ಸಾರಾಂಶ
- ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ । ಜಗಳೂರಲಿನಲ್ಲಿ ಕಾಂಗ್ರೆಸ್ ವೀರಶೈವ ಲಿಂಗಾಯತ ಬೆಂಬಲಿಗರ ಸಭೆ - - - ಕನ್ನಡಪ್ರಭ ವಾರ್ತೆ ಜಗಳೂರು
ಕಾಂಗ್ರೆಸ್ ಪಕ್ಷ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು, ತನ್ನದೇ ಆದ ಇತಿಹಾಸವನ್ನು ಹೊಂದಿದೆ. ನೆಹರು ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನರೇಂದ್ರ ಮೋದಿಗಿಲ್ಲ ಎಂದು ಅಖಿಲ ಭಾರತ ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.ಪಟ್ಟಣದ ತರಳುಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ವೀರಶೈವ ಲಿಂಗಾಯತ ಬೆಂಬಲಿಗರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಾಹರ ಮಾಡುವ ಪಕ್ಷ ಬಿಜೆಪಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸುಖವಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಿದೆ. ರೈತರ, ಬಡವರ ದೀನ ದಲಿತರ ಹಿತವನ್ನು ಕಾಪಾಡುವಂತ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.ಡಾ.ಪ್ರಭಾರನ್ನು ಗೆಲ್ಲಿಸಿ:
ಪ್ರಭಾ ವಿದ್ಯಾವಂತೆ, ಬಹುಭಾಷೆ ಬಲ್ಲವರು. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿಲ್ಲ. ಹಾಗಾಗಿ, ಲಿಂಗಾಯಿತ ಸಮುದಾಯದ ಜೊತೆ ಅನ್ಯ ಸಮುದಾಯದವರು ಒಂದಾಗಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿಕೊಳ್ಳಬೇಕಾಗಿದೆ. ಕೋವಿಡ್ ಸಮಯದಲ್ಲಿ ಎಸ್.ಎಸ್. ಕೇರ್ ಮೂಲಕ ಉಚಿತ ಲಸಿಕೆ ನೀಡುವಂಥ ಕೆಲಸ ಮಾಡಲಾಗಿದೆ. ಈ ಟ್ರಸ್ಟ್ ಹೆಸರಿಗೆ ₹೨೦ ಕೋಟಿ ಠೇವಣಿ ಇಟ್ಟಿದ್ದು, ಇದರಿಂದ ಬರುವ ಬಡ್ಡಿಯಿಂದ ಬಡವರಿಗೆ ಉಚಿತವಾಗಿ ಚಿಕಿತ್ಸೆಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಮಲ್ಲಿಕಾರ್ಜುನ್ ಆಗ ಸಚಿವರಾಗಿದ್ದಾಗ ೧೫ ಸಾವಿರ ಆಶ್ರಯ ಮನೆಗಳನ್ನು ತಂದಿದ್ದರು. ಕುಂದುವಾಡ ಕೆರೆ ಅಭಿವೃದ್ಧಿ ಸೇರಿದಂತೆ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದರು. ನಾನು ಈಗಾಗಲೇ ೮ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದು, ಜಗಳೂರಿಗೆ ಮೂರನೇ ಬಾರಿ ಬಂದಿದ್ದೇನೆ. ಮಾವನವರು ೬೫ ಸಂಸ್ಥೆಗಳನ್ನು ಮಕ್ಕಳಂತೆ ಬೆಳೆಸುತ್ತಿದ್ದು, ಒಟ್ಟು ೫ ರಿಂದ ೬ ಸಾವಿರ ಜನ ಜೀವನ ಕಟ್ಟಿಕೊಂಡಿದ್ದಾರೆ. ೨೦ ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದೇವೆ. ಉಚಿತ ಡಯಾಲಿಸಿಸ್ ಸೆಂಟರ್ ತೆರೆದು ೧೬ ಸಾವಿರ ಜನರಿಗೆ ಡಯಾಲಿಸಿಸ್ ಮಾಡಲಾಗಿದೆ. ದಾವಣಗೆರೆಯ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸಲಾಗಿದೆ ಎಂದ ಅವರು, ತಮ್ಮನ್ನು ಬೆಂಬಲಿಸಲು ಕೋರಿದರು.
ಶಾಸಕ ಬಿ.ದೇವೇಂದ್ರಪ್ಪ, ವೈದ್ಯ ರವಿಕುಮಾರ್, ಅಥಣಿ ವೀರಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಸಗೋಡು ಜಯಸಿಂಹ, ಅಣಬೇರು ರಾಜಣ್ಣ ಮಾತನಾಡಿದರು.ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಂಬತ್ತಳ್ಳಿ ಮಂಜಣ್ಣ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಶಿವನಗೌಡ, ಮಾಜಿ ಶಾಸಕ ಗುರುಸಿದ್ದನ ಗೌಡ, ಮೊಬೈಲ್ ಮಂಜಣ್ಣ, ಕೆ.ಪಿ.ಪಾಲಯ್ಯ, ಲಕ್ಷ್ಮೀ ಬಸ್ ಮಾಲೀಕ ವೀರಣ್ಣ ಗೌಡ, ಎಂ.ಎಸ್. ಪಾಟೇಲ್, ಬಂಜಾರ ಸಮಾಜ ಅಧ್ಯಕ್ಷ ಪುರುಷೋತ್ತಮ ನಾಯ್ಕ, ಮುಖಂಡರಾದ ಮಹೇಶ್ವರಪ್ಪ, ಯು.ಜಿ. ಶಿವಕುಮಾರ್, ಮಲ್ಲಿಕಾರ್ಜುನ್ ಬಾಬು, ಗೋಡೆ ಪ್ರಕಾಶ್, ಗೌರಿಪುರ ಶಿವಣ್ಣ ಮತ್ತಿತರರು ಹಾಜರಿದ್ದರು.
- - - -25ಜೆಎಲ್ಆರ್2:ಜಗಳೂರು ಪಟ್ಟಣದ ತರಳುಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ವೀರಶೈವ ಲಿಂಗಾಯತರ ಬೆಂಬಲಿಗರ ಸಭೆಯನ್ನು ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು.