ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಮಯ ಮತ್ತು ಮೌಲ್ಯಗಳಿಗೆ ಮಹತ್ವ ನೀಡಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಹೇಳಿದರು.ಚನ್ನರಾಯಪಟ್ಟಣ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ಹಿನ್ನೆಲೆ ನಡೆದ ಕಾರ‍್ಯಕ್ರಮದಲ್ಲಿ ಮಾತನಾಡಿ ನಮ್ಮ ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಬೇಕು. ಮೊಬೈಲ್ ಬಳಕೆಗೆ ಹೆಚ್ಚಿನ ಸಮಯ ವಿನಿಯೋಗ ಮಾಡುತ್ತಿರುವುದರಿಂದ ನಮ್ಮ ಯುವಜನರಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ. ಎಚ್ಚರವಹಿಸಿ ಮೊಬೈಲ್ ಬಳಕೆ ಮಾಡಬೇಕು ಎಂದರು.ಕಳೆದ 14 ವರ್ಷಗಳಿಂದ ಚನ್ನರಾಯಪಟ್ಟಣ ಕ್ಲಬ್ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸದಾ ಚಟುವಟಿಕೆಯಿಂದ ಕೂಡಿದ ಕ್ಲಬ್ ಇದಾಗಿದೆ. ಪ್ರಸಕ್ತ ಸಾಲಿನಲ್ಲಿ ೮೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ದಾಖಲಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಗ್ಲೋಬಲ್ ಗ್ರಾಂಟ್:ಇದುವರೆಗಿನ ಎಲ್ಲಾ ಅವಧಿಗಿಂತ ಹೆಚ್ಚು ಟಿಆರ್‌ಎಫ್ ಫಂಡ್ ಅನ್ನು ಈ ವರ್ಷ ಕ್ಲಬ್ ನೀಡಿದೆ. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 5 ಹೊಸ ಕ್ಲಬ್ ಮತ್ತು 20 ರೋಟರಾಕ್ಟ್ ಕ್ಲಬ್‌ಗಳನ್ನು ಪ್ರಾರಂಭಿಸಿದ್ದು, ಜಿಲ್ಲೆಯಲ್ಲಿ 1.47ಕೋಟಿ ರು. ಟಿಆರ್.ಎಫ್ ಸಂಗ್ರಹಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ತಾಲೂಕು ಕ್ಲಬ್ 1.10 ಲಕ್ಷ ರು. ಗಳನ್ನು ನೀಡಿದೆ. ಶಿವಮೊಗ್ಗ ಜಿಲ್ಲೆಗೆ 1.3 ಕೋಟಿ ರು. ಗ್ಲೋಬಲ್ ಗ್ರಾಂಟ್ ಬಂದಿದ್ದು, ಮುಂಬರುವ ದಿನಗಳಲ್ಲಿ ಹಾಸನ ಜಿಲ್ಲೆಗೂ ಬರುವಂತಾಗಲಿ ಎಂದು ಹೇಳಿದರು.ಪುರಸ್ಕಾರ:
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ವೇಳೆ ಗಣ್ಯರು ಅಭಿನಂದಿಸಿದರು. 14 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ದುಷ್ಯಂತ್ ಗೌಡ, ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ಲತಿಕಾ, ದ್ವಿತೀಯ ಪಿಯುಸಿ ಸಾಧಕರಾದ ಜಿ.ಆರ್.ಭಾಸ್ಕರ್, ಅಂಕಿತಾ ಮತ್ತು ಧನಲಕ್ಷ್ಮೀ ಕ್ಲಬ್ ವತಿಯಿಂದ ಗೌರವಿಸಲಾಯಿತು.ಕ್ಲಬ್ ಸದಸ್ಯರ ಪ್ರತಿಭಾವಂತ ಮಕ್ಕಳಿಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಹಿರೀಸಾವೆ ಪದವಿ ಪೂರ್ವ ಕಾಲೇಜಿಗೆ ಕ್ಲಬ್ ವತಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಪ್ರಾಂಶುಪಾಲ ಆರಾಧ್ಯ ಅವರಿಗೆ ನೀಡಲಾಯಿತು. ತಾಲೂಕು ಕ್ಲಬ್ ಅಧ್ಯಕ್ಷೆ ಎನ್.ಬಿ. ಜ್ಯೋತಿ ಶ್ರೀನಿವಾಸ್, ಕಾರ‍್ಯದರ್ಶಿ ಎ.ಆರ್. ಹೇಮಚಂದ್ರ, ಸಹಾಯಕ ಗವರ್ನರ್ ಜೆ.ಎನ್. ಮಂಜುನಾಥ್, ಗಿರೀಶ್ ಅಡವಿಗೌಡ, ರೇಖಾಪಾಲಾಕ್ಷ ಇದ್ದರು.
---ಫೋಟೋ..
ಚನ್ನರಾಯಪಟ್ಟಣ ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಭೇಟಿ ನೀಡಿದ್ದ ವೇಳೆ ಪ್ರತಿಭಾವಂತ ಮಕ್ಕಳನ್ನು ತಾಲೂಕು ಕ್ಲಬ್‌ನ ಅಧ್ಯಕ್ಷೆ ಎನ್. ಬಿ. ಜ್ಯೋತಿ ಶ್ರೀನಿವಾಸ್, ಗಣ್ಯರು ಅಭಿನಂದಿಸಿದರು.