ಮಾದರಿ ರಾಜಕಾರಣಿ ನಾರಾಯಣಸ್ವಾಮಿ: ಆನಂದರಾಜು

| Published : May 17 2024, 12:30 AM IST

ಸಾರಾಂಶ

ರಾಜಕಾರಣ ಎಂದರೆ ಸಾಕು ಸಾಕು ಎನ್ನುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ಉತ್ತಮ ರಾಜಕಾರಣಿಗಳು ಸಿಗುವುದು ಅಪರೂಪ. ಈ ನಡುವೆ ವೈ.ಎ.ನಾರಾಯಣ ಸ್ವಾಮಿ ಜನಮೆಚ್ಚಿದ ರಾಜಕಾರಣಿ ಎಂದರೆ ತಪ್ಪಾಗಲ್ಲ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು ಅಭಿಪ್ರಾಯಪಟ್ಟರು.

ದಾವಣಗೆರೆ: ರಾಜಕಾರಣ ಎಂದರೆ ಸಾಕು ಸಾಕು ಎನ್ನುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ಉತ್ತಮ ರಾಜಕಾರಣಿಗಳು ಸಿಗುವುದು ಅಪರೂಪ. ಈ ನಡುವೆ ವೈ.ಎ.ನಾರಾಯಣ ಸ್ವಾಮಿ ಜನಮೆಚ್ಚಿದ ರಾಜಕಾರಣಿ ಎಂದರೆ ತಪ್ಪಾಗಲ್ಲ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು ಅಭಿಪ್ರಾಯಪಟ್ಟರು.

ಗುರುವಾರ ಜಿಎಂಐಟಿ ಅತಿಥಿ ಗೃಹದಲ್ಲಿ ಶಾಸಕ ವೈ.ಎ. ನಾರಾಯಣಸ್ವಾಮಿ ಅವರನ್ನ ಸನ್ಮಾನಿಸಿ ಅವರು ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಸರಳ, ಸಜ್ಜನಿಕೆ ರಾಜಕಾರಣಿಯಾಗಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪದಿಸುವ ಏಕೈಕ ವ್ಯಕ್ತಿಯಾಗಿದ್ದಾರೆ. ಈ ಕಾರಣದಿಂದ ಅವರು ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಈ ಸಂದರ್ಭ ಪದವೀಧರರಾದ ನಾಗರಾಜ್ ನಾಯ್ಕ್, ರಾಜು ಶ್ರೀನಿವಾಸ್, ಮುರುಳಿ ಯಾದವ್, ತಿಮ್ಮೇಶ್, ಸುರೇಶ್ ರೆಡ್ಡಿ, ಸಚಿನ್, ನಿವೃತ್ತ ಶಿಕ್ಷಕ ನಾಗರಾಜಪ್ಪ ಇತರರು ಇದ್ದರು.

- - - -16ಕೆಡಿವಿಜಿ32ಃ:

ದಾವಣಗೆರೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಅವರನ್ನು ಬಾಡದ ಆನಂದರಾಜ ಸನ್ಮಾನಿಸಿದರು.