ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರನ್ನು ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಬೇಕಿದೆ.
ಹುಬ್ಬಳ್ಳಿ:
ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ. ಧಾರವಾಡ ಕ್ಷೇತ್ರ ಅಭಿವೃದ್ಧಿಗೆ ಪ್ರಹ್ಲಾದ ಜೋಶಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿನ ಮಯೂರಿ ಗಾರ್ಡನ್ ನಿವಾಸಿ ಗರಗ ಅವರ ಮನೆಯಲ್ಲಿ ಬಿಜೆಪಿ ಪ್ರಚಾರ ಸಭೆ ಹಾಗೂ ಹಿರಿಯರೊಂದಿಗೆ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರನ್ನು ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಬೇಕಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರನ್ನು ಐದನೆಯ ಬಾರಿಗೆ ಆಯ್ಕೆ ಮಾಡಬೇಕಿದೆ. ಹೀಗಾಗಿ ದೇಶಕ್ಕೆ ಮೋದಿ, ಕ್ಷೇತ್ರಕ್ಕೆ ಜೋಶಿ ಎಂಬುದನ್ನು ಮತದಾರರು ಮರೆಯಬಾರದು. ಈ ಸಲವೂ ಜೋಶಿ ಅವರನ್ನು ಆಯ್ಕೆ ಮಾಡಲು ಮತದಾರರು ಬೆಂಬಲಿಸಬೇಕು ಎಂದರು.ಈ ವೇಳೆ ಪ್ರಮುಖರಾದ ಪ್ರಕಾಶ ಕ್ಯಾರಕಟ್ಟಿ, ಡಾ. ಪ್ರಕಾಶ ಯಳವತ್ತಿ, ರಾಮಚಂದ್ರ ಗರಗ, ಎಸ್.ಟಿ. ಅಕ್ಕಿ, ರಮೇಶ ಉಳ್ಳಾಗಡ್ಡಿ, ಉಮೇಶ ದುಶಿ, ಗಿರೀಶ ಚವರಗಿ, ರಾಜು ಕಾಳೆ, ಹರೀಶ ಜಂಗ್ಲಿ, ಕಿಶನ ಬಿಲಾನಾ, ಗೀತಾ ಬದ್ದಿ, ಅಕ್ಷಯ ಬದ್ದಿ, ಯಲ್ಲಪ್ಪ, ಕಾಂಚನಾ ಸಿಂದೊಗಿ, ಮಂಜುನಾಥ ಮುದ್ದಿ, ವಿವೇಕಾನಂದ ಪವಾರ, ಈಶ್ವರ ನಾಯ್ಕರ, ನಾಗರಾಜ ಕುಲಕರ್ಣಿ ಇದ್ದರು.