ದೇಶದ ಜನತೆಗೆ ಶಾಶ್ವತ ಗ್ಯಾರಂಟಿ ನೀಡಿರುವ ಮೋದಿ -ಮಾಜಿ ಸಚಿವ ಬಿಸಿಪಾ

| Published : Apr 27 2024, 01:22 AM IST

ದೇಶದ ಜನತೆಗೆ ಶಾಶ್ವತ ಗ್ಯಾರಂಟಿ ನೀಡಿರುವ ಮೋದಿ -ಮಾಜಿ ಸಚಿವ ಬಿಸಿಪಾ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶಾಶ್ವತ ಗ್ಯಾರಂಟಿಗಳನ್ನು ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ದೇಶದ ಜನತೆಗೆ ವ್ಯಾಕ್ಸಿನ್ ನೀಡಿ ಜನರ ಆರೋಗ್ಯ ಕಾಪಾಡಿದ್ದಾರೆ. ಕಿಸಾನ್ ಸಮ್ಮಾನ್, ರಕ್ಷಣಾ ಕ್ಷೇತ್ರದಲ್ಲಿ ಪ್ರಗತಿ, ಆಯುಷ್ಮಾನ್ ಭಾರತ್ ಅಂತಹ ಯೋಜನೆಗಳನ್ನು ನೀಡಿ ದೇಶದ ಜನತೆಗೆ ಶಾಶ್ವತ ಗ್ಯಾರಂಟಿ ನೀಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹಿರೇಕೆರೂರು: ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶಾಶ್ವತ ಗ್ಯಾರಂಟಿಗಳನ್ನು ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ದೇಶದ ಜನತೆಗೆ ವ್ಯಾಕ್ಸಿನ್ ನೀಡಿ ಜನರ ಆರೋಗ್ಯ ಕಾಪಾಡಿದ್ದಾರೆ. ಕಿಸಾನ್ ಸಮ್ಮಾನ್, ರಕ್ಷಣಾ ಕ್ಷೇತ್ರದಲ್ಲಿ ಪ್ರಗತಿ, ಆಯುಷ್ಮಾನ್ ಭಾರತ್ ಅಂತಹ ಯೋಜನೆಗಳನ್ನು ನೀಡಿ ದೇಶದ ಜನತೆಗೆ ಶಾಶ್ವತ ಗ್ಯಾರಂಟಿ ನೀಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ತಾಲೂಕಿನ ನಿಡನೇಗಿಲು ಗ್ರಾಮದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚನೆ ನಡೆಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದವರು ಗ್ಯಾರಂಟಿಗಳನ್ನು ನೀಡಿ, ಬಸ್ ದರ, ವಿದ್ಯುತ್ ದರ, ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲು ದರ ಹೆಚ್ಚಳ ಮಾಡಿ ಜನತೆಗೆ ಕಾಂಗ್ರೆಸ್‌ ಮೋಸ ಮಾಡುತ್ತಿದೆ ಎಂದು ದೂರಿದರು.ದೇಶದ ಮತ್ತಷ್ಟು ಪ್ರಗತಿಗೆ, ಐಕ್ಯತೆ ಸಮಗ್ರತೆ, ಎಲ್ಲ ವರ್ಗದ ಜನತೆಯ ಹಿತ ಕಾಪಾಡಲು ಬಿಜೆಪಿ ಬೆಂಬಲಿಸುವ ಮೂಲಕ ನಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಟಿಎಪಿಎಂಎಸ್ ಅಧ್ಯಕ್ಷ ಎಸ್ ಎಸ್. ಪಾಟೀಲ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೃಷ್ಠಿ ಪಾಟಿಲ, ಆರ್. ಎನ್. ಗಂಗೋಳ, ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಲಿಂಗರಾಜ ಚಪ್ಪರದಳ್ಳಿ, ರವಿಶಂಕರ ಬಾಳಿಕಾಯಿ, ಎನ್.ಎಂ.ಈಟೇರ, ಶಿವ್ಯನಾಯ್ಕ ಲಮಾಣಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರು ಇದ್ದರು.