ಸಾರಾಂಶ
ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಗೆಲುವು ನಿಶ್ಚಿತ. ಮೋದಿ ವಿಶ್ವನಾಯಕರಾಗುವುದು ಖಚಿತ. ಜನ ಸೇವೆ ಉಚಿತ ಎಂದು ತರೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿ ಎಸ್ ಅಧ್ಯಕ್ಷ ಎಂ.ನರೇಂದ್ರ ಹೇಳಿದ್ದಾರೆ.
ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ
ಕನ್ನಡಪ್ರಭ ವಾರ್ತೆ, ತರೀಕೆರೆಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಗೆಲುವು ನಿಶ್ಚಿತ. ಮೋದಿ ವಿಶ್ವನಾಯಕರಾಗುವುದು ಖಚಿತ. ಜನ ಸೇವೆ ಉಚಿತ ಎಂದು ತರೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿ ಎಸ್ ಅಧ್ಯಕ್ಷ ಎಂ.ನರೇಂದ್ರ ಹೇಳಿದ್ದಾರೆ.ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೇಶ ಸಂಪೂರ್ಣವಾಗಿ ಸಮಗ್ರ ಕ್ಷೇತ್ರದಲ್ಲಿ ಅಭಿವೃದ್ಧಿಗೊಳ್ಳಬೇಕಾದರೆ ಏನ್ ಡಿ ಎ ಮೈತ್ರಿಕೂಟದ ಸರ್ಕಾರದಿಂದ ಮಾತ್ರ ಸಾಧ್ಯವಾಗಲಿದ್ದು ಅದರಂತೆ ಈ ಬಾರಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಗೆಲುವು ನಿಶ್ಚಿತ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಗ್ಯಾರಂಟಿ ನೀಡಿರುವುದಕ್ಕೆ ಮಹಿಳೆಯರು ಮತ ಹಾಕಿ ಲೆಕ್ಕ ಚುಕ್ತಾ ಮಾಡಿಕೊಂಡಿದ್ದು ಅಧಿಕಾರ ಇರುವವರೆಗೂ ಗ್ಯಾರಂಟಿ ನೀಡುವುದು ಅವರ ಕರ್ತವ್ಯ. ಸಂಸತ್ ಚುನಾವಣೆಯಲ್ಲಿ ದೇಶದ ಹಿತವನ್ನು ಕಾಪಾಡುವ ಸಲುವಾಗಿ ದೇಶಕ್ಕಾಗಿ ಮತ ಎಂಬ ಭಾವನೆಯಿಂದ ಮೋದಿಜಿಯವರನ್ನು ಬೆಂಬಲಿಸುವುದು ಜನರ ತೀರ್ಮಾನವಾಗಿದ್ದು ಅದರಂತೆ, ಈ ಕ್ಷೇತ್ರದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವು ನಿಶ್ಚಿತವಾಗಿದೆ. ಮೋದಿಜಿ ಅವರು ವಿಶ್ವ ನಾಯಕರು ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್‌ನ ಎಲ್ಲಾ ಕಾರ್ಯಕರ್ತರು ಕೋಟಾ ಶ್ರೀನಿವಾಸ್ ಪೂಜಾರಿಯನ್ನು ಬೆಂಬಲಿಸಿ ಚುನಾವಣೆ ಮಾಡಲಿದ್ದು ಯಾವುದೇ ಕಾರಣಕ್ಕೂ ನಮ್ಮ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ನಮ್ಮ ಪದಾಧಿಕಾರಿಗಳೊಂದಿಗೆ ಚುನಾವಣೆ ದಿನದಂದು ಪ್ರಚಾರ ನಡೆಸಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗಿಂತ ಅಧಿಕ ಮತಗಳನ್ನು ಬರುವಂತೆ ಪ್ರಚಾರ ನಡೆಸಲಾಗಿದೆ ಎಂದು ತಿಳಿಸಿದರು. ಪಕ್ಷದ ಮುಖಂಡ ರಂಗೇನಹಳ್ಳಿ ದೇವೇಗೌಡರು, ಮಂಜುನಾಥ್ ಕಾಶಯ್ಯ, ಪಾಂಡುರಂಗ ಜಾದವ್ ಮತ್ತಿತರರು ಉಪಸ್ಥಿತರಿದ್ದರು.24ಕೆಟಿಆರ್.ಕೆ.4ಃತರೀಕೆರೆಯಲ್ಲಿ ಜೆಡಿಎಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತರೀಕೆರೆ ಕ್ಷೇತ್ರದ ಜೆ.ಡಿ.ಎಸ್. ಅಧ್ಯಕ್ಷ ಎಂ.ನರೇಂದ್ರ ಮಾತನಾಡಿದರು.