ಜಿಲ್ಲೆಯಲ್ಲೇ ಬಸಾಪುರ ಹಾಲು ಉತ್ಪಾದಕರ ಸಂಘ ಮಾದರಿ: ಶಾಸಕ ನಂಜೇಗೌಡ ಶ್ಲಾಘನೆ

| Published : Oct 04 2024, 01:04 AM IST

ಜಿಲ್ಲೆಯಲ್ಲೇ ಬಸಾಪುರ ಹಾಲು ಉತ್ಪಾದಕರ ಸಂಘ ಮಾದರಿ: ಶಾಸಕ ನಂಜೇಗೌಡ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೋಲಾರ ಒಕ್ಕೂಟ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಹೆಚ್ಚಿನ ಹಾಲಿನ ಬೆಲೆ ನೀಡುತ್ತಿರುವುದು ಕೋಲಾರ ಹಾಲು ಒಕ್ಕೂಟ. ಪ್ರತಿಯೊಬ್ಬ ಹಾಲು ಉತ್ಪಾದಕನೂ ಒಕ್ಕೂಟದ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಕನ್ನಡಪ್ರಭ ವಾರ್ತೆ ಟೇಕಲ್

ಕೋಲಾರ ಜಿಲ್ಲೆಯಲ್ಲಿ ಬಸಾಪುರ ಹಾಲು ಉತ್ಪಾದಕ ಸಂಘವನ್ನು ಮಾದರಿ ಹಾಲು ಉತ್ಪಾದಕರ ಸಹಕಾರ ಸಂಘವೆಂದು ಕರೆಯುತ್ತಾರೆ, ಜಿಲ್ಲಾ ಒಕ್ಕೂಟದಿಂದ ನೀಡುವ ಅತ್ಯುತ್ತಮ ಸಂಘ ಪ್ರಶಸ್ತಿ ದೊರೆತಿದ್ದು. ಇದಕ್ಕೆ ಬಸಾಪುರ ಹಾಲು ಉತ್ಪಾದಕರ ಶ್ರಮ ಹಾಗೂ ಹೈನುಗಾರಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದೇ ಮೂಲ ಕಾರಣವೆಂದು ಕೋಚಿಮುಲ್ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡರು ತಿಳಿಸಿದರು.

ಟೇಕಲ್ ಸಮೀಪದ ಬಸಾಪುರ ಹಾಲು ಉತ್ಪಾದಕ ಸಹಕಾರ ಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಸಹಕಾರ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.

ಬಸಾಪುರ ಸಂಘದಲ್ಲಿ ಒಟ್ಟು 25 ಮಂದಿ ಹಾಲು ಉತ್ಪಾದಕರು ದಿನವೊಂದಕ್ಕೆ 1200 ಲೀಟರ್ ಹಾಲು ನೀಡುತ್ತಿದ್ದು, ಸರಾಸರಿ ಒಂದು ಮನೆಯಿಂದ 50 ಲೀಟರ್ ಹಾಲು ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಈ ರೀತಿ ಬೆಳವಣಿಗೆಯಾಗಿಲ್ಲ. ಸಂಘವು ನಿವ್ವಳ ಲಾಭವನ್ನು ಹೊಂದಿದೆ. ಸಂಘವು 21 ಲಕ್ಷದಷ್ಟು ಸ್ಥಿರ, ಚರ ಆಸ್ತಿಯನ್ನು ಗಳಿಸಿದೆ. ಸಂಘ ಆಡಳಿತ ಮಂಡಳಿಯು ಸಭೆಗಳನ್ನು ನಡೆಸಿ 15 ದಿನಗಳಿಗೊಮ್ಮೆ ಬಟವಾಡೆಯನ್ನು ನೀಡುತ್ತಿದ್ದು, ಉತ್ತಮ ಬೆಳವಣಿಗೆ ಹೊಂದುತ್ತಿರುವ ಸಂಘವಾಗಿದೆ ಎಂದರು.

ಸಹಕಾರ ಸಂಘಗಳ ಮೇಲೆ ನಂಬಿಕೆ ಇಟ್ಟು ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ನೀಡಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೀರಿ. ಬಸಾಪುರ ಸಂಘಕ್ಕೆ ಸ್ವಂತ ಕಟ್ಟಡವಿಲ್ಲದೆ ಇರುವುದರಿಂದ ಅದಕ್ಕೆ ಸರಿಯಾದ ಸ್ಥಳ ಸೂಚಿಸಿದ್ದು, ಸಂಘದಲ್ಲಿನ ಹಣ ಹಾಗೂ ಒಕ್ಕೂಟದಿಂದಲೂ ಕಟ್ಟಡಕ್ಕೆ ಹಣ ನೀಡಲಾಗುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೋಲಾರ ಒಕ್ಕೂಟ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಹೆಚ್ಚಿನ ಹಾಲಿನ ಬೆಲೆ ನೀಡುತ್ತಿರುವುದು ಕೋಲಾರ ಹಾಲು ಒಕ್ಕೂಟ. ಪ್ರತಿಯೊಬ್ಬ ಹಾಲು ಉತ್ಪಾದಕನೂ ಒಕ್ಕೂಟದ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕೆಂದರು.

ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಮೇಶ ವಹಿಸಿದ್ದರು.

ಮಾಲೂರು ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಲೋಹಿತ್, ವಿಸ್ತರಣಾಧಿಕಾರಿ ಹುಲ್ಲೂರಪ್ಪ, ಗಂಗಾಧರ್, ಸಂಘದ ಉಪಾಧ್ಯಕ್ಷ ತಿಮ್ಮರಾಜು, ನಿರ್ದೇಶಕ ಅಪ್ಪಾಜಿಗೌಡ, ನಾಗೇಶ್, ಮಂಜಪ್ಪ, ಆನಂದಪ್ಪ, ವೆಂಕಟೇಶಪ್ಪ, ಸೀನಪ್ಪ, ಮಹಿಳಾ ನಿರ್ದೇಶಕರಾದ ಜಯಂತಿ, ಕಮಲಮ್ಮ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎನ್.ಗಣೇಶ್, ಪರೀಕ್ಷಕ ಮಂಜುನಾಥ, ನಾರಾಯಣಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ರಮೇಶಗೌಡ, ಲಕ್ಷ್ಮಣಗೌಡ, ವೆಂಕಟೇಶಗೌಡ, ಕೆ.ಜಿ.ಹಳ್ಳಿ ಗ್ರಾಪಂ ಅಧ್ಯಕ್ಷ ಎಸ್.ಆರ್.ಯಲ್ಲಪ್ಪ, ಕೆಂಪಸಂದ್ರ ಡೈರಿ ಅಧ್ಯಕ್ಷ ಮಂಜುನಾಥ, ಪ್ರಗತಿ ಶ್ರೀನಿವಾಸ ಕದಿರೇನಹಳ್ಳಿ, ರಮೇಶ್, ತಿಮ್ಮರಾಯಪ್ಪ, ನವೀನ್, ಮಾರಿಕಾಂಬ ಮೇವು ರೈತ ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಹಾಲು ಉತ್ಪಾದಕರು ಉಪಸ್ಥಿತರಿದ್ದರು.