ಸಾರಾಂಶ
ಕವಿತಾಳ ಸಮೀಪದ ವಟಗಲ್ ಗ್ರಾಮದಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕವಿತಾಳಅಯೋಧ್ಯೆಯಲ್ಲಿ ಶ್ರೀರಾಮ ಮಂದಿದ ನಿರ್ಮಾಣ ಮತ್ತು ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಕೋಟ್ಯಂತರ ಭಕ್ತರ ಕನಸನ್ನು ನನಸಾಗಿಸಿದ್ದಾರೆ ಎಂದು ಮುಖಂಡ ಶಿವನಗೌಡ ಮಾಲಿ ಪಾಟೀಲ್ ಹೇಳಿದರು.
ಸಮೀಪದ ವಟಗಲ್ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎನ್ನುವ ದೇಶದ ಕೋಟ್ಯಂತರ ಭಕ್ತರ ಬಯಕೆಯನ್ನು ಈಡೇರಿಸಿದ ಪ್ರಧಾನಿ ಮೋದಿಯವರನ್ನು ಇಡೀ ಜಗತ್ತು ಕೊಂಡಾಡುತ್ತಿದೆ ಎಂದರು.ಮುಖಂಡರಾದ ಚನ್ನಬಸವ, ವೀರನಗೌಡ, ನಾಗರಾಜ ಉದ್ಬಾಳ, ನಾಗಪ್ಪ, ಮಲ್ಲಿಕಾರ್ಜುನ, ವಿನೋದ, ಮಹೇಶ, ಕಿರಣ ವಿಶ್ವಕರ್ಮ, ಮಲ್ಲನಗೌಡ ಅಂಗಡಿ, ರಾಮನಗೌಡ, ರಘು ಯಾದವ, ಅಮರೇಶ, ಮೌನೇಶ ಮಡಿವಾಳ ಹಾಗೂ ಕೆ.ಬಸವರಾಜ ಇದ್ದರು, ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.