ಮೊಬೈಲ್‌ ಅವಶ್ಯಕವೇ ಹೊರತು ಅನಿವಾರ್ಯವಲ್ಲ

| Published : Jan 19 2025, 02:16 AM IST

ಸಾರಾಂಶ

ಸಾಮಾನ್ಯವಾಗಿ ಮಕ್ಕಳು ಮೆಡಿಕಲ್ ಹಾಗೂ ಎಂಜಿನಿಯರಿಂಗ್ ವ್ಯಾಸಂಗ ಮಾಡುವಂತ ಕನಸು ಹೊತ್ತಿದ್ದ ಕನ್ನಡದ ಸಾಹಿತಿಗಳು, ಕವಿಗಳಾಗ ಬೇಕೆಂಬ ಆಶಯವನ್ನು ಹೊತ್ತವರು ವಿರಳ. ಓದಿವ ಬರೆಯುವಂತ ಪುಸ್ತಕಗಳ ನಡುವೆ ಅಭಿರುಚಿ ಬೆಳೆಸಿ ಕೊಂಡು ಭಾವನಾತ್ಮಕ ಬೆಸುಗೆ ಹೊಂದಬೇಕು

ಕನ್ನಡಪ್ರಭ ವಾರ್ತೆ ಕೋಲಾರವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಮೊಬೈಲ್, ಕಂಪ್ಯೂಟರ್ ಇತ್ಯಾದಿಗಳ ಅತಿಬಳಕೆಯ ಹುಚ್ಚಾಟದಲ್ಲಿ ವಿದ್ಯಾಭ್ಯಾಸ ಕಡೆಗಣಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ರವಿ ತಿಳಿಸಿದರು.

ನಗರದ ಕನ್ನಡದ ಭವನದಲ್ಲಿ ವಿಶ್ವಮಾನವ ಕುವೆಂಪು ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಓದುವ ಮತ್ತು ಬರೆಯುವಂತ ಸೃಜನಶೀಲತೆಯ ಅಭಿರುಚಿ ಅಳವಡಿಸಿಕೊಳ್ಳಬೇಕು. ಮೊಬೈಲ್ ಅವಶ್ಯಕ ಆದರೆ ಅನಿವಾರ್ಯವಲ್ಲ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತ ಹಾಗೂ ಅವಿಸ್ಮರಣೀಯ ಭಾಷೆಯಾಗಿದೆ ಎಂದರು.

ಅಕ್ಷರ ಸಂಬಂಧ ಬೆಳೆಸಿಕೊಳ್ಳಿ

ಸಾಮಾನ್ಯವಾಗಿ ಮಕ್ಕಳು ಮೆಡಿಕಲ್ ಹಾಗೂ ಎಂಜಿನಿಯರಿಂಗ್ ವ್ಯಾಸಂಗ ಮಾಡುವಂತ ಕನಸು ಹೊತ್ತಿದ್ದ ಕನ್ನಡದ ಸಾಹಿತಿಗಳು, ಕವಿಗಳಾಗ ಬೇಕೆಂಬ ಆಶಯವನ್ನು ಹೊತ್ತವರು ವಿರಳ. ಓದಿವ ಬರೆಯುವಂತ ಪುಸ್ತಕಗಳ ನಡುವೆ ಅಭಿರುಚಿ ಬೆಳೆಸಿ ಕೊಂಡು ಭಾವನಾತ್ಮಕ ಬೆಸುಗೆ ಹೊಂದಬೇಕು ತಾಯಿ ಕರುಳಿನ ಸಂಬಂಧದಂತೆ ಓದುವ ಅಕ್ಷರದ ಸಂಬಂಧವನ್ನು ಜೀವನದಲ್ಲಿ ಆಳವಡಿಸಿ ಕೊಳ್ಳಬೇಕೆಂದು ಕಿವಿಮಾತು ತಿಳಿಸಿದರು.ಕುವೆಂಪುರನ್ನು ಜಗದ ಕವಿಯುಗದ ಕವಿಯಾಗಿ ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿ ಹೋದರೂ ಅವರ ಸ್ಮರಣೆ ಚಿರಸ್ಥಾಯಿಯಾಗಿ ಉಳಿಯಲಿದೆ. ಕುವೆಂಪು ಅವರು ಅಭಿಶಕ್ತಿಯಾಗಿ ಕನ್ನಡದ ಪರಂಪರೆ ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕುವೆಂಪು ಆಂಗ್ಲಭಾಷೆಯ ರಾಬರ್ಟ್ ಫ್ರಾಸ್ಕ್‌ರ ಅನುಯಾಯಿಯಾಗಿದ್ದು ಉಪನ್ಯಾಸಕರಾಗಿ ಸುಭದ್ರ ಜೀವನ ಹೊಂದಿದ್ದರು ಎಂದರು.

ಕುವೆಂಪು ಆದರ್ಶ ಪಾಲಿಸಿ

ವೃತ್ತಿಯ ಜೊತೆಗೆ ಕುವೆಂಪು ಅಧ್ಯಯನ ಮತ್ತು ಬರವಣಿಗೆ ಅಳವಡಿಸಿಕೊಂಡು ಅನೇಕ ಕಾದಂಬರಿ, ಕವಿತೆಗಳು ಬರೆದು ಕೇಂದ್ರ ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯದ ಪ್ರಥಮ ಸಾಹಿತಿಯಾಗಿ ಕನ್ನಡದ ಬೆಳವಣಿಗೆಗೆ ಅಡಿಪಾಯವಾಗಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಆಳವಡಿಸಿಕೊಂಡು ನಾಡು ನುಡಿಗಾಗಿ ಶ್ರಮಿಸಿ ಸಮಾಜ ಮುಖಿಗಳಾಗಿ ಸೇವೆ ಸಲ್ಲಿಸುವಂತಾಗಬೇಕೆಂದು ಕರೆ ನೀಡಿದರು.ಹಂಚಾಳ ಈಶ್ವರಮ್ಮಾಜಿ ಮರ್ಷಲ್ ಕಾರಿಯಪ್ಪ ಶಾಲೆಯ ಸಂಸ್ಥಾಪಕ ಡಾ.ಎಂ.ಚಂದ್ರಶೇಖರ್, ಮಹಿಳಾ ಸಮಾಜ ಕಾಲೇಜು ವಿಭಾಗದ ಪ್ರಾಂಶುಪಾಲೆ ನವೀನಾ ಸುದರ್ಶನ್, ಮುಖಂಡ ಶಂಕರಪ್ಪ, ಕನ್ನಡ ಉಪನ್ಯಾಸಕಿ ವರಲಕ್ಷ್ಮೀ, ಹಿರಿಯ ವಕೀಲ ಬಿಸಪ್ಪಗೌಡ, ಕನ್ನಡ ಹೋರಾಟಗಾರ ಅ.ಕೃ.ಸೋಮಶೇಖರ್, ಕ.ರ.ವೇ ಸೋಮಶೇಖರ್, ಚಂಬೆ ರಾಜೇಶ್, ವಕೀಲರಾದ ಮಾಗೇರಿ ನಾರಾಯಣಸ್ವಾಮಿ, ತಾ.ಪಂ ಮಾಜಿ ಅಧ್ಯಕ್ಷ ಯುವರಾಜ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಸ್ವಾಗತಿಸಿ, ಸೌಟ್ಸ್ ಬಾಬು ನಿರೂಪಿಸಿದರು.