ಆಧುನಿಕ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ನಮ್ಮ ಭಾರತ ಶಾಂತಿ ಸಹನೆಗೆ ಮಾದರಿಯಾಗಿದ್ದು, ಅಹಿಂಸೆ ಹಾಗೂ ಪರಸ್ಪರ ಸಹಕಾರ ತತ್ವವನ್ನು ಪ್ರಚಾರ ಮಾಡಿದವರು ಮಹಾತ್ಮ ಗಾಂಧೀಜಿ ಎಂದು ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ. ಎಮ್. ಎಚ್. ಪ್ರಹ್ಲಾದಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆಧುನಿಕ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ನಮ್ಮ ಭಾರತ ಶಾಂತಿ ಸಹನೆಗೆ ಮಾದರಿಯಾಗಿದ್ದು, ಅಹಿಂಸೆ ಹಾಗೂ ಪರಸ್ಪರ ಸಹಕಾರ ತತ್ವವನ್ನು ಪ್ರಚಾರ ಮಾಡಿದವರು ಮಹಾತ್ಮ ಗಾಂಧೀಜಿ ಎಂದು ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ. ಎಮ್. ಎಚ್. ಪ್ರಹ್ಲಾದಪ್ಪ ತಿಳಿಸಿದರು.ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಹುತಾತ್ಮರ ದಿನದ ಅಂಗವಾಗಿ ಒಂದು ನಿಮಿಷ ಮೌನಾಚರಣೆ ಆಚರಿಸಿ ಬಳಿಕ ಮಾತನಾಡಿದ ಅವರು, ಗಾಂಧೀಜಿಯವರ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು, ನನ್ನ ಜೀವನದ ಹೋರಾಟಗಳೇ ನನ್ನ ಸಂದೇಶ ಎಂದ ಗಾಂಧೀಜಿಯವರು ಮುಂದಿನ ದಿನಗಳಲ್ಲಿ ಶಾಂತಿಯುತ ಸತ್ಯಾಗ್ರಹಗಳ ನಿರಂತರ ಸಂಘರ್ಷದ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಯುವಜನರು ಶ್ರಮಿಸಬೇಕು ಎಂದರು.
ಸುಭದ್ರ ಭಾರತೀಯ ಸಾಂಸ್ಕೃತಿಕತೆಯನ್ನು ಉಳಿಸಿ-ಬೆಳೆಸಲು ಯುವ ಜನಾಂಗದ ಪಾತ್ರ ಬಹು ಮುಖ್ಯ ಎಂದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ. ಎನ್. ಮಂಜುನಾಥ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಕೆ. ಎನ್. ಮಹಾದೇವಸ್ವಾಮಿ, ಡಾ. ಬಿ. ಎಮ್. ಚಂದ್ರಶೇಖರ, ಡಾ. ಎಚ್. ಎಮ್. ಶಂಭುಲಿಂಗ ಮೂರ್ಥಿ, ಡಾ. ಎಚ್. ಎಸ್. ಶ್ರಿಂಚನ, ಡಾ. ಕೆ. ಷಫಿಉಲ್ಲಾ, ಡಾ. ಗಿರಿಜಮ್ಮ ಬೆಳಕೇರಿ, ಡಾ. ರಮೇಶ್, ಅದ್ಯಾಪಕೇತರ ನೌಕರರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.