ಸಾರಾಂಶ
ಮಂಗಳೂರಿನ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾನುವಾರ ನಡೆದ ಮೋದಿ ಬ್ರಿಗೇಡ್‌ನ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಬಲಿಷ್ಠ ಭಾರತ ನಿರ್ಮಾಣಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ನ್ಯಾಯವಾದಿ, ರಾಷ್ಟ್ರೀಯವಾದಿ ಮೀರಾ ರಾಘವೇಂದ್ರ ಹೇಳಿದರು.
ಮಂಗಳೂರಿನ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾನುವಾರ ನಡೆದ ಮೋದಿ ಬ್ರಿಗೇಡ್‌ನ ಉದ್ಘಾಟನೆ ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಅವರು ಮಾತನಾಡಿದರು.
ರಾಜಕೀಯ ವಲಯದಲ್ಲಿ ಸತತವಾಗಿ ಆಡಳಿತದಲ್ಲಿ ಇದ್ದವರ ವಿರುದ್ಧ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಮೋದಿಗೆ ಈಗಲೂ ಬೆಂಬಲ ಹಾಗೂ ಅಭಿಮಾನದ ಅಲೆ ಹೆಚ್ಚುತ್ತಲೇ ಇದೆ.
ನಾಲ್ಕು ಬಾರಿ ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿ, ೨ ಬಾರಿ ಪ್ರಧಾನಮಂತ್ರಿಯಾಗಿ ಆಡಳಿತ ನಡೆಸಿದ್ದು, ದೇಶದಲ್ಲಿ ಮಾತ್ರವಲ್ಲ. ವಿದೇಶದಲ್ಲೂ ಮೋದಿಯನ್ನು ಬೆಂಬಲಿಸಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಬೇಕು ಎಂಬುವುದಾಗಿ ಎದುರು ನೋಡುತ್ತಿದ್ದಾರೆ.
ಆದರೆ ನಮ್ಮ ದೇಶದಲ್ಲಿಯೇ ಕೆಲವು ದೇಶದ್ರೋಹಿಗಳು, ಭಯೋತ್ಪಾದಕರು, ರಾಜಕೀಯ ವಿರೋಧಿಗಳು ಮೋದಿಯನ್ನು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಯೂನಿಫಾಮ್ ಕೋಡ್ ಅಂಗೀಕಾರಕ್ಕೆ ಬಹುಮತದಿಂದ ಗೆಲ್ಲಿಸಿ: ಬಿಜೆಪಿ ಪಕ್ಷ ಕಳೆದ ಬಾರಿ ಬಹುಮತದಿಂದ ಗೆಲುವು ಸಾಧಿಸಿದ್ದರಿಂದ ಆರ್ಟಿಕಲ್ ೩೭೦, ತ್ರಿಬಲ್ ತಲಾಕ್ ಮಸೂದೆಗಳನ್ನು ಸದನದಲ್ಲಿ ಅಂಗೀಕಾರಗೊಳ್ಳಲು ಸಹಕಾರಿಯಾಗಿದ್ದು, ಈ ಬಾರಿ ಮತ್ತೊಮ್ಮೆ ಬಹುಮತದಲ್ಲಿ ಬಿಜೆಪಿ ಆಯ್ಕೆಯಾಗಿ ಬಂದು ಯೂನಿಫಾಮ್ ಕೋಡ್‌ನ್ನು ಅಂಗೀಕಾರ ಮಾಡಬೇಕಿದೆ. ಆದ್ದರಿಂದ ಸ್ಥಳೀಯ ಮಟ್ಟದಲ್ಲಿ ಆದಷ್ಟು ಮಂದಿಯನ್ನು ಆಯ್ಕೆ ಮಾಡಿ ಕಳುಹಿಸಿಕೊಡಬೇಕು.
ಅಧ್ಯಕ್ಷತೆ ವಹಿಸಿದ್ದ ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮಾತನಾಡಿ, ಪರಿವರ್ತನೆಯ ಕಾಲಘಟ್ಟದಲ್ಲಿದ್ದು, ರಾಮಜನ್ಮಭೂಮಿಯಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಅದನ್ನು ನೆರವೇರಿಸಲು ಮೋದಿ ಅವರು ಕಳೆದ ೧೧ ದಿನಗಳಿಂದ ವೃತದಲ್ಲಿದ್ದಾರೆ.
ಆದರೂ ಅದರ ಮೇಲೆ ಟೀಕೆ-ಟಿಪ್ಪಣಿಗಳು ಕೇಳಿಬರುತ್ತಿದ್ದು, ಮೋದಿ ಅವರು ಗರ್ಭಗುಡಿಗೆ ತೆರಳಬಾರದು ಎಂದು ಅಡ್ಡಗಾಲು ಇಡುತ್ತಿದ್ದಾರೆ.
ಆದರೆ ದೇಶದ ಜನರು ಅವರೇ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಬೇಕು ಎಂದು ಆಗ್ರಹ ಕೇಳಿಬರುತ್ತಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಪಾಲಿಕೆ ಉಪ ಮೇಯರ್ ಸುನಿತಾ, ಮೋದಿ ಬ್ರಿಗೇಡ್‌ನ ಗೌರವಾಧ್ಯಕ್ಷ ದಿನೇಶ್ ಕೆ.ಊರ್ವ, ಅಧ್ಯಕ್ಷ ಪದ್ಮರಾಜ್ ಲೋಹಿತ್‌ನಗರ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಬಿಜೆಪಿ ಪ್ರ.ಕಾರ್ಯದರ್ಶಿ ಕಸ್ತೂರಿ ಪಂಜಾ, ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ವಿಶ್ವ ಹಿಂದೂ ಪರಿಷದ್‌ನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ನಿರ್ದೇಶಕ ವಿಜಯ್ ಕುಮಾರ್ ಕೋಡಿಯಲ್‌ಬೈಲು, ನವಿನ್ ಡಿ. ಪಡೀಲ್ ಮತ್ತಿತರರು ಇದ್ದರು.
ಮೋದಿ ಬ್ರಿಗೇಡ್‌ನ ಪ್ರಧಾನ ಕಾರ್ಯದರ್ಶಿ ರವಿ ಕಾವೂರು ಪ್ರಾಸ್ತವಿಕ ಮಾತನಾಡಿದರು. ಶಿವಪ್ರಸಾದ್ ಸ್ವಾಗತಿಸಿದರು.