ರಾಮನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಡೆಯುತ್ತಿರುವ ಕೂಲಿಕರಾರರ ಇ-ಕೆವೈಸಿ ಪ್ರಕ್ರಿಯೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಶೇ.88.19ರಷ್ಟು ಪೂರ್ಣಗೊಂಡಿದೆ.

ರಾಮನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಡೆಯುತ್ತಿರುವ ಕೂಲಿಕರಾರರ ಇ-ಕೆವೈಸಿ ಪ್ರಕ್ರಿಯೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಶೇ.88.19ರಷ್ಟು ಪೂರ್ಣಗೊಂಡಿದೆ.

ಈಗಾಗಲೇ ಉದ್ಯೋಗ ಚೀಟಿಗಳಿಗೆ ಕೂಲಿಕಾರರ ಆಧಾರ ದತ್ತಾಂಶ ಜೋಡಿಸಲಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎನ್‍ಎಂಎಂಎಸ್ ಆಪ್ ಮೂಲಕ ಕೂಲಿಕಾರರ ಮುಖ ಚಹರೆ ತಾಳೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಹಾಗೂ ನರೇಗಾ ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಎನ್‍ಎಂಎಂಎಸ್ ಆಪ್ ಡೌನ್ ಲೋಡ್ ಮಾಡಿಕೊಂಡು ಕೂಲಿಕಾರರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ದಾಖಲಿಸಿ, ಅವರ ಮುಖಚಹರೆ ಸೆರೆ ಹಿಡಿದು ಇ - ಕೆವೈಸಿ ಮಾಡುತ್ತಿದ್ದಾರೆ.

ಮೊದಲ ಹಂತದಲ್ಲಿ ಹಾಸನ, ಕೋಲಾರ, ತುಮಕೂರು, ಕೊಪ್ಪಳ, ಹಾವೇರಿ ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಆಯ್ಕೆ ಮಾಡಲಾಗಿತ್ತು. ಇದು ಯಶಸ್ವಿಯಾದ ನಂತರ ಇತರ ಜಿಲ್ಲೆಗಳಿಗೂ ಇ-ಕೆವೈಸಿಯನ್ನು ವಿಸ್ತರಿಸಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು 4,03,820 ನರೇಗಾ ಕೂಲಿಕಾರ್ಮಿಕರಿದ್ದು, ಅವುಗಳ ಪೈಕಿ 2,32,071 ಕೂಲಿಕಾರ್ಮಿಕರ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಅಂದರೆ ಒಟ್ಟು ಕೂಲಿಕಾರ್ಮಿಕರ ಪೈಕಿ ಶೇ.57.47 ರಷ್ಟುಇ-ಕೆವೈಸಿ ಪೂರ್ಣಗೊಂಡಿದೆ. ಈ ಪೈಕಿ ರಾಮನಗರ ತಾಲೂಕಿನಲ್ಲಿ ಒಟ್ಟು 74409 ಕೂಲಿಕಾರ್ಮಿಕರ ಪೈಕಿ 45838 ಕೂಲಿಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿದೆ. ಕನಕಪುರ ತಾಲೂಕಿನಲ್ಲಿ 1,09,098 ಕೂಲಿಕಾರ್ಮಿಕರಿದ್ದು ಈ ಪೈಕಿ 68,110 ಜನರಇ-ಕೆವೈಸಿ ಪೂರ್ಣಗೊಂಡಿದೆ. ಚನ್ನಪಟ್ಟಣದಲ್ಲಿ 97,224 ಕೂಲಿಕಾರ್ಮಿಕರ ಪೈಕಿ 54891 ಕೂಲಿಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿದ್ದರೆ, ಮಾಗಡಿಯಲ್ಲಿ 84,439 ಕೂಲಿಕಾರ್ಮಿಕರ ಪೈಕಿ 41,742 ಇ-ಕೆವೈಸಿ ಪೂರ್ಣಗೊಂಡಿದೆ. ಹಾರೋಹಳ್ಳಿಯಲ್ಲಿ 38,650 ಕೂಲಿಕಾರ್ಮಿಕರ ಪೈಕಿ 21,490 ಇ-ಕೆವೈಸಿ ಮುಗಿಸಲಾಗಿದೆ.

ಹಾಲಿ 1.79 ಲಕ್ಷ ಕೂಲಿ ಕಾರ್ಮಿಕರ ಇ ಕೆವೈಸಿ ಪೂರ್ಣ :

ಜಿಲ್ಲೆಯಲ್ಲಿ ಒಟ್ಟು 2,03,173 ಮಂದಿ ಹಾಲಿ ನರೇಗಾ ಕೂಲಿಕಾರ್ಮಿಕರಿದ್ದು, ಈ ಪೈಕಿ 1,79,188 ಕೂಲಿಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿದೆ. ಕನಕಪುರದಲ್ಲಿ 65,248 ಹಾಲಿ ಕೂಲಿಕಾರ್ಮಿಕರಿದ್ದು ಈ ಪೈಕಿ 55,446 ಕೂಲಿಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿದೆ. ಚನ್ನಪಟ್ಟಣದಲ್ಲಿ 53,009 ಹಾಲಿ ಕೂಲಿಕಾರ್ಮಿಕರಿದ್ದು, 45,469 ಮಂದಿಯ ಇ-ಕೆವೈಸಿ ಪೂರ್ಣಗೊಂಡಿದರೆ. ಅದೇ ರೀತಿ ಮಾಗಡಿ ತಾಲೂಕಿನಲ್ಲಿ 37,770 ಹಾಲಿ ಕೂಲಿಕಾರ್ಮಿಕರ ಪೈಕಿ, 34,114 ಇ-ಕೆವೈಸಿ ಮುಗಿದಿದ್ದರೆ, ರಾಮನಗರ ತಾಲೂಕಿನಲ್ಲಿ 30,667 ಹಾಲಿ ಕೂಲಿಕಾರ್ಮಿಕರ ಪೈಕಿ 28450 ಕೂಲಿಕಾರ್ಮಿಕರ ಇ-ಕೆವೈಸಿ ಪೂರ್ಣಗೊಳಿಸಲಾಗಿದೆ. ಇನ್ನು ಹಾರೋಹಳ್ಳಿ ತಾಲೂಕಿನಲ್ಲಿ 16,479 ಕೂಲಿಕಾರ್ಮಿಕರು ಹಾಲಿ ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 15,709 ಮಂದಿಯ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಕೈಗೊಂಡ ಸಂದರ್ಭದಲ್ಲಿ ನಕಲಿ ಕಾರ್ಮಿಕರ ಹಾಜರಾತಿ ಹಾಕುವುದು, ಪುರುಷರಿಗೆ ಸೀರೆ ಉಡಿಸಿ, ಮಹಿಳಾ ಕೂಲಿಕಾರರ ಹಾಜರಾತಿ ತೋರಿಸಿ ವೇತನ ಪಾವತಿ ಪ್ರಕರಣಗಳು ಹಲವೆಡೆ ಬೆಳಕಿಗೆ ಬಂದಿದ್ದವು. ಈ ರೀತಿಯಲ್ಲಿ ಯೋಜನೆಯ ಹಣ ದುರ್ಬಳಕೆ ಹಾಗೂ ನಕಲಿ ಕಾರ್ಮಿಕರ ಹಾಜರಾತಿ ತಡೆಯುವ ನಿಟ್ಟಿನಲ್ಲಿ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ (ಎನ್‍ಎಂಎಂಎಸ್) ಅಡಿ ಇ-ಕೆವೈಸಿ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಕೆಲಸಕ್ಕೆ ಬಂದವರ ಫೋಟೋ ಸೆರೆಯಾಗಿ ಹಾಜರಾತಿ :

ಈ ಹಿಂದೆ ಕೆಲಸಕ್ಕೆ ಬಾರದೆ ಕೂಲಿ ಪಡೆಯುವುದು ಹಾಗೂ ಮೃತರ ಖಾತೆಗೂ ಕೂಲಿ ಹಣ ಹಾಕಿ ಡ್ರಾ ಮಾಡಿಕೊಳ್ಳುವ ಅಕ್ರಮ ನಡೆಯುತ್ತಿತ್ತು. ಅಲ್ಲದೆ ಯಂತ್ರಗಳನ್ನು ಬಳಸಿ ಕಾಮಗಾರಿ ಮಾಡಿ ಯಾರದ್ದೊ ಹೆಸರಿನಲ್ಲಿವ ಬಿಲ್ ಪಡೆಯಲಾಗುತ್ತಿದೆ ಎನ್ನುವ ಆರೋಪಗಳಿದ್ದವು. ಈ ಎಲ್ಲಾ ಅಕ್ರಮ ತಡೆಯಲು ಇ-ಕೆವೈಸಿ ಅಪಡೇಟ್‍ನಿಂದ ಸಹಕಾರಿಯಾಗಲಿದೆ. ಕೆಲಸಕ್ಕೆ ಬಂದವರ ಫೋಟೋ ಮಾತ್ರ ಸೆರೆಯಾಗಲಿದ್ದು ಹಾಜರಾತಿ ಬೀಳಲಿದೆ.

ಇ-ಕೆವೈಸಿ ಅಪ್ ಡೇಟ್ ಮಾಡಲು ಗ್ರಾಮ ಪಂಚಾಯ್ತಿಯ ಗ್ರಾಮ ಕಾಯಕಮಿತ್ರರು ಹಾಗೂ ಬಿಎಫ್‍ಟಿ ಸಿಬ್ಬಂದಿಗೆ ಹಾಗೂ ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇವರು ತಮ್ಮ ಮೊಬೈಲ್ ನಲ್ಲಿ ಎನ್‍ಎಂಎಂಎಸ್ ಆಪ್ ಡೌನ್ ಲೋಡ್ ಮಾಡಿಕೊಂಡು ಕೂಲಿಕಾರರ ಮನೆಮನೆಗಳಿಗೆ ತೆರಳಿ ಅವರ ಉದ್ಯೋಗಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ದಾಖಲಿಸಿ, ಅವರ ಮುಖಚಹರೆ ಸೆರೆ ಹಿಡಿದು ಇ-ಕೆವೈಸಿ ಮಾಡುವ ಕೆಲಸ ಮಾಡುತ್ತಿದ್ದಾರೆ.

ಬಾಕ್ಸ್ ...............

ಎನ್‌ಎಂಎಂಎಸ್ ಹಾಜರಾತಿ

ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರ ಪ್ರತಿಯೊಬ್ಬರ ಎಣಿಕೆ ಮೂಲಕ ಎನ್‌ಎಂಎಂಎಸ್ ಹಾಜರಾತಿ ಸಂಖ್ಯೆ ಆನ್ ಲೈನ್ ತೆಗೆದುಕೊಳ್ಳುತ್ತಿದ್ದು, ಇ - ಕೆವೈಸಿ ಹೊಂದುವ ಕೂಲಿಕಾರರ ಹಾಜರಾತಿ ತೆಗೆದುಕೊಳ್ಳುವಾಗ ಅವರ ಆಧಾರ್ ನಂಬರ್ ಮತ್ತು ಸ್ಥಳದಲ್ಲಿ ಹಾಜರಿದ್ದವರ ಮುಖ ಹೊಂದಾಣಿಕೆಯಾಗಿದ್ದಲ್ಲಿ ಮಾತ್ರ ಅವರನ್ನು ಎನ್ ಎಂಎಂಎಸ್ ಪರಿಗಣಿಸಲಾಗುತ್ತದೆ.

21ಕೆಆರ್ ಎಂಎನ್ 2.ಜೆಪಿಜಿ

ನರೇಗಾ ಕೂಲಿಕಾರ್ಮಿಕರ ಮನೆಮನೆಗಳಿಗೆ ತೆರಳಿ ಇ-ಕೆವೈಸಿ ಮಾಡಿಸುತ್ತಿರುವ ಸಿಬ್ಬಂದಿ.