ಪ್ರಧಾನಿ ಮೋದಿಯವರಿಗೆ ನಾಥೂರಾಮ್‌ ಗೋಡ್ಸೆ ಸುಲಭವಾಗಿ ಅರ್ಥವಾಗುತ್ತಾರೆ. ಆದರೆ, ಗಾಂಧೀಜಿ ಅರ್ಥವಾಗುವುದಿಲ್ಲ. ಯುಪಿಎ ಸರ್ಕಾರ ಆರಂಭಿಸಿದ್ದ ಪ್ರಮುಖ ಯೋಜನೆಗಳನ್ನು ಬಲಪಡಿಸುವ ಬದಲು ಅವುಗಳ ಹೆಸರನ್ನೇ ಬದಲಿಸುವುದಕ್ಕಷ್ಟೇ ಮೋದಿ ಸೀಮಿತವಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ ಅಣಕವಾಡಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಧಾನಿ ಮೋದಿಯವರಿಗೆ ನಾಥೂರಾಮ್‌ ಗೋಡ್ಸೆ ಸುಲಭವಾಗಿ ಅರ್ಥವಾಗುತ್ತಾರೆ. ಆದರೆ, ಗಾಂಧೀಜಿ ಅರ್ಥವಾಗುವುದಿಲ್ಲ. ಯುಪಿಎ ಸರ್ಕಾರ ಆರಂಭಿಸಿದ್ದ ಪ್ರಮುಖ ಯೋಜನೆಗಳನ್ನು ಬಲಪಡಿಸುವ ಬದಲು ಅವುಗಳ ಹೆಸರನ್ನೇ ಬದಲಿಸುವುದಕ್ಕಷ್ಟೇ ಮೋದಿ ಸೀಮಿತವಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ ಅಣಕವಾಡಿದ್ದಾರೆ.

ಗಾಂಧಿ ಹಂತಕ ಗೋಡ್ಸೆ ಹಿಂಬಾಲಕರ ಕೈಯಲ್ಲಿ ಕೇಂದ್ರ ಸರ್ಕಾರವಿದ್ದು, ಕಾರಣಕ್ಕೆ ಮಹಾತ್ಮ ಗಾಂಧೀಜಿ ಹೆಸರಿನ ಮನರೇಗಾ ಯೋಜನೆ ಹೆಸರನ್ನೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬದಲಾವಣೆ ಮಾಡಲು ತೀರ್ಮಾಸಿದೆ ಎಂದು ದೂರಿದ್ದಾರೆ.

ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಕಂಡರೆ, ಹೆಸರು ಕೇಳಿದರೂ ಬಿಜೆಪಿ ದ್ವೇಷ ಕಾರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ದಶಕದ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ನರೇಗಾ ಗ್ರಾಮೀಣ ನಿರುದ್ಯೋಗ ಮತ್ತು ಬಡತನ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗದ ಹಕ್ಕನ್ನು ಖಾತರಿಗೊಳಿಸಿದ ಇಂತಹ ಯೋಜನೆ ದೇಶ-ವಿದೇಶಗಳ ಆರ್ಥಿಕ ತಜ್ಞರ ಶ್ಲಾಘನೆ ಪಡೆದಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಉದ್ಯೋಗ ಖಾತರಿ ನೀಡುವ ಒಂದು ನೈಜ ಯೋಜನೆಯಾಗಿದೆ. ಮೋದಿ ಸರ್ಕಾರದಡಿ ಪ್ರಸ್ತಾಪಿತ ಹೊಸ ರಚನೆಯು ಖಾತರಿಯನ್ನೇ ಕಸಿಯಲಿದೆ ಎಂದು ಹೇಳಿದ್ದಾರೆ.

ನರೇಗಾ ಯೋಜನೆಹೆಸರು ಮತ್ತು ಸ್ವರೂಪ ಬದಲಿಸಲು ಹೊರಟ ಕೇಂದ್ರ ಸರ್ಕಾರ ಬಡವರ ಮತ್ತು ಗಾಂಧೀಜಿ ಬಗೆಗಿನ ತಮ್ಮ ದ್ವೇಷವನ್ನು ತಾವೇ ಬಯಲು ಮಾಡಿಕೊಂಡಿದ್ದಾರೆ. ಗಾಂಧೀಜಿ ಯಾವುದೇ ಒಂದು ಪಕ್ಷ ಅಥವಾ ಒಂದು ಧರ್ಮ ಅಥವಾ ಒಂದು ಪ್ರದೇಶದ ವ್ಯಕ್ತಿಯಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬರಿ ಮೈಪಕೀರರಷ್ಟೇ ಅಲ್ಲ, ಭಾರತೀಯ ಮೌಲ್ಯಗಳ ಶಾಂತಿ, ಅಹಿಂಸೆ, ಸರಳತೆ, ಸತ್ಯಾಗ್ರಹ, ಮತ್ತೊಬ್ಬರನ್ನು ಗೌರವಿಸುವುದು, ಮತ್ತೊಬ್ಬರನ್ನು ಪ್ರೀತಿಸುವುದು ಎಲ್ಲದರ ಸಾಂಕೇತಿಕ ವ್ಯಕ್ತಿತ್ವವಾಗಿರುವವರು ಎಂದು ತಿಳಿಸಿದ್ದಾರೆ.

ಗ್ರಾಮ ಸ್ವರಾಜ್ಯದ ಕನಸು ಬಿತ್ತಿ ಹೋಗಿದ್ದ ಗಾಂಧೀಜಿ ಹೆರನ್ನು ಯೋಜನೆಗೆ ಇಟ್ಟಿದ್ದು ಅರ್ಥಪೂರ್ಣ ನಿರ್ಧಾರವಾಗಿತ್ತು. ದೇಶಧ ಜನರ ಮನಸ್ಸಿನಿಂದ ಗಾಂಧೀಜಿಯನ್ನು ತೆಗೆದು ಹಾಕುವ ಮೋದಿ ಕುಟಿಲತೆಗಳು ಈಗ ಸ್ಪಷ್ಟವಾಗಿ ಕಾಣುತ್ತಿವೆ. ವಿದೇಶದಲ್ಲಿ ಸುತ್ತಾಡುವಾಗ ಗಾಂಧೀಜಿ ಭಜನೆ ಮಾಡುವ ಮೋದಿ ದೇಶದಲ್ಲಿ ಮಾತ್ರ ಅದೇ ರಾಷ್ಟ್ರಪಿತದ ಹೆಸರನ್ನು ಅಳಿಸಿ, ಹಾಕುವ ಹುನ್ನಾರ ನಡೆಸುತ್ತಾರೆ. ಒಳಗೆ ಗೋಡ್ಸೆ ಮನಸ್ಥಿತಿ, ಹೊರಗೆ ಗಾಂಧಿ ಮುಖವಾಡ ತೊಟ್ಟ ಮೋದಿ ಒಂದು ರಾಷ್ಟ್ರೀಯ ಯೋಜನೆಗೆ ದೇಶದ ನಿಜವಾದ ಆತ್ಮ ಮಹಾತ್ಮನ ಹೆಸರನ್ನು ಬದಲಿಸಿ, ರಾಮನ ಹೆಸರನ್ನು ಪ್ರತಿಷ್ಟಾಪಿಲುಮುಂದಾಗಿದ್ದಾರೆ. ಈ ಮೂಲಕ ದೇಶದ ಮೌಲ್ಯ, ನಂಬಿಕೆ, ನ್ಯಾಯ, ನೀತಿಗಳಿಗೆ ತಿಲಾಂಜಲಿ ಹಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಹಿಂದಿನ ಸರ್ಕಾರದಿಂದ ಆರಂಭವಾದ ಸುಮಾರು 25ಕ್ಕೂಹೆಚ್ಚು ಪ್ರಮುಖ ಕಾರ್ಯಕ್ರಮಕ್ಕೆ ಮೋದಿ ಸರ್ಕಾರ ಬರೀ ಹೆಸರು ಬದಲಿಸಿರುವುದು ನಾಚಿಕೆಗೇಡಿನ ಸಂಗತಿ. ನಿರ್ಮಲ ಭಾರತ್ ಅಭಿಯಾನವನ್ನು ಸ್ವಚ್ಛ ಭಾರತ್ ಮಿಷನ್ ಎಂದು ಮರುನಾಮಕರಣ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಅಕೌಂಟ್ ಯೋಜನೆಯನ್ನು ಪ್ರಧಾನ ಮಂತ್ರಿ ಜನ್ ಧನ್ ಯೋಜನಾ ಮಾಡಿದ್ದಾರೆ. ರಾಜೀವ್ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಮಾಡಿದ್ದಾರೆ. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ ಅನ್ನು ಅಟಲ್ ಮಿಷನ್ ಫಾರ್ ರಿಜುವಿನೇಷನ್ ಅಂಡ್ ಅರ್ಬನ್ ಟ್ರಾನ್ಸ್ಫಾರ್ಮೇಷನ್ ಎಂಬುದಾಗಿ ಮೋದಿ ಸರ್ಕಾರದಲ್ಲಿ ಮಾಡಿದ್ದಾರೆ. ಈ ಬದಲಾವಣೆಗಳು ಮೂಲ ಉದ್ದೇಶವನ್ನು ಮೂಲಭೂತವಾಗಿ ಬಲಪಡಿಸುವ ಅಥವಾ ವಿಸ್ತರಿಸುವ ಬದಲು, ಕೇವಲ ಹೆಸರು ಬದಲಾಯಿಸುವ ನಿರಂತರ ಮಾದರಿಯನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.