ಸಾರಾಂಶ
ಮೋದಿ ಅವರಿಗೆ ತಮ್ಮ ಪತ್ನಿಯ ಕರಿಮಣಿಯನ್ನೇ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಬೇರೆಯವರ ಕರಿಮಣಿ ಬಗ್ಗೆ ಮಾತನಾಡುತ್ತಾರೆ. ಯಾವ ನೈತಿಕತೆ ಇವರಿಗಿದೆ.
ಹುಬ್ಬಳ್ಳಿ:
ತನ್ನ ಹೆಂಡತಿಯ ಕರಿಮಣಿ ಉಳಿಸಿಕೊಳ್ಳಲು ನರೇಂದ್ರ ಮೋದಿಗೆ ಆಗಲಿಲ್ಲ. ಮತ್ತೊಬ್ಬರ ಕರಿಮಣಿ ಬಗ್ಗೆ ಮಾತನಾಡುತ್ತಾರೆ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿದರು.ಇಲ್ಲಿನ ಸೆಟ್ಲಮೆಂಟ್, ಗಂಗಾಧರ ನಗರ, ಬನ್ನಿಮಹಾಂಕಾಳಿ ಕಾಲನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಬೃಹತ್ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.
ಮೋದಿ ಅವರಿಗೆ ತಮ್ಮ ಪತ್ನಿಯ ಕರಿಮಣಿಯನ್ನೇ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಬೇರೆಯವರ ಕರಿಮಣಿ ಬಗ್ಗೆ ಮಾತನಾಡುತ್ತಾರೆ. ಯಾವ ನೈತಿಕತೆ ಇವರಿಗಿದೆ ಎಂದು ಪ್ರಶ್ನಿಸಿದರು.ಮೋದಿ ಆಡಳಿತಗಾರನಲ್ಲ, ಪ್ರಚಾರ ಪ್ರೀಯ, ಸುಳ್ಳುಗಾರ. ನೀಡಿದ ಭರವಸೆ ಈಡೇರಿಸದ ಮೋಸಗಾರ. ನರೇಂದ್ರ ಮೋದಿ ಪ್ರಧಾನಿಯಾಗಲು ಅರ್ಹನೇ ಅಲ್ಲ ಎಂದು ಟೀಕಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿಗೂ ಮುನ್ನ ಮುಂದಿನ ಜನ್ಮವಿದ್ದರೇ ಮುಸ್ಲಿಮನಾಗಿ ಹುಟ್ಟುತ್ತೇನೆಂದು ಹೇಳಿದ್ದರು. ಬಿಜೆಪಿ ಜೊತೆ ಮೈತ್ರಿ ಬಳಿಕ ನರೇಂದ್ರ ಭಾಯ್ ಭಾಯ್ ಎಂದು ಆಲಂಗಿಸುತ್ತಿದ್ದಾರೆ. ಈ ಮೂಲಕ ತಮ್ಮ ಜಾತ್ಯತೀತ ಮನಸ್ಥಿತಿ ಎಂತಹದ್ದು ಎಂದು ತೋರಿಸುತ್ತಿದ್ದಾರೆ. ಗೋದ್ರಾ ಘಟನೆಯಲ್ಲಿ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗಡಿಪಾರು ಮಾಡಲಾಗಿತ್ತು ಎಂದರು.ಶಾಸಕ ಪ್ರಸಾದ ಅಬ್ಬಯ್ಯ, ಅಭ್ಯರ್ಥಿ ವಿನೋದ ಅಸೂಟಿ ಮತಯಾಚನೆ ಮಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಹುಡಾ ಮಾಜಿ ಅಧ್ಯಕ್ಷರ ಅನ್ವರ್ ಮುಧೋಳ, ಮುಖಂಡರಾದ ಶಫಿ ಮುದ್ದೇಬಿಹಾಳ, ಮಜರ್ ಖಾನ್, ಯೂಸೂಫ್ ಸವಣೂರ, ಪಾಲಿಕೆ ಸದಸ್ಯರಾದ ಮಂಜುಳಾ ಶಾಮ ಜಾಧವ ಸೇರಿದಂತೆ ಹಲವರಿದ್ದರು.