ಮೊಬೈಲ್ ಅಂಗಡಿ ಕಳ್ಳತನ: ಐವರು ಯುವಕರ ಬಂಧನ

| Published : Jun 23 2025, 12:33 AM IST

ಸಾರಾಂಶ

ಬಾದಾಮಿ: ಮೊಬೈಲ್‌ ಅಂಗಡಿ ಕಳ್ಳತನ ಪ್ರಕರಣದಲ್ಲಿ ಐವರು ಯುವಕರನ್ನು ಬಾದಾಮಿ ಪೊಲೀಸರು ಬಂಧಿಸಿ 9 ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಿಸಿದ ಎರಡು ಬೈಕ್‌ ವಶಪಡಿಸಿಕೊಂಡಿದ್ದಾರೆ.

ಬಾದಾಮಿ: ಮೊಬೈಲ್‌ ಅಂಗಡಿ ಕಳ್ಳತನ ಪ್ರಕರಣದಲ್ಲಿ ಐವರು ಯುವಕರನ್ನು ಬಾದಾಮಿ ಪೊಲೀಸರು ಬಂಧಿಸಿ 9 ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಿಸಿದ ಎರಡು ಬೈಕ್‌ ವಶಪಡಿಸಿಕೊಂಡಿದ್ದಾರೆ.ತಾಲೂಕಿನ ಬೇಲೂರ ಗ್ರಾಮದ ಸ್ಫೂರ್ತಿ ಮೊಬೈಲ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಶನಿವಾರ ರಾತ್ರಿ ವೇಳೆ ತಪಾಸಣೆ ನಡೆಸುತ್ತಿರುವಾಗ ಸಂಶಾಯಸ್ಪವಾಗಿ ತಿರುಗಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಬಾದಾಮಿ ಹಾಗೂ ಬಾಗಲಕೋಟೆಯಲ್ಲಿ ಮೊಬೈಲ್‌ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಪರಾಧ ವಿಭಾಗದ ಪಿ.ಎಸ್.ಐ.ವಿಜಯಕುಮಾರ ರಾಠೋಡ ಹಾಗೂ ಸಿಬ್ಬಂದಿ ಇದ್ದರು.