ಜಿಎಸ್ಟಿಟಿ ಮೂಲಕ ಜನತೆಯ ಚರ್ಮ ಸುಲಿದ ಮೋದಿ

| Published : Sep 28 2025, 02:00 AM IST

ಸಾರಾಂಶ

ಕೇಂದ್ರ ಸರ್ಕಾರ ೨೦೧೬ರಲ್ಲಿ ಜಿಎಸ್‌ಟಿಯನ್ನು ಜಾರಿಗೆ ತಂದು ಶೇ ೨೮ ಶೇ ೧೮ ಶೇ ೧೨ ರಷ್ಟು ತೆರಿಗೆಯನ್ನು ವಿಧಿಸುವುದರ ಮೂಲಕ ಸಾಮಾನ್ಯ ಜನರನ್ನು ಸುಲಿಗೆ ಮಾಡಿತು, ಇದನ್ನು ಅವರು ೯ ವರ್ಷಗಳಿಂದ ಜನರಿಂದ ಮಾಡಿದ ಸುಲಿಗೆಯನ್ನು ಜನರಿಗೆ ಹಿಂದಿರುಗಿಸುತ್ತಾರೆಯೇ. ಆದರೆ ಈಗ ಜಿಎಸ್‌ಟಿ ಕಡಿಮೆ ಮಾಡಿ ರಾಜ್ಯ ಸರ್ಕಾರಗಳಿಗೆ ಬರುತ್ತಿದ್ದ ಆದಾಯಕ್ಕೆ ಧಕ್ಕೆ ತಂದಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಜಿಎಸ್‌ಟಿಯನ್ನು ಮೊದಲು ಜಾರಿಗೆ ಮಾಡಲು ಹೊರಟವರು ಕಾಂಗ್ರೆಸ್‌ನ ಮಾಜಿ ಪ್ರಧಾನಿ ಮನ್‌ಮಹೋನ್‌ಸಿಂಗ್. ಆದರೆ ಅದನ್ನು ಜಾರಿಗೆ ತಂದಿದ್ದು ಪ್ರಧಾನಿ ನರೇಂದ್ರಮೋದಿ. ೯ ವರ್ಷಗಳ ಅವಧಿಯಲ್ಲಿ ಶೇ. 18ರಿಂದ 28ರಷ್ಟು ತೆರಿಗೆ ವಿಧಿಸಿ ಜನರ ಚರ್ಮವನ್ನು ಸುಲಿದು ಹಣ ಸಂಗ್ರಹಣೆ ಮಾಡಿದರೆಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಆರೋಪಿಸಿದರು.

ತಾಲೂಕಿನ ಬಂಗಾರಪೇಟೆಯಿಂದ ಬಾಗೇಪಲ್ಲಿಗೆ ರಾಜ್ಯ ಹೆದ್ದಾರಿ ೫ರಲ್ಲಿ ರಸ್ತೆ ಸುರಕ್ಷತಾ ಗ್ರಾಮದಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಒಟ್ಟು ೮.೪೭ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ, ತಾವು ಶಾಸಕನಾಗಿ ಮಂತ್ರಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದು ಕೇವಲ ಮಾತಿನ ಮೂಲಕ ಹೇಳುತ್ತಿಲ್ಲ ಬದಲಾಗಿ ಕಾರ್ಯರೂಪದಲ್ಲಿ ತಾವು ನೋಡಬಹುದಾಗಿದೆ ಎಂದರು.

ಜನಸಾಮಾನ್ಯರ ಸುಲಿಗೆ

ಕೇಂದ್ರ ಸರ್ಕಾರ ೨೦೧೬ರಲ್ಲಿ ಜಿಎಸ್‌ಟಿಯನ್ನು ಜಾರಿಗೆ ತಂದು ಶೇ ೨೮ ಶೇ ೧೮ ಶೇ ೧೨ ರಷ್ಟು ತೆರಿಗೆಯನ್ನು ವಿಧಿಸುವುದರ ಮೂಲಕ ಸಾಮಾನ್ಯ ಜನರನ್ನು ಸುಲಿಗೆ ಮಾಡಿತು, ಇದನ್ನು ಅವರು ೯ ವರ್ಷಗಳಿಂದ ಜನರಿಂದ ಮಾಡಿದ ಸುಲಿಗೆಯನ್ನು ಜನರಿಗೆ ಹಿಂದಿರುಗಿಸುತ್ತಾರೆಯೆಂದು ಪ್ರಶ್ನಿಸಿದರು. ಆದರೆ ಈಗ ಜಿಎಸ್‌ಟಿ ಕಡಿಮೆ ಮಾಡಿ ರಾಜ್ಯ ಸರ್ಕಾರಗಳಿಗೆ ಬರುತ್ತಿದ್ದ ಆದಾಯ ಕಡಿಮೆಯಾಗಲು ಕಾರಣರಾಗಿದ್ದು ಇದರಿಂದ ಅಭಿವೃದ್ಧಿಗೆ ತೊಡಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಸೆಸ್ ಮೂಲಕ ತನ್ನ ಪಾಲಿಗೆ ಬರಬೇಕಾದ ಹಣವನ್ನು ವಸೂಲಿ ಮಾಡಿಕೊಳ್ಳುತ್ತಿದೆಯೆಂದು ಆರೋಪಿಸಿದರು.

ಮಸ್ತೇನಹಳ್ಳಿ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಎಕರೆಯಲ್ಲಿ ೨೫೦ ಮಾವಿನ ಗಿಡಗಳನ್ನು ನೆಟ್ಟು ಒಂದು ಮಾವಿನ ಗಿಡಕ್ಕೆ ೨೫ಸಾವಿರ ಹಣವನ್ನು ಕೆಐಡಿಬಿಐಯಿಂದ ಪಡೆದವರು ಅವರ ಸಹಚರರೇ ಹೊರತು ನಾವಲ್ಲವೆಂಬುದನ್ನು ಮೊದಲು ತಿಳಿಯಬೇಕು, ಕೈಗಾರಿಕಾ ಪ್ರದೇಶದ ಅಧಿಸೂಚನೆಯಾದ ಮೇಲೆ ಕೆಲ ಅಧಿಕಾರಿಗಳೊಂದಿಗೆ ಶಾಮೀಲಾಗಿ ಅವರ ಕಣ್ಣ ಕೆಳಗೆ ನಡೆದಿರುವ ಅವ್ಯವಹಾರವಾಗಿದ್ದು ಅದನ್ನು ಅವರು ಮಾತನಾಡುತ್ತಿಲ್ಲ ಎಂದರು.

ದಲ್ಲಾಳಿಗಳನ್ನು ಸೃಷ್ಟಿ?

ಸಮಸ್ಯೆಗಳು ಸೃಷಿಯಾದಾಗ ಅದನ್ನು ಪರಿಹರಿಸಲು ಯಾವುದೇ ಕಾರ್ಯ ಕೈಗೊಳ್ಳಲಿಲ್ಲ. ದಲ್ಲಾಳಿಗಳನ್ನು ಸೃಷ್ಟಿ ಮಾಡಿದ್ದು ಇವರೇ. ಇಲ್ಲಿನ ಮಾಜಿ ಶಾಸಕರು ಧ್ವನಿಗೂಡಿಸಿದರೆ ಚಿಕ್ಕಬಳ್ಳಾಪುರದಲ್ಲಿ ಸಂಸದ ಪ್ರತಿಧ್ವನಿಯನ್ನು ಗೂಡಿಸಿದ್ದಾರೆ. ಒಂದು ಎಕರೆ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ, ಇವರು ರಾತ್ರಿ ಸಂಚಾರಿಯಾಗಿದ್ದು, ಕಮಿಷನ್‌ಗಾಗಿ ಮಾಡುತ್ತಿದ್ದಾರೆಂದು ಹೇಳುತ್ತಾರೆ. ಆದರೆ ಅವರಂತೆ ಕಮಿಷನ್ ವ್ಯವಹಾರ ಮಾಡುವುದು ಮತ್ತು ರಾತ್ರಿ ರೆಸಾರ್ಟ್‌ಗಳಲ್ಲಿ ಕಡತಗಳಿಗೆ ಸಹಿ ಮಾಡಿಸುವ ವ್ಯವಹಾರ ನಮಗೆ ತಿಳಿಸಿದಲ್ಲವೆಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ತಾ.ಪಂ. ಇಒ ಎಸ್.ಆನಂದ್, ತಾಲ್ಲೂಕು ಗ್ಯಾರಂಟಿ ಯೋಜನಾ ಅಧ್ಯಕ್ಷ ಮುನಿನಾರಾಯಣಪ್ಪ, ಕೋನಪಲ್ಲಿ ಶಿವಾರೆಡ್ಡಿ, ಕೃಷ್ಣಮೂರ್ತಿ, ಈರುಳ್ಳಿ ಶಿವಣ್ಣ, ಏಜಾಜ್, ಟಿಎಪಿಎಂಸಿ ಅಧ್ಯಕ್ಷ ನಾಗೇಶ್, ಮಲ್ಲಿಕಾರ್ಜುನಪುರ ಆಂಜನೇಯರೆಡ್ಡಿ, ಮಸಲಹಳ್ಳಿ ಶಿವಾರೆಡ್ಡಿ, ಮುಖಂಡರಾದ ಉಮೇಶ್, ಶ್ರೀನಿವಾಸ್, ರವಿರೆಡ್ಡಿ, ಲೋಕೇಶ್, ಮೂರ್ತಿ, ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.