ಹೊಳೆಹರಳಹಳ್ಳಿ ಬಳಿ ಮೊಬೈಲ್‌, ನಗದು ವಶ

| Published : Mar 21 2024, 01:00 AM IST

ಸಾರಾಂಶ

ಬುಧವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಎಸ್.ಎಸ್.ಟಿ. ತಂಡದವರು ಖಾಸಗಿ ಬಸ್ ತಪಾಸಣೆ ಮಾಡಿದ ಸಮಯದಲ್ಲಿ ಯಾವುದೇ ದಾಖಲೆಗಳಿಲ್ಲದ 3,98,000 ರು. ನಗದು ವಶಕ್ಕೆ ಪಡೆಯಲಾಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲ್ಲೂಕಿನ ಹೊಳೆಹರಳಹಳ್ಳಿ ಕ್ರಾಸ್‍ನ ಚೆಕ್ ಪೋಸ್ಟ್ ಬಳಿ ಬುಧವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಎಸ್.ಎಸ್.ಟಿ. ತಂಡದವರು ಖಾಸಗಿ ಬಸ್ ತಪಾಸಣೆ ಮಾಡಿದ ಸಮಯದಲ್ಲಿ ಯಾವುದೇ ದಾಖಲೆಗಳಿಲ್ಲದ 3,98,000 ರು. ನಗದು ವಶಕ್ಕೆ ಪಡೆದು ಖಜಾನಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾ ಧಿಕಾರಿ ಅಭಿಷೇಕ್ ತಿಳಿಸಿದರು.ಅಬ್ದುಲ್ ಖಲೀಲ್ ಎಂಬ ವ್ಯಕ್ತಿಯ ಬ್ಯಾಗಲ್ಲಿ ಯಾವುದೇ ದಾಖಲೆಗಳಿಲ್ಲದ ಜಿಯೋ ಕಂಪೆನಿಯ 17 ಟಚ್ ಪ್ಯಾಡ್ ಮತ್ತು ಸ್ಯಾಮ್‍ಸಂಗ್ ಕಂಪೆನಿಯ ಗುರು ಮ್ಯೂಸಿಕ್ ಮಾಡೆಲ್‍ನ 4 ಮೊಬೈಲ್‌ಗಳು ಸೇರಿದಂತೆ ಒಟ್ಟು 21 ಮೊಬೈಲ್‍ಗಳನ್ನು ಮತ್ತು ನಂದಿಗುಡಿಯ ಪ್ರೌಢಶಾಲಾ ಶಿಕ್ಷಕರ ಅವರ ದ್ವಿಚಕ್ರ ವಾಹನವನ್ನು ತಪಾಸಣೆ ಮಾಡಿದಾಗ ಯಾವುದೇ ದಾಖಲೆಗಳಿಲ್ಲದ 3,98,000 ರು. ನಗದು ದೊರೆತಿದೆ.

ತಪಾಸಣೆ ವೇಳೆಯಲ್ಲಿ ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ, ಹೊನ್ನಾಳಿ ತಹಶೀಲ್ದಾರ್ ಪುರಂದರ ಹೆಗ್ಡೆ, ಫ್ಲೈಯಿಂಗ್ ಸ್ಕ್ವಾಡ್ ಕೃಷಿ ಅಧಿಕಾರಿ ಅತೀಕ್ ಉಲ್ಲಾ, ಎಸ್.ಎಸ್.ಟಿ. ತಂಡದ ಉಪನ್ಯಾಸಕ ಎಚ್.ದೊಡ್ಡಸ್ವಾಮಿ, ಎಚ್. ಎಲ್.ಬಸವರಾಜ್, ಪೊಲೀಸ್ ಸಿಬ್ಬಂದಿ ಎಚ್.ಎಲ್. ಉಮೇಶ್, ಗ್ರಾಮ ಆಡಳಿತಾಧಿಕಾರಿ ಭರ್ಮಪ್ಪ ಅಂಚಿನಮನೆ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಲೋಕಸಭಾ ಚುನಾವಣೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ನ್ಯಾಮತಿ ತಾಲ್ಲೂಕಿನ ಹೊಳೆಹರಹಳ್ಳಿ ಚೆಕ್ ಪೋಸ್ಟ್ ಬಳಿ ಮಾ.20 ರಂದು ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ 3.98 ಲಕ್ಷ ನಗದು ಮತ್ತು 21 ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.