಮಾ ಕಿರಣ್ ಬಸ್ರೂರು, ಪುತ್ತೂರು ಅಧ್ಯಕ್ಷೆ ಆಶಾ ಮಯ್ಯ, ಪ್ರಕಾಶ್ ಆಚಾರ್ಯ, ಪ್ರಸಾದ್ ನಾಯಕ್ ಕಾರ್ಕಳ, ಧನರಾಜ್ ಆಚಾರ್ಯ, ಕಲಾ ಪ್ರತಿಭೆಯ ವಿಜಯ ಮುಂಡ್ಲಿ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.ಲತೇಶ್ ಪುತ್ರನ್, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಮಂಗಳೂರು ಘಟಕದ ಅಧ್ಯಕ್ಷರಾಗಿ ಪದ ಪ್ರದಾನ ಪಡೆದುಕೊಂಡರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ಮಂಗಳೂರು ಆಮಂತ್ರಣ ವೇದಿಕೆಯ ಅಧ್ಯಕ್ಷ ಲತೇಶ್ ಪುತ್ರನ್, ಕಾರ್ಯದರ್ಶಿ ಕಸ್ತೂರಿ ಜಯರಾಮ್, ಉಪಾಧ್ಯಕ್ಷ ಡೊಂಬಯ್ಯ ಇಡ್ಕಿದು, ಜೊತೆ ಕಾರ್ಯದರ್ಶಿ ರೂಪಕಲಾ ಭಟ್, ಸಾಂಸ್ಕೃತಿಕ ಕಾರ್ಯದರ್ಶಿ ಚೇತನಾ, ಕೋಶಾಧಿಕಾರಿ ಎನ್ ನಾಗೇಂದ್ರ, ನಿರ್ದೇಶಕರಾದ ಅನಿತಾ ಶೆಣೈ ಮತ್ತು ರಶ್ಮಿ ಸನಿಲ್, ರೋನಿ ಕ್ರಾಸ್ತ ,ಕು.ನಿರೀಕ್ಷಿತಾ ಪದಸ್ವೀಕಾರ ಮಾಡಿ ನೂತನ ಜವಾಬ್ದಾರಿಯಿಂದ ಆಮಂತ್ರಣ ಸಾಹಿತ್ಯ ವೇದಿಕೆಯನ್ನು ಮಂಗಳೂರಿನಲ್ಲಿ ಮುನ್ನಡೆಸಲು ವಿವಿಧ ಜವಾಬ್ದಾರಿ ಹಂಚಿಕೊಂಡರು.
ಲತೇಶ್ ಪುತ್ರನ್ ಸ್ವಾಗತಿಸಿ, ಡೊಂಬಯ್ಯ ಇಡ್ಕಿದು ವಂದಿಸಿದರು. ಡಾ.ಪ್ರಿಯ ಹರೀಶ್ ನಿರ್ವಹಿಸಿದರು. ಕಸ್ತೂರಿ ಜಯರಾಮ್ ಕಾವೂರು ಸಹಕರಿಸಿದರು.